Advertisements

ಈ ಮಹಿಳೆಯನ್ನು ಭಿಕ್ಷುಕಿ ಅಂದುಕೊಂಡು ಅರೆಸ್ಟ್ ಮಾಡಿದ ಪೋಲಿಸರಿಗೆ ನಿಜಾ ಗೊತ್ತಾಗಿ ಬೆಚ್ಚಿಬಿದ್ದರು..

Kannada Mahiti

ನಮಸ್ತೆ ಸ್ನೇಹಿತರೆ, ಇಲ್ಲೊಬ್ಬ ಮಹಿಳೆಯನ್ನು ಭಿಕ್ಷುಕಿ ಎಂದುಕೊಂಡು ಅ’ರೆಸ್ಟ್ ಮಾಡಲು ಹೋದ ಪೋಲಿಸರಿಗೆ ಆಶ್ಚರ್ಯ ಕಾದಿತ್ತು.. ಅಸಲಿಗೆ ಈ ಮಹಿಳೆ ಯಾರು ಈಕೆಯನ್ನು ಅರೆಸ್ಟ್ ಮಾಡಲು ಕಾರಣವಾದರೂ ಏನು ಮತ್ತು ಈ ಮಹಿಳೆಯ ಬಗ್ಗೆ ತಿಳಿಯುತ್ತಿದ್ದಂತೆ ಅಲ್ಲಿದ್ದವರೆಲ್ಲಾ ಆಶ್ಚರ್ಯ ಪಟ್ಟಿದ್ದೇಕೆ ಎಂಬುದನ್ನ ಸಂಪೂರ್ಣ ಮಾಹಿತಿ ತಿಳಿಯೋಣ.. ಈ ಸುದ್ದಿ ಕೇಳಿ ಬಂದಿರುವುದು ಗ್ರೇಟರ್ ನೊಯಿಡಾದಿಂದ. ಅಲ್ಲಿ ಭಿಕ್ಷೆ ಬೇಡುತ್ತಿದ್ದ ಪ್ರತೀಯೊಬ್ಬರನ್ನೂ ಕೂಡ ಭಿಕ್ಷೆ ಬೇಡುವುದನ್ನು ನಿಲ್ಲಿಸಿ.. ವಯಸ್ಸಾದವರನ್ನು ವೃದ್ಧಾಶ್ರಮಗಳಿಗೆ, ಕೈ ಕಾಲುಗಳು ಗಟ್ಟಿ ಇದ್ದವರನ್ನು ಚಿಕ್ಕಪುಟ್ಟ ಕೆಲಸಕ್ಕೆ ಸೇರಿಸುವ ನಿರ್ದಾರವನ್ನು ಉತ್ತರಪ್ರದೇಶದ ಸರ್ಕಾರ ಕೈಗೊಂಡಿತ್ತು..

Advertisements

ಅದಕ್ಕಾಗಿ ಪ್ರತಿಯೊಬ್ಬರನ್ನು ವಶಪಡಿಸಿಕೊಳ್ಳಬೇಕೆಂದು ಪೋಲಿಸರು ತಿರ್ಮಾನಿಸುತ್ತಾರೆ.. ಅದೇ ರೀತಿ ವಯಸ್ಸಾದ 86 ವರ್ಷದ ಮಹಿಳೆಯನ್ನು ಕೂಡ ವಶಪಡಿಸಿಕೊಳ್ಳಲು ಪೋಲಿಸರು ಮುಂದಾಗುತ್ತಾರೆ.. ಹಾಗ ಈ ಅಜ್ಜಿಯ ಬಳಿ ಒಂದು ಸಣ್ಣ ಚೀಲವಿರುತ್ತದೆ.. ಇದನ್ನು ನೋಡಿದ ಪೋಲಿಸರಿಗೆ ಅನುಮಾನ ಬಂದು ಸಣ್ಣ ಚೀಲದಲ್ಲಿ ಏನಿದೆ ತೋರಿಸು ಎಂದು ಅಜ್ಜಿಗೆ ಹೇಳುತ್ತಾರೆ.. ಆದರೆ ಎಷ್ಟೇ ಬಲವಂತ ಮಾಡಿದರೂ ಸಹ ಆ ಅಜ್ಜಿ ತೋರಿಸಲು ಮುಂದಾಗಲಿಲ್ಲ.. ನಂತರ ಪೋಲಿಸರೇ ಆ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ಎರಡು ಲಕ್ಷ ರೂಪಾಯಿ ಹಣ ಇರುತ್ತದೆ.. ಮೊದಲಿಗೆ ಇಷ್ಟೊಂದು ಹಣವನ್ನು ನೋಡಿದ ಪೋಲಿಸರಿಗೆ ಈ ಅಜ್ಜಿ ಎಲ್ಲೋ ಕಳ್ಳತನ ಮಾಡಿರಬೇಕೆಂದು ಅನಿಸುತ್ತದೆ‌.

ಆದರೆ ಅಜ್ಜಿಯ ಬಳಿ ವಿಚಾರಿಸಿದಾಗ ಸತ್ಯಾಂಶವೊಂದು ತಿಳಿಯುತ್ತದೆ.. ಅದೇನೆಂದರೆ ಈ ಅಜ್ಜಿಗೆ ಇಬ್ಬರು ಗಂಡು ಮಕ್ಕಳು ಇದ್ದರು ಮತ್ತು ಉತ್ತರಪ್ರದೇಶದ ಪರಿದಾಬಾದ್ ನಲ್ಲಿ ಹತ್ತು ಎಕರೆಯ ಜಮೀನು ಕೂಡ ಇರುತ್ತದೆ.. ಹದಿಮೂರು ವರ್ಷಗಳ ಹಿಂದೆ ಈ ಅಜ್ಜಿಯ ಗಂಡ ನಿಧನರಾಗುತ್ತಾರೆ.. ಇದಾದನಂತರ ಇವರ ಇಬ್ಬರು ಮಕ್ಕಳು ಐದು ಎಕರೆಯಂತೆ ಹಂಚಿಕೊಂಡು ಈ ಅಜ್ಜಿಯನ್ನು ಮನೆಯಿಂದ ಹೊರಹಾಕುತ್ತಾರೆ.. ನಂತರ ಈ ಅಜ್ಜಿಗೆ ಮುಂದೆ ಏನು ಮಾಡಬೇಕೆಂದು ತಿಳಿಯದ ಪರಿಸ್ಥಿತಿಯಲ್ಲಿ ನೋಯಿಡಾಗೆ ಬಂದು ಭಿಕ್ಷೆ ಬೇಡಲು ಶುರುಮಾಡುತ್ತಾರೆ.. ಹದಿಮೂರು ವರ್ಷಗಳಿಂದ ಭಿಕ್ಷೆ ಬೇಡಿದ ಹಣದಲ್ಲಿ ಕೇವಲ ಊಟದ ಖರ್ಚನ್ನು ಮಾಡಿ ಮಿಕ್ಕಿದ ಹಣವನ್ನು ಎತ್ತಿಟ್ಟಿದ್ದಾರೆ..

ಆದ್ದರಿಂದ ನನ್ನ ಬಳಿ ಇಷ್ಟೊಂದು ಹಣವಿದೆ ಎಂದು ಪೋಲಿಸರಿಗೆ ಹೇಳುತ್ತಾರೆ..  ನಂತರ ದೊಡ್ಡ ಮಗನಿಗೆ ಈ ವಿಚಾರವನ್ನು ತಿಳಿಸಿ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗಲು ಪೊಲೀಸರು ಹೇಳಿದಾಗ  ನಾವು ಬರುವುದಿಲ್ಲ ನಮ್ಮ ತಾಯಿಯನ್ನು ಆಶ್ರಮಕ್ಕೆ ಸೇರಿಸಿ ಬಿಡಿ ಎಂದು ಪೋಲಿಸರಿಗೆ ತಿಳಿಸುತ್ತಾರೆ.. ಇಷ್ಟಾದರೂ ಕೂಡ ಈ ಅಜ್ಜಿ ತನ್ನ ಬಳಿಯಿದ್ದ ಎರಡು ಲಕ್ಷ ಹಣವನ್ನು ಇರುವ ಮೊಮ್ಮಕ್ಕಳಿಗೆ ಹಂಚಿಬಿಡಿ ಎಂದು ತನ್ನ ತಾಯಿತನವನ್ನು ಎತ್ತಿಹಿಡಿದಳು.. ನಮ್ಮ ತಂದೆ ತಾಯಿ ನಮ್ಮನ್ನು ಕಷ್ಟಪಟ್ಟು ಹೆತ್ತು ಹೊತ್ತು ಸಾಕಿರುತ್ತಾರೆ..

ಅವರ ಅರ್ಧ ಜೀವನವನ್ನು ನಮಗಾಗಿ ಮುಡಿಪಾಗಿಟ್ಟಿರುತ್ತಾರೆ.. ಆದರೆ ನಾವು ದೊಡ್ಡವರಾದ ಮೇಲೆ ಅವರಿಗೆ ಮೂರು ಹೊತ್ತು ಊಟ ಹಾಕಲು ಸಹ ಹಿಂದೆ ಮುಂದೆ ನೋಡುತ್ತೇವೆ.. ಎಂತಹ ವಿಪರ್ಯಾಸ ಅಲ್ಲವೇ.. ಮಕ್ಕಳು ತಾಯಿಗೆ ಏನೇ ಮಾಡಿದರೂ ತಾಯಿ ಹೃದಯ ಮಾತ್ರ ಮಕ್ಕಳಿಗಾಗಿ ಮಿಡಿಯುತ್ತಾ ಇರುತ್ತದೆ.. ಇಂತಹ ತಾಯಿಯರಿಗೆ ನಾವೊಂದು ಹ್ಯಾಟ್ಸಪ್ ಹೇಳಲೇಬೇಕು.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..