Advertisements

ತಿನ್ನಲು ಅನ್ನವಿಲ್ಲದೆ ಬೀದಿ ಬೀದಿಗೆ ಹೋಗಿ ಬೇಡಿದ್ದ ಈ ಹುಡುಗ ಇಂದು ಯಾವ ಸ್ಥಾನದಲ್ಲಿದ್ದಾನೆ ಗೊತ್ತಾ? ನೀವು ಬೆರಗಾಗೋದಂತು ಖಂಡಿತ..

Inspire

ನಮಸ್ತೇ ಸ್ನೇಹಿತರೆ, ಬಡವನಾಗಿ ಹುಟ್ಟೋದು ತಪ್ಪಲ್ಲ ಬಡವನಾಗಿ ಸಾ’ಯೋ’ದು ತಪ್ಪು.. ಆದರೆ ಇಲ್ಲೊಂದು ಇಂಟ್ರೆಸ್ಟಿಂಗ್ ಏನೆಂದರೆ ಭಿಕ್ಷುಕ ವ್ಯಕ್ತಿಯೊಬ್ಬ ಕೋಟ್ಯಾಧಿಪತಿ ಯಾಗಿದ್ದು. ಅವರು ಯಾವುದೇ ಭಿ’ಕ್ಷೆ ಮಾಡಿ ಕೋಟ್ಯಾಂತರ ರೂಪಾಯಿ ದುಡಿಯಲಿಲ್ಲ ಬದಲಾಗಿ ಸ್ವಂತ ಪರಿಶ್ರಮದಿಂದ ಮೇಲೆ ಬಂದಂತವರು.. ಇವರು ಯಾವುದೇ ಬೇರೆ ರಾಜ್ಯದ ವ್ಯಕ್ತಿ ಅಲ್ಲಾ ನಮ್ಮದೇ ರಾಜ್ಯದ ಯಶಸ್ಸಿನ ಉದ್ಯಮಿ ರೇಣುಕಾ ಆರಾಧ್ಯ. ರೇಣುಕಾ ಆರಾಧ್ಯ ಅವರು ಆನೆಕಲ್ ತಾಲ್ಲೂಕಿನ ಗೋಪಸಂದ್ರದವರು. ರೇಣುಕಾ ಅರಾಧ್ಯ ಅವರಿಗೆ ಬುದ್ದಿ ಬಂದಾಗಿನಿಂದಲೂ ಸಿರಿತನವನ್ನು ಕಂಡೇ ಇರಲಿಲ್ಲಾ.. ಮನೆಯ ವಿಪರೀತ ಬಡತನ ಮತ್ತು ಹಸಿವು ಚಿಕ್ಕನಿಂದಲೇ ಇವರಿಗೆ ಮೈಗೂಡಿ ಹೋಗಿತ್ತು. ತುಂಬಾ ಬಡತನ ಇದ್ದ ಕಾರಣ ಇವರ ತಂದೆ ರೇಣುಕಾ ಆರಾಧ್ಯ ಅವರನ್ನ ಶ್ರೀಮಂತ ಮನೆಗಳಲ್ಲಿ ಕೆಲಸ ಮಾಡಲು ಜೀತಕ್ಕೆ ಇಟ್ಟಿದ್ದರು..

[widget id=”custom_html-3″]

Advertisements

ಈಗೆ ದಿನನಿತ್ಯ ಶಾಲೆಗೆ ಹೋಗ್ತಿದ್ದ ರೇಣುಕಾ ಅವರಿಗೆ ಓದಿನ ಮೇಲೆ ಗಮನ ಇರಲಿಲ್ಲಾ ಸದಾ ತಮ್ಮ ಹಸಿವನ್ನು ನೀಗಿಸಿ ಕೊಳ್ಳುವುದು ಹೇಗೆ ಅನ್ನುವುದರ ಮೇಲೆ ಗಮನವಿತ್ತು. ಇದೆಲ್ಲಾ ಒತ್ತಡಗಳ ನಡುವೆ 10 ನೇ ಕ್ಲಾಸ್ ಫೇಲ್ ಆಗ್ತಾರೆ.. ನಂತರ ದುರಾದೃಷ್ಟವಶಾತ್ ರೇಣುಕಾ ಅವರು ತಮ್ಮ ತಂದೆಯನ್ನ ಕಳೆದುಕೊಳ್ತಾರೆ. ಇನ್ನೂ ಆ ಸಮಯದಲ್ಲಿ ಅವರಿಗೆ ಇದ್ದದ್ದು ತಾಯಿ ಒಬ್ಬರೇ.. ತಂದೆ ತೀರಿ ಕೊಂಡ ನಂತರ ಎಲ್ಲಾ ಜವಾಬ್ದಾರಿ ರೇಣುಕಾ ಅವರ ಮೇಲೆ ಬಿತ್ತು. ಆಗಾಗಲೇ ಹಿರಿಯ ಅಣ್ಣನಿಗೆ ಮದುವೆಯಾಗಿತ್ತು.. ಅವರು ಅವರ ಸಂಸಾರದ ನಿರ್ವಹಣೆಗಾಗಿ ದೂರ ಸರಿದಿದ್ರು. ಆಗ ತಾಯಿ ಮತ್ತು ಕಿರಿಯ ಸಹೋದರಿಯ ಹೊಣೆ ರೇಣುಕಾ ಅವರ ಮೇಲೆ ಇರ್ತದೆ.. ಇದಾದ ಬಳಿಕ ಮನೆಯ ಜವಾಬ್ದಾರಿಯನ್ನು ನಡೆಸಲು ಅನೇಕ ಕೆಲಸಗಳನ್ನ ಮಾಡ್ತಾರೆ.. ಐಸ್ ಕ್ರಿಮ್ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಇ ವ್ಯಕ್ತಿ ಅಲ್ಲಿನ ಆ್ಯಡ್ ಲಾಪ್ಸ್ ಶಾಖೆ ಒಂದರಲ್ಲಿ ಕಸವನ್ನ ಗುಡಿಸುವ ಕೆಲಸಕ್ಕೆ ಸೆರ್ತಾರೆ. ನಂತರ ಕಾರಣಾಂತರಗಳಿಂದ ಆ ಕೆಲಸವನ್ನು ಕೈ ಬಿಡ್ತಾರೆ..

[widget id=”custom_html-3″]

ಅಲ್ಲಿಂದ ಅವರು ಶ್ಯಾಮ್ ಸುಂದರ್ ಟ್ರೇಡಿಂಗ್ ಕಂಪನಿಯ ಸಣ್ಣ ಹೆಲ್ಪರ್ ಆಗಿ ಕೆಲಸಕ್ಕೆ ಸೇರಿಕೊಳ್ತಾರೆ. ಅದು ಬ್ಯಾಗ್ ಮತ್ತು ಸೂಟ್ಕೇಸ್ ಗಳ ತಯಾರಿಕಾ ಘಟಕವಾಗಿರೋದ್ರಿಂದ ಅಲ್ಲಿಂದ ತಯಾರಾಗ್ತಿದ್ದಂತಹ ಬ್ಯಾಗ್ ಗಳನ್ನ ಸೂಟ್ಕೇಸ್ ಗಳಿಗೆ ತುಂಬಿ ಸಿಟಿಯ ರಸ್ತೆಯ ಉದ್ದಕ್ಕೂ ಫ್ಯಾಕ್ಟರಿಯಿಂದ ರಿಟರ್ನ್ ಅಂಗಡಿಗಳಿಗೆ ಅವುಗಳನ್ನ ಟ್ರ್ಯಾಲಿಗಳಲ್ಲಿ ಒಯ್ಯಬೇಕಿತ್ತು.. ಇನ್ನೂ ಈ ಬ್ಯುಸಿನೆಸ್ ಬಗ್ಗೆ ತಿಳಿದುಕೊಂಡ ರೇಣುಕಾ ಅವರು ಅದೇ ಮಾದರಿಯ ಸಣ್ಣ ಉದ್ಯಮವನ್ನ ನಾನೇಕೆ ಶುರು ಮಾಡ್ಬಾರ್ದು ಅಂಥ ಯೋಚನೆ ಮಾಡ್ತಾರೆ. ನಂತರ ಸೂಟ್ಕೇಸ್ ಮತ್ತು ವ್ಯಾನಿಟಿ ಬ್ಯಾಗ್ ಗಳಿಗೆ ಕವರ್ ಗಳನ್ನ ತಯಾರಿಸಿ ಸೈಕಲ್ ಮೇಲೆ ಅವುಗಳನ್ನು ಹೊತ್ತು ಬೀದಿಯಲ್ಲಿ ಯಾರಿಗಾದ್ರು ಬ್ಯಾಗ್ ಗೆ ಕವರ್ ಅಥವಾ ಸ್ಟಿಚ್ ಬೇಕಿದೆಯೇ ಎಂದು ಕೂಗುತ್ತಾ ಸಂಚಾರ ಮಾಡ್ತಾರೆ. ಆದರೆ ಈ ಪ್ರಯತ್ನ ಸಕ್ಸಸ್ ಆಗ್ಲಿಲ್ಲಾ..

[widget id=”custom_html-3″]

[widget id=”custom_html-3″]

ನಂತರ ಡ್ರೈವಿಂಗ್ ವೃತ್ತಿಯಲ್ಲಿ ಮುಂದುವರೆದ ಆರಾಧ್ಯ ಅವರು ಪುಷ್ವ ಎಂಬುವವರನ್ನ ಮದುವೆ ಆಗ್ತಾರೆ. ಡ್ರೈವಿಂಗ್ ನಲ್ಲಿ ಮುಂದುವರೆಯುತ್ತಿದ್ದ ಇವರು ಲೋನ್ ಮುಖಾಂತರ ಒಂದು ಕಾರನ್ನ ಖರೀದಿ ಮಾಡ್ತಾರೆ.. ಇದಾದ ಬಳಿಕ ಇನ್ನೊಂದು ಕಾರನ್ನ ಕೊಂಡುಕೊಳ್ತಾರೆ. ಈ ಎರಡು ಕಾರುಗಳಿಂದ ಸಿಟಿ ಟ್ಯಾಕ್ಸಿ ಸೇವೆಯನ್ನ ಆರಂಭಿಸ್ತಾರೆ.‌. ಈ ಸಮಯದಲ್ಲಿ ಅವರಿಗೆ ತಮ್ಮದೇ ಆದ ಟ್ರಾವೆಲ್ ಏಜೆನ್ಸಿ ತೆರೆಯುವ ಕನಸಿತ್ತು. ಈ ಹೊತ್ತಿಗೆ ಅದಾಗಲೇ ಇಂಡಿಯನ್ ಸಿಟಿ ಟ್ಯಾಕ್ಸಿ ಎಂಬ ಸಂಸ್ಥೆ ಚಾಲನೆಯಲ್ಲಿತ್ತು. ಆದರೆ ಅದು ನಷ್ಟದಲ್ಲಿತ್ತಿ. ಇದನ್ನೇ ಖರೀದಿ ಮಾಡಿದ ಮೂರೇ ವರ್ಷಗಳಲ್ಲಿ ಇವರ ಉದ್ಯಮ ಲಾಭ ಕಂಡಿತು.. ಅಂದು ಹಸಿವಿಗಾಗಿ ಬೀದಿ ಬೀದಿಯಲ್ಲಿ ಅಲೆಯುತ್ತಿದ್ದ ಇವರು ಈಗ ನೂರಾರು ಕೋಟಿಯ ಆಸ್ತಿ ಒಡೆಯನಾಗಿ ಬೆಳೆದಿದ್ದಾರೆ.