Advertisements

ನನ್ನ ಮಕ್ಕಳನ್ನ ದೇವರೇ ಕಾಪಾಡಬೇಕು ಎಂದು ಮೊರೆಯಿಟ್ಟ ನಟ ರವಿಶಂಕರ್ !

Cinema

ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊರೋನಾ ಸೋಂಕಿತರು ಹೆಚ್ಚಾದ ಹಿನ್ನಲೆಯಲ್ಲಿ, ಈಗಾಗಲೇ ಬೆಂಗಳೂರಿನ ಹಲವು ಏರಿಯಾಗಳನ್ನ ಸೀಲ್ ಡೌನ್ ಮಾಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ಸಮುದಾಯದ್ ಮಟ್ಟದಲ್ಲಿ ಕೊರೋನಾ ಸ್ಪೋಟವಾಗಿದೆಯಾ ಎಂಬ ಭೀತಿ ಹೆಚ್ಚಾಗಿದೆ. ಈಗ ಕನ್ನಡದ ಕಿರುತೆರೆ ಹಾಗೂ ಬೆಳ್ಳಿತೆರೆಯ ನಟ ರವಿಶಂಕರ್ ವಾಸ ಮಾಡುತ್ತಿರುವ ಎದುರುಗಡೆಯ ಮನೆಯವರಿಗೂ ಕೊರೋನಾ ವಕ್ಕರಿಸಿದೆ.

Advertisements

ಇನ್ನು ಈಗ ಇದೆ ವಿಚಾರವಾಗಿ ನಟ ರವಿಶಂಕರ್ ರವರು ನನ್ನ Apartment ನಲ್ಲಿ ನನ್ನ ಎದುರು ಮನೆಗೆ ವಕ್ಕರಿಸಿತು ಕರೋನಾ. ನನ್ನ ಮಕ್ಕಳಿರುವ ಮನೆಯನ್ನ ಆ ದೇವರೆ ಕಾಪಾಡಬೇಕು. ಇನ್ನು ೧೪ ದಿನಗಳ ಕಾಲ ಮನೆಯ ಬಾಗಿಲನ್ನ ತೆಗೆಯುವಂತಿಲ್ಲ. Quarantin ಮಾಡಿದ್ದಾರೆ. ನಟ ಸುದೀಪ, ಗಣಪ (ಗಣೇಶ್), ಸೃಜಾನ (ಸೃಜನ್ ಲೋಕೇಶ್), ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಬಾ ಅಂದರು. ಇದು ಗೆಳೆತನ ಅಂದ್ರೆ. ವಿಚಾರಿಸಿದ , ಸಂತೋಷ್ ಆನಂದ್, ರಘುರಾಮ್ ವರಿಗೆಲ್ಲಾ ಧನ್ಯವಾದಗಳು ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಇದರ ನಡುವೆಯೇ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೊರೋನಾ ಸೋಂಕು ತಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಇದರ ಬಗ್ಗೆ ಟ್ವೀಟ್ ಮಾಡಿದ್ದ ವಿಜಯಲಕ್ಷ್ಮಿಯವರು ನನಗೆ ಕೊರೋನಾ ಸೋಂಕು ತಗಲಿಲ್ಲ, ನಾನು ಆರೋಗ್ಯವಾಗಿ ಚೆನ್ನಾಗಿಯೇ ಇದ್ದೇನೆ. ಇದೆಲ್ಲಾ ಸುಳ್ಳು ಸುದ್ದಿ, ನಂಬಬೇಡಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.