Advertisements

ಈ 3 ರಾಶಿಯವರು ಕೆಂಪು ದಾರ ಧರಿಸಿದಲ್ಲಿ ಏನೆಲ್ಲಾ ಅದೃಷ್ಟ ನಿಮ್ಮ ಪಾಲಾಗಲಿದೆ ನೋಡಿ !

Astrology

ನಮಸ್ತೇ ಸ್ನೇಹಿತರೇ, ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವ ಹಾಗೆ ಪ್ರತಿಯೊಂದು ಕಾರ್ಯಕ್ಕೂ ಒಂದೊಂದು ಅರ್ಥವಿರುತ್ತದೆ. ಇನ್ನು ಈಗಂತೂ ಕೈಗೆ ವಿವಿದ ಬಗೆಯ ದಾರಗಳನ್ನ ಕಟ್ಟಿಕೊಳ್ಳುವುದು ಫ್ಯಾಶನ್ ಆಗಿಬಿಟ್ಟಿದೆ. ನಾವು ಹೀಗೆ ಕೈಗೆ ಕಟ್ಟಿಕೊಳ್ಳುವ ದಾರಗಳಿಗೂ ಹಾಗೂ ಜ್ಯೋತಿಷ್ಯ ಶಾಸ್ತ್ರಕ್ಕೂ ಕೂಡ ಸಂಬಂಧವಿದೆ..ಇನ್ನು ಕೇವಲ ಫ್ಯಾಶನ್ ಗೋಸ್ಕರ ಮಾತ್ರವೇ ಅಲ್ಲದೆ, ಸ್ನೇಹಿತರೋ, ಬಂಧುಗಳೋ ಇಲ್ಲವೆ ಮನೆಯ ಅಕ್ಕ ಪಕ್ಕದವರು ಎಲ್ಲಾದರೂ ದೇವಸ್ತಾನಗಳಿಗೆ ಹೋಗಿ ಬಂದಾಗ ಅಲ್ಲಿ ತೆಗೆದುಕೊಳ್ಳುವ ಪ್ರಸಾದ ಜೊತೆಗೆ ವಿವಿಧ ಬಣ್ಣದ ದಾರಗಳನ್ನ ಕೂಡ ತೆಗೆದುಕೊಂಡು ಬಂದು ಕೊಡುವುದು ನಮ್ಮಲ್ಲಿ ವಾಡಿಕೆ. ಇನ್ನು ಅಂತಹ ದಾರಗಳನ್ನ ನಾವು ತುಂಬಾ ಭಕ್ತಿಯಿಂದ ಕೈಗೆ ಕಟ್ಟಿಕೊಳ್ಳುತ್ತೇವೆ.

Advertisements

ಇನ್ನು ಬಹುತೇಕ ಯುವಕರು ಸೇರಿದಂತೆ ಯುವತಿಯರು ಕೂಡ ಕಪ್ಪು, ಕೆಂಪು ಬಣ್ಣ ಸೇರಿದಂತೆ ಹಲವು ಬಗೆಯ ಬಣ್ಣಗಳ ದಾರಗಳನ್ನ ಕೈಗೆ ಕಟ್ಟಿಕೊಳ್ಳುತ್ತಾರೆ. ಇನ್ನು ಜ್ಯೋತಿಷ್ಯದಲ್ಲಿ ಹೇಳಿರುವಂತೆ ಯಾವ ಬಣ್ಣದ ದಾರವನ್ನ ಕಟ್ಟಿಕೊಂಡರೆ ಏನು ಲಾಭವಿದೆ ಎಂಬುದು ನಮಗ್ಯಾರಿಗೂ ಗೊತ್ತಿಲ್ಲದ ವಿಷಯ. ಆದರೆ ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಿರುವಂತೆ ಕೆಂಪು ದಾರ ಕಟ್ಟಿ ಕೊಂಡರೆ ಆರ್ಥಿಕವಾಗಿ ಲಾಭವಾಗುವುದರ ಜೊತೆಗೆ ಪ್ರೀತಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಆದರೆ ಎಲ್ಲರೂ ಕೆಂಪು ದಾರ ಕಟ್ಟಿಕೊಂಡ ಮಾತ್ರಕ್ಕೆ ಅವರ ಆರ್ಥಿಕ ಜೀವನದಲ್ಲಾಗಲಿ ಪ್ರೀತಿಯಲ್ಲಾಗಲಿ ಬದಲಾವಣೆ ಕಾಣಲು ಸಾಧ್ಯವಿಲ್ಲ. ಆದರೆ ಈ 3 ರಾಶಿಯವರಿಗೆ ಮಾತ್ರ ಕೆಂಪು ದಾರ ಕಟ್ಟಿಕೊಳ್ಳುವುದರಿಂದ ಅದರ ಪ್ರಯೋಜನಗಳ ಲಾಭವನ್ನ ಪಡೆಯುತ್ತಾರೆ.

ಹೌದು, ಮಿಥುನ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಕೆಂಪು ದಾರವನ್ನ ಕೈಗೆ ಕಟ್ಟಿಕೊಳ್ಳುವುದರಿಂದ ಅವರಿಗೆ ಶುಭ ಫಲಗಳು ದೊರೆಯಲಿವೆ ಎಂದು ಶಾಸ್ತ್ರಗಳು ಹೇಳುತ್ತವೆ. ಇವರಿಗೆ ನಿಂತುಹೋಗಿರುವ ಎಲ್ಲಾ ಕೆಲಸಗಳು ಕೈಗೂಡುವುದಲ್ಲದೆ ಹೊಸ ಹೊಸ ಅವಕಾಶಗಳು ಅರಸಿ ಬಂದು ಜೀವನದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ. ಇವರು ನಿಜವಾದ ಪ್ರೀತಿಯನ್ನ ಪಡೆಯುವಂತಾಗುತ್ತಾರೆ. ಎಲ್ಲಾ ದೋಷಗಳು ನಿವಾರಣೆಯಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಾರೆ. ಇನ್ನು ಈ ರಾಶಿಯವರು ಕೆಂಪು ದಾರ ಮಾತ್ರವಲ್ಲದೆ ಕೆಂಪು ವಸ್ತ್ರಗಳನ್ನ ಧರಿಸುವುದರಿಂದಲೂ ಅವರಿಗೆ ಹೆಚ್ಚು ಶುಭ ಫಲಗಳು ದೊರೆಯಲಿವೆ.

ಕಟಕರಾಶಿಯವರು ಸಹ ಕೆಂಪುದಾರ ಕಟ್ಟಿಕೊಳ್ಳುವುದರಿಂದ ಲಾಭವಿದೆ. ಭಕ್ತಿ ಶ್ರದ್ದೆಯಿಂದ ದೇವರಲ್ಲಿ ನಂಬಿಕೆ ಇಟ್ಟು ಈ ರಾಶಿಯಲ್ಲಿ ಜನಿಸಿದವರು ಕೆಂಪು ದಾರ ಕಟ್ಟಿಕೊಳ್ಳುವುದರಿಂದ ಕೌಟುಂಬಿಕವಾಗಿ ಯಾವುದೇ ತೊಂದರೆಗಳನ್ನ ಎದುರಿಸುತ್ತಿದ್ದರೂ ಅವುಗಳಿಂದ ನಿವಾರಣೆಯಾಗಿ ನೆಮ್ಮದಿಯ ದಿನಗಳು ಬರುತ್ತವೆ. ಸಂಸಾರದಲ್ಲಿ ಸದಾ ನೆಮ್ಮದಿ ತುಂಬಿರುತ್ತದೆ. ಅದೃಷ್ಟ ಕೂಡ ಇವರದಾಗುತ್ತದೆ.

ಸಿಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಕೆಂಪು ದಾರವನ್ನ ತಮ್ಮ ಬಲಗೈ ತೋಳಿಗೆ ಕಟ್ಟಿಕೊಳ್ಳಬೇಕು. ಇದರಿಂದ ಅವರ ಎಲ್ಲಾ ಕೆಲಸಗಳು ಸುಲಭವಾಗಿ ನೆರವೇರುವುದಲ್ಲದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಇನ್ನು ಇದೆಲ್ಲಾ ನಿಮ್ಮ ನಿಮ್ಮ ನಂಬಿಕೆಗೆ ಬಿಟ್ಟ ವಿಷಯ.