ಪ್ರಿಯ ಓದುಗರೇ ನಮಸ್ಕಾರ. ಈಗಂತೂ ಐ.ಪಿ.ಎಲ್ ಹಬ್ಬ ಕ್ರಿಕೆಟ್ ಪ್ರೇಮಿಗಳನ್ನೆಲ್ಲಾ ಆವರಿಸಿಕೊಂಡಿದೆ. ಐ.ಪಿ.ಎಲ್ ಕ್ರಿಕೆಟ್ ಆ ಪರಿಯ ಮನರಂಜನೆಯ ಮಹಾದೂಟವನ್ನು ಈ ಭಾರಿಯೂ ನೀಡುತ್ತಿದೆ. ನಮ್ಮ ಕರ್ನಾಟಕದಲ್ಲಂತೂ ಐ.ಪಿ.ಎಲ್ ಕ್ರೇಜ್ ಆ ಪರಿಯಾಗಿ ವ್ಯಾಪಿಸಿಕೊಂಡಿದೆ. ನಮ್ಮ “ರಾಯಲ್ ಚಾಲೆಂಜರ್ಸ್ ಬೆಂಗಳೂರು” ತಂಡವನ್ನು ಜಗತ್ತಿನಾದ್ಯಂತ ಬೆಂಬಲಿಸುತ್ತಾರೆ. ಆರ್ಸಿಬಿ ಒಂದು ಬಾರಿಯೂ ಕಪ್ ಗೆಲ್ಲದಿದ್ದರು ಸಹಾ ಅದರ ಮೇಲಿನ ಹುಚ್ಚು,ಅಭಿಮಾನ, ಕ್ರೇಜ್ ಚೂರು ಸಹಾ ಕಡಿಮೆ ಆಗಿಲ್ಲ.
ಪ್ರಸ್ತುತ IPL ಪಾಯಿಂಟ್ ಟೇಬಲ್ನಲ್ಲಿ RCB ನಾಲ್ಕನೇ ಸ್ಥಾನದಲ್ಲಿದೆ. ಈ ಭಾರಿಯೂ ಆರ್ಸಿಬಿ ತಂಡ ಪ್ರತಿ ವಿಭಾಗದಲ್ಲಿಯೂ ಬಲಿಷ್ಠವಾಗಿದೆ. ಅಗಾಗಿ ಈ ಭಾರಿ ಪಕ್ಕಾ ಕಪ್ ಗೆದ್ದೆ ಗೆಲ್ಲುತ್ತೆ ಎನ್ನುವ ವಿಶ್ವಾಸದಲ್ಲಿ ಆರ್ಸಿಬಿ ಅಭಿಮಾನಿಗಳಿದ್ದಾರೆ. ಎಲ್ಲಾ ಆಟಗಾರರು ಸಹಾ ಉತ್ತಮ ಲಯದಲ್ಲಿ ಇರುವುದರಿಂದ ಆರ್ಸಿಬಿ ತಂಡದಿಂದ ಒಳ್ಳೆಯ ಆಟವನ್ನು ನಿರೀಕ್ಷಿಸಬಹುದು.

ನೆನ್ನೆ ದುಬೈ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಚೈನೈ ವಿರುದ್ಧ ನಡೆದ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಜಯವನ್ನು ಸಾಧಿಸಿದೆ. ಈ ಗೆಲುವಿನಿಂದ ಆರ್ಸಿಬಿ ಆಟಗಾರರು, ಅಭಿಮಾನಿಗಳು ಪೂರ್ಣ ಸಂತಸದಲ್ಲಿದ್ದಾರೆ. ರಾತ್ರಿಯ ನಡೆದ ಪಂದ್ಯದಲ್ಲಿ ಪಿಂಚ್, ಡಿವಿಲಿಯರ್ಸ್ ಬ್ಯಾಟಿಂಗ್ ವೈಫಲ್ಯತೆಯ ನಡುವೆಯೂ ಕೂಡ ಕೊಹ್ಲಿಯ ವಿರಾಟ ರೂಪದ ಆಟದಿಂದ ಉತ್ತಮ ಸ್ಕೋರ್ ಅನ್ನು ಕಲೆಹಾಕಿತು. ಈ ಸ್ಕೋರ್ ಅನ್ನು ಹೊಡೆಯುವುದರಲ್ಲಿ ಚೈನೈ ಮತ್ತೆ ಎಡವಿತು. ಆರ್ಸಿಬಿ ಬೌಲಿಂಗ್ನಲ್ಲಿ ಸಂಘಟಿತ ಹೋರಾಟ ನಡೆಸಿ ಕೊನೆಗೆ ಗೆದ್ದಿತು.

ಈ ಪಂದ್ಯ ನಡೆದ ನಂತರ ಚಂದನವನದ ಖ್ಯಾತ ನಿರ್ದೇಶಕ ಸಿಂಪಲ್ ಸುನಿಯವರು “ಬರ್ನಲ್(Burnol) ಸಿಗದಿದ್ದವರು ಹರಿಶಿನ ಹಚ್ಚಿಕೊಳ್ಳಬಹುದು..ಇದರಿಂದ 1)ನಿಮ್ಮವರು ನಿಮ್ಮಜೊತೆ ಇದ್ದು ನಿಮಗೆ ಸಾಂತ್ವಾನ ಹೇಳಿದ ಹಾಗೆ ಆಗುತ್ತದೆ ..2) ನಿಮ್ಮ ಗಾಯ ಬೇಗ ವಾಸಿಯಾಗುತ್ತದೆ ಹಾಗೂ ವಾಸಿಯಾಗಲಿ ಎಂದು #RCB ಅಭಿಮಾನಿಗಳಿಂದ ದೇವರಲ್ಲಿ ಕಳಕಳಿಯ ಪ್ರಾರ್ಥನೆ.” ಹೀಗೆಂದು ಚೈನೈ ಅಭಿಮಾನಿಗಳನ್ನ ವ್ಯಂಗಿಸಿ ಆರ್ಸಿಬಿ ಪಂದ್ಯ ಗೆದ್ದ ಖುಷಿಯನ್ನು ಹೊರಹಾಕಿದ್ದಾರೆ. ಇದು ಏನೇ ಇರಲಿ ಈ ಭಾರಿ ಆರ್ಸಿಬಿ ಕಪ್ ಗೆಲ್ಲಲಿ ಎಂಬುದು ನಮ್ಮ ಆಶಯ. ನೀವೂ ಕೂಡಾ ಆರ್ಸಿಬಿ ಅಭಿಮಾನಿಯಾಗಿದ್ದರೆ ಈ ಲೇಖನ ಶೇರ್ ಮಾಡಿ. ಧನ್ಯವಾದ.
