Advertisements

ಪುತ್ರ ವ್ಯಾಮೋಹದಿಂದಾಗಿ ಕೋಟ್ಯಾಂತರ ಆಸ್ತಿಯೆನ್ನ ಮಗನಿಗೆ ಬರೆದುಕೊಟ್ಟ ತಂದೆ ! ಬಳಿಕ ಆಗಿದ್ದೇನು ಗೊತ್ತಾ ?

Kannada Mahiti

ನಮಸ್ತೇ ಸ್ನೇಹಿತರೇ, ಮಕ್ಕಳ ಮೇಲೆ ಪ್ರೀತಿ ಇರಬೇಕು ಆದರೆ ವ್ಯಮೋಹ ಇರಬಾರದು. ಇದೆ ಪುತ್ರ ವ್ಯಾಮೋಹದಿಂದಾಗಿ ಧೃತರಾಷ್ಟ್ರ ತಾನು ಬದುಕಿರುವಾಗಲೇ ತನ್ನ ಮಕ್ಕಳನ್ನೆಲ್ಲಾ ಕಳೆದುಕೊಂಡ ಕತೆಯನ್ನ ಮಹಾಭಾರತದಲ್ಲಿ ಕೇಳಿದ್ದೇವೆ. ಸ್ನೇಹಿತರೆ ಇದಕ್ಕೆ ನಿದರ್ಶನವೆಂಬಂತೆ ತನ್ನ ಪುತ್ರ ವ್ಯಾಮೋಹದಿಂದಾಗಿ ತನ್ನ ಎಲ್ಲಾ ಸಾವಿರಾರು ಕೋಟಿ ಆಸ್ತಿಯನ್ನೆಲ್ಲಾ ತನ್ನ ಮಗನ ಹೆಸರಿಗೆ ಬರೆದು ಬಳಿಕ ಆಸ್ತಿಯೆಲ್ಲಾ ತನ್ನ ಹೆಸರಿಗೆ ಬಂದ ಬಳಿಕ ಮಗನೇ ತನ್ನ ಅಪ್ಪನನ್ನ ಹೊರಗೆ ಹಾಕಿ ತಂದೆಯನ್ನ ಅನಾಥ ಮಾಡಿದ ಕತೆ ಇದು. ಸ್ನೇಹಿತರೆ ಇದು ಯಾವುದೊ ಸಿನಿಮಾ ಕತೆಯಲ್ಲ. ಹೀಗೆ ತನ್ನ ಮಗನಿಂದ ಅನಾತಗೊಂಡ ತಂದೆಯ ಹೆಸರು ವಿಜಯ್ ಪಥ್ ಸಿಂಘಾನಿಯಾ ಎಂದು.

Advertisements

ಹೌದು, ನಾವು ನೀವೆಲ್ಲಾ ಹಲವಾರು ವರ್ಷಗಳನ್ನು ನಮ್ಮೆಲ್ಲ ಹಬ್ಬ ಹರಿದಿನ, ಮದುವೆ ಕಾರ್ಯಕ್ರಮ, ಪಾರ್ಟಿಗಳಿಗೆ ವೇಷಭೂಷಣವಾಗಿ ಬಳಸುತ್ತಿದ್ದ ರೈಮಂಡ್ ಬಟ್ಟೆ. ಇನ್ನು ಒಂದು ಕಾಲಕ್ಕೆ ರೈಮಂಡ್ ಎಂದರೆ ಈ ದೇಶದ ಶ್ರೀಮಂತರು ಧರಿಸುವ ಬಟ್ಟೆ ಎಂದು ಹೇಳಲಾಗುತ್ತಿತ್ತು. ಇಷ್ಟರ ಮಟ್ಟಿಗೆ ರೈಮಂಡ್ ಬಟ್ಟೆಯನ್ನ ಬ್ರಾಂಡ್ ಮಾಡಿದ್ದು ಇದೆ ವಿಜಯ್ ಪಥ್ ಸಿಂಘಾನಿಯಾ. 1960ರ ಆ ಕಾಲದಲ್ಲೇ ಮಲಬಾರ್ ಹಿಲ್ಸ್ ನಲ್ಲಿ ಹದಿನಾಲ್ಕು ಅಂತಸ್ತಿನ ಮನೆ ಕಟ್ಟಿ ಹತ್ತು ಸಾವಿರ ಕೋಟಿಗಿಂತ ಹೆಚ್ಚು ಟರ್ನ್ ಓವರ್ ಮಾಡಿದ ಹೆಗ್ಗಳಿಕೆ ಇದೆ ವಿಜಯ್ ಪಥ್ ಸಿಂಘಾನಿಯಾ ಅವರಿಗೆ ಸಲ್ಲುತ್ತದೆ.

ಸ್ನೇಹಿತರೆ, ರೈಮಂಡ್ ಬ್ರಾಂಡ್ ನ ಬಟ್ಟೆಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈಗ ಬಟ್ಟೆಗಳಲ್ಲಿ ನೂರಾರು ಬ್ರಾಂಡ್ ಗಳು ಬಂದಿದ್ದರೂ ಕಳೆದ ೫೦ ವರ್ಷಗಳಿಂದ ಮೆರೆದ ಏಕಮೇವ ಬ್ರಾಂಡ್ ಎಂದರೆ ಅದು ರೈಮಂಡ್. ಇಂತ ದೊಡ್ಡ ರೈಮಂಡ್ ಬ್ರಾಂಡ್ ನ ಸೃಷ್ಟಿಕರ್ತ ಈ ದಿನ ತನ್ನ ಪುತ್ರನ ಮೇಲಿದ್ದ ವ್ಯಾಮೋಹದಿಂದಾಗಿ ಇಂದು ಯಾವುದೊ ಒಂದು ಬಾಡಿಗೆ ಮನೆಯಲ್ಲಿ ಇದ್ದಾರೆ ಎಂದರೆ ನೀವು ನಂಬಲಿಕ್ಕಿಲ್ಲ. ಇನ್ನು ೧೯೬೦ರಲ್ಲಿ 16 ಅಂತಸ್ತಿನ ಮನೆ ಕಟ್ಟಿದ್ದ ವಿಜಯ್ ಪಥ್ ಸಿಂಘಾನಿಯಾ, ೨೦೦೭ರಲ್ಲಿ ಅದೇ ಮನೆಯನ್ನ ಕೆಡವಿ ಬರೋಬ್ಬರಿ ೩೬ ಅಂತಸ್ತಿನ ಮನೆಯನ್ನ ಕಟ್ಟುತ್ತಾರೆ. ಇನ್ನು ತನ್ನ ಮಗ ಗೌತಮ್ ಸಿಂಘಾನಿಯಾ ಮೇಲಿನ ವ್ಯಾಮೋಹದಿಂದಾಗಿ ತನ್ನ ಆಸ್ತಿಯೆನ್ನಲ್ಲಾ ಮಗನ ಹೆಸರಿಗೆ ಮಾಡಿಕೊಟ್ಟು ಬಿಡುತ್ತಾರೆ.

ಮನೆಯನ್ನು ಕೂಡ ತನ್ನ ಮಗನ ಹೆಸರಿಗೆ ಮಾಡಿಕೊಟ್ಟ ವಿಜಯ್ ಪಥ್ ಸಿಂಘಾನಿಯಾ ತನ್ನ ಕಂಪನಿಯ 36 ಪರ್ಸೆಂಟ್ ಷೇರುಗಳನ್ನು ಸಹ ಮಗ ಗೌತಮ್ ಸಿಂಘಾನಿಯಾ ಅವರ ಹೆಸರಿಗೆ ವರ್ಗಾವಣೆ ಮಾಡಿಬಿಡುತ್ತಾರೆ. ಇನ್ನು ಯಾವಾಗ ಎಲ್ಲಾ ತನ್ನ ಹೆಸರಿಗೆ ಬಂದಿತೋ ಆಗ ಮಗ ಗೌತಮ್ ಸಿಂಘಾನಿಯಾ ಅಸಲಿ ಮುಖ ಬಹಿರಂಗವಾಗುತ್ತದೆ. ತನ್ನ ತಂದೆಯನ್ನೇ ಮನೆಯಿಂದ ಹೊರಗಡೆ ಹಾಕುತ್ತಾನೆ. ಹೀಗೆ ಒಂದು ಕಡೆ ವಿಜಯ್ ಪಥ್ ಸಿಂಘಾನಿಯಾ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೆ, ಮತ್ತೊಂದು ಕಡೆ ವಿಜಯ್ ಪಥ್ ಸಿಂಘಾನಿಯಾ ಅವರ ಸಹೋದರ ಅಜಯ್ ಪಥ್ ಸಿಂಘಾನಿಯಾ ಹಾಗು ಅವರ ಪತ್ನಿ, ಇಬ್ಬರು ಮಕ್ಕಳು ತಮ್ಮ ತಮ್ಮ ಆಸ್ತಿಗಾಗಿ ನ್ಯಾಯಾಲಯದ ಮೊರೆ ಹೋಗುತ್ತಾರೆ.

ಸಂದರ್ಶನವೊಂದರಲ್ಲಿ ವಿಜಯ್ ಪಥ್ ಸಿಂಘಾನಿಯಾ ಹೇಳ್ತಾರೆ..ಒಂದು ಬ್ರಾಂಡ್ ನ್ನ ಸೃಷ್ಟಿ ಮಾಡಲಿಕ್ಕೆ ನಾನು ಹಲವಾರು ವರ್ಷಗಳ ನಿದ್ದೆ ಕಳೆದುಕೊಂಡೆ, ಶ್ರಮ ಪಟ್ಟೆ ಬಳಿಕ ಅದರ ಬ್ಯುಸಿನೆಸ್ ನ್ನ ದೊಡ್ಡದು ಮಾಡೋದಕ್ಕೆ ಮತ್ತೆ ಹಲವಾರು ವರ್ಷಗಳ ಕಾಲ ಕಷ್ಟ ಪಟ್ಟೆ. ಆದರೆ ನನ್ನ ಉದ್ಯಮದ ಜೀವನದಲ್ಲಿ ಯಶಸ್ಸನ್ನ ಕಂಡ ನಾನು, ನನ್ನ ಮಗನ ಅಸಲಿ ಮುಖ ಬಹಿರಂಗವಾದ ಮೇಲೆ ನನ್ನ ಸಾಂಸಾರಿಕ ಜೀವನದಲ್ಲಿ ಸೋತೆ. ಸಾವಿರಾರು ಕೋಟಿ ಆಸ್ತಿಯ ಒಡೆಯನಾಗಿ ಮೆರೆದ ವಿಜಯ್ ಪಥ್ ಸಿಂಘಾನಿಯಾ ಈಗ ಯಾವುದೊ ಒಂದು ಮಧ್ಯಮ ವರ್ಗದಲ್ಲಿ ತಮ್ಮ ಜೀವನವನ್ನ ಕಳೆಯುತ್ತಿದ್ದಾರೆ.

ಇನ್ನು ಇವರು ಇಂದಿನ ತಂದೆ ತಾಯಿಗಳಿಗೆ ಹೇಳ್ತಾರೆ..ನೀವು ನಿಮ್ಮ ಮಕ್ಕಳನ್ನ ಪ್ರೀತಿಸಿ, ಆದರೆ ನಿಮ್ಮ ಎಲ್ಲಾ ಆಸ್ತಿಯನ್ನ ಮಕ್ಕಳ ಹೆಸರ ಬರೆದಿಟ್ಟು ಬೀದಿ ಪಾಲಾಗಬೇಡಿ ಎಂದು. ನೋಡಿ ಇಂತಹ ಇಳಿವಯಸ್ಸಿನಲ್ಲಿಯೂ ವಿಜಯ್ ಪಥ್ ಸಿಂಘಾನಿಯಾ ತಾನು ವಾಸ ಮಾಡುವ ಮನೆಯ ಹಕ್ಕಿಗಾಗಿ ಕೋರ್ಟಿಗೆ ಓಡಾಡುತ್ತಿದ್ದಾರೆ ಎಂದರೆ ಮಗ ಗೌತಮ್ ಸಿಂಘಾನಿಯಾ ಇನ್ನೆಂತಹ ದು’ರುಳ, ಕರುಣೆಯೇ ಇಲ್ಲದವ ಇರಬೇಕು ನೋಡಿ..