Advertisements

ತರಕಾರಿ ಕೊಳ್ಳಲು ಬಂದ ಮಹಿಳೆ ಮಾಡಿದ ತಪ್ಪಿಗೆ.. ಅಂಗಡಿಯ ಯುವಕ ಎರಡು ದಿನಗಳ ನಂತರ ಮಾಡಿದ್ದೇನು ಗೋತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಈಗಿನ ಕಾಲ ತುಂಬಾನೆ ಕೆಟ್ಟು ಹೋಗಿದೆ ಕಳ್ಳತನ ಮೋಸ ಈಗೆ ದುಡ್ಡಿಗಾಗಿ ಏನು ಬೇಕಾದರೂ ಮಾಡುತ್ತಾರೆ.. ಕೇವಲ ನೂರು ರುಪಾಯಿಗೂ ಸಹ ದೊಡ್ಡ ದೊಡ್ಡ ಘ’ಟನೆಗಳು ನಡೆದಿರುವುದನ್ನು ಕೇಳಿರುತ್ತೀರಾ.. ಇನ್ನೂ ಚೆನ್ನೈನಲ್ಲಿ ತರಕಾರಿ ಮಾರುವ 30 ವರ್ಷ ವಯಸ್ಸಿನ ಮಣಿಕಂಠನ್ ಎಂಬ ವ್ಯಕ್ತಿ ಮಾಡಿದ ಕೆಲಸದ ಬಗ್ಗೆ ತಿಳಿದುಕೊಂಡ್ರೆ ಆಶ್ಚರ್ಯ ಪಡುತ್ತೀರಾ.. ಈ ಮಣಿಕಂಠನ್ ಎಂಬ ವ್ಯಕ್ತಿ ಹಲವು ವರ್ಷಗಳಿಂದ ರಸ್ತೆಯ ಬದಿಯಲ್ಲಿ ತರಕಾರಿ ಇಟ್ಟುಕೊಂಡು ಮಾರುತ್ತಿದ್ದಾನೆ.. ಪ್ರತಿದಿನವೂ ಕೂಡ ಮಣಿಕಂಠನ್ ಅವರ ತರಕಾರಿ ಅಂಗಡಿಗೆ ಹೆಚ್ಚಿನ ಸಂಖ್ಯೆಯ ಜನರು ಬಂದು ತರಕಾರಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು..

Advertisements

ಈಗೆ ಒಂದು ದಿನ ರುಕ್ಮಿಣಿ ಎಂಬ ಯುವತಿ ಮಣಿಕಂಠನ್ ಅವರ ತರಕಾರಿ ಅಂಗಡಿಗೆ ಬಂದು ಬೇಕಾದ ತರಕಾರಿಗಳನ್ನು ತೆಗೆದುಕೊಂಡು ಮನೆಗೆ ಹೋಗಿದ್ದಾರೆ.. ಇನ್ನೂ ಈ ಯುವತಿ ಸಂಜೆ ಅಡುಗೆಯನ್ನು ಮಾಡಿ ಊಟ ಮುಗಿಸಿ ಬೆಳಗ್ಗೆ ಏಳುತ್ತಾರೆ.. ನಂತರ ತನ್ನ ಹಣದ ಪರ್ಸ್ ನೆನಪಾಗುತ್ತದೆ.. ಆದರೆ ಮನೆಯಲ್ಲಿ ಎಲ್ಲಿಯೂ ಕೂಡ ಪರ್ಸ್ ಸಿಗುವುದಿಲ್ಲ.. ಆ ಪರ್ಸ್ ನಲ್ಲಿ ದುಬಾರಿ ಬೆಲೆಯ ಪೋನ್ ಹಾಗೂ ಹಣವು ಕೂಡ ಇರುತ್ತದೆ.. ಹಿಂದಿನ ದಿನ ಮಾರುಕಟ್ಟೆಗೆ ಹೋಗಿದ್ದ ಸಮಯದಲ್ಲಿ ಅಲ್ಲೇ ಕಳೆದುಕೊಂಡಿದ್ದೇನೆ ಎಂದು ರುಕ್ಮಿಣಿಯವರು ಅಂದುಕೊಳ್ಳುತ್ತಾರೆ.. ಆಗ ಪಕ್ಕದ ಮನೆಯ ಯುವತಿಗೆ ಈ ವಿಷಯ ತಿಳಿಸಿ ತನ್ನ ಮೊಬೈಲ್ ಗೆ ಕರೆ ಮಾಡಿಸುತ್ತಾರೆ.. ಆದರೆ ಎಷ್ಟು ಬಾರಿ ಪ್ರಯತ್ನ ಪಟ್ಟರು ಪೋನ್ ರಿಸಿವ್ ಆಗಲೇ ಇಲ್ಲ.. ಆಗ ರುಕ್ಮಿಣಿಯವರು ದುಬಾರಿ ಪೋನ್ ಮತ್ತು ಹಣವನ್ನು ಕಳೆದುಕೊಂಡೆ ಎಂದು ಎರಡು ದಿನದವರೆಗೂ ಯೋಚನೆ ಮಾಡುತ್ತಾರೆ..

ಎರಡು ದಿನಗಳು ಕಳೆದಂತೆ ರುಕ್ಮಿಣಿಯವರು ಮತ್ತೆ ಮಾರ್ಕೆಟ್ ಗೆ ಹೋಗಿ ಮಣಿಕಂಠನ್ ಅಂಗಡಿ ಹತ್ತಿರ ಬರುತ್ತಾರೆ.. ರುಕ್ಮಿಣಿ ಅವರನ್ನು ನೋಡಿದ ಮಣಿಕಂಠನ್.. ಮೇಡಮ್ ನೀವು ಎರಡು ದಿನಗಳ ಹಿಂದೆ ತರಕಾರಿ ಕೊಳ್ಳಲು ಬಂದಾಗ ನಿಮ್ಮ ಪರ್ಸ್ ಇಲ್ಲೇ ಬಿಟ್ಟು ಹೋಗಿದ್ದೀರಿ.. ನಾನು ನಿಮಗೆ ಪರ್ಸ್ ವಾಪಸ್ ಕೊಡಲು ನಿಮಗೆ ಕಾಯುತ್ತಿದ್ದೆ ಆದರೆ ನೀವು ಎರಡು ದಿನದಿಂದ ಈಕಡೆ ಬರಲೇ ಇಲ್ಲ ತಗೋಳಿ ನಿಮ್ಮ ಪರ್ಸ್ ಎಂದು ರುಕ್ಮಿಣಿಯವರಿಗೆ ನೀಡುತ್ತಾರೆ.. ಪರ್ಸ್ ನಲ್ಲಿ ದುಬಾರಿ ಮೊಬೈಲ್ ಹಾಗು ಹಣವೂ ಕೂಡ ಸುರಕ್ಷಿತವಾಗಿ ಇರುತ್ತದೆ.. ಆಗ ಯುವತಿ ರುಕ್ಮಿಣಿ ಇಂತಹ ಮೋಸದ ಕಾಲದಲ್ಲಿ ನಿಮ್ಮಂತಹ ವ್ಯಕ್ತಿಗಳು ಇರುವುದು ನಿಜ ಎಂದು ಮಣಿಕಂಠನ್ ಅವರಿಗೆ ಧನ್ಯವಾದಗಳನ್ನು ತಿಳಿಸಿ ಮನೆಗೆ ತೆರಳುತ್ತಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..