ನಮಸ್ತೇ ಸ್ನೇಹಿತರೆ, ಕಷ್ಟಪಟ್ಟು ಸಾವಿರಾರು ಕೋಟಿ ಸಂಪಾದಿಸಿದ ತಂದೆಯನ್ನು ಬೀದಿಗೆ ತಳ್ಳಿದ್ದಾನೆ ಮಗ.. ಭಾರತದ ದೊಡ್ಡ ಶ್ರೀಮಂತರಲ್ಲಿ ಒಬ್ಬರಾಗಿದ್ದ ಇವರು ಈಗ ಬೀದಿಗೆ ಬಂದು ವಾಸ ಮಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಅವರು ಯಾರು ಗೊತ್ತಾ? ವಿಜಯ್ ಪತ್ ಸಿಂಗಾನಿಯ ರೇಮಂಡ್ ಬಟ್ಟೆ ಕಂಪನಿಯನ್ನು ಸ್ಥಾಪಿಸಿ ಬಟ್ಟೆಯಲ್ಲಿ ಸಾವಿರಾರು ಕೋಟಿ ಸಂಪಾದಿಸಬಹುದು ಎಂದು ತೋರಿಸಿದ ಬುದ್ದಿವಂತ ಬ್ಯುಸಿನೆಸ್ ಮ್ಯಾನ್.. ಒಂದು ಕಾಲದಲ್ಲಿ ಯಾವ ಬಟ್ಟೆ ಅಂಗಡಿಯಲ್ಲಿ ನೋಡಿದರು ರೇಮಂಡ್ ಬಟ್ಟೆಗಳೇ ರಾರಾಜಿಸುತ್ತಿದ್ದವು. ಕಂಪನಿಯನ್ನು ಅಷ್ಟು ಉನ್ನತ ಸ್ಥಾನಕ್ಕೆ ತರಲು ವಿಜಯ್ ಪತ್ ಸಿಂಗಾನಿಯ ತುಂಬಾ ಕಷ್ಟಪಟ್ಟಿದ್ದಾರೆ..
[widget id=”custom_html-3″]

ಹಗಲು ರಾತ್ರಿ ಎನ್ನದೇ ಶ್ರಮಿಸಿ ಸಾವಿರಾರು ಕೋಟಿ ಸಂಪಾದಿಸಿ 36 ಅಂತಸ್ತಿನ ಮನೆ ಕಟ್ಟಿದರು. ದೇಶದ ಟಾಪ್ ಟೆನ್ ಶ್ರೀಮಂತರಲ್ಲಿ ಒಬ್ಬರಾದ್ರು.. ಆದರೆ ಈಗ ಅವರ ಸ್ಥಿತಿ ಏನು ಗೊತ್ತಾ.. ಮಗನ ಮೇಲೆ ಅತಿಯಾದ ಪ್ರೀತಿ ಬೆಳಸಿಕೊಂಡಿದ್ದ ವಿಜಯ್ ಪತ್ ಸಿಂಗಾನಿಯ ಸ್ವಲ್ಪ ವಯಸ್ಸಾದಂತೆ ತನ್ನ ಆಸ್ತಿ, ಮನೆ, ಶೇರ್ ಎಲ್ಲವನ್ನು ತನ್ನ ಮಗ ಗೌತಮ್ ಹೆಸರಿಗೆ ಬರೆದರು.. ಹಾಗೆ ರೇಂಮಡ್ ಕಂಪನಿಯ ಉಸ್ತುವಾರಿಯನ್ನು ಕೂಡ ಮಗ ಗೌತಮ್ ಕೈಗೆ ಕೊಟ್ಟರು. ಆದರೆ ಈಗ ಗೌತಮ್ ತನ್ನ ತಂದೆ ವಿಜಯ್ ಪತ್ ಸಿಂಗಾನಿಯ ಅವರನ್ನು ಮನೆಯಿಂದ ಹಾಗು ಕಂಪನಿಯಿಂದ ಹೊರಹಾಕಿದ್ದಾರೆ.
[widget id=”custom_html-3″]

ವಿಧಿಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಜಯ್ ಪತ್ ಸಿಂಗಾನಿಯ ಅವರಿಗೆ ಈಗ ಮನೆಯ ಬಾಡಿಗೆ ಕಟ್ಟಲು ಸಹ ಆಗುತ್ತಿಲ್ಲಾ.. ಅವರ ಕೈಯಲ್ಲಿ ಬಿಡಿಕಾಸು ಇಲ್ಲದೇ ಪರದಾಡುತ್ತಿದ್ದಾರೆ. ಕೋರ್ಟ್ ಮೆಟ್ಟಿಲೇರಿರುವ ವಿಜಯ್ ಪತ್ ಸಿಂಗಾನಿಯ ತಮಗೆ 36 ಅಂತಸ್ತಿನ ಜೆಕೆ ಹೌಸ್ ನಲ್ಲಿ ಒಂದು ಡ್ಲೂಪೆಕ್ಸ್ ಮನೆ, ಕಾರು, ಹಾಗು ಪ್ರತೀ ತಿಂಗಳು ಎರಡು ಲಕ್ಷ ಮಗನಿಂದ ಕೊಡಿಸುವಂತೆ ಕೇಳಿಕೊಂಡಿದ್ದಾರೆ.. ಎಂಥ ಸ್ಥಿತಿ ನೋಡಿ ಪಾಪ.. ಸಾವಿರಾರು ಕೋಟಿ ಒಡೆಯ ಈಗ ಬಿಡುಗಾಸಿಗಾಗಿ ಪರದಾಡುತ್ತಿದ್ದಾರೆ. ವಿಜಯ್ ಪತ್ ಸಿಂಗಾನಿಯ ಅವರು ಕೋರ್ಟ್ ನಲ್ಲಿ ಗೆಲ್ಲಬೇಕು ಎನ್ನುವವರು ನಿಮ್ಮ ಅನಿಸಿಕೆ ತಿಳಿಸಿ.