Advertisements

ಈಗಾಗಲೇ ಒಂದು ಹೆಣ್ಣು ಮಗು ಇದೆ ಅಂಥ ಆಗ ತಾನೆ ಹುಟ್ಟಿದ ಎರಡನೇ ಮಗುವನ್ನು ತಾಯಿ ಏನ್ ಮಾಡಿದ್ದಾಳೆ ಗೊತ್ತಾ?

Kannada Mahiti

ತಾಯಿ ಅಂದ್ರೆ ದೇವರಿಗಿಂತ ಹೆಚ್ಚು, ಮೊಗದ ಅಳಲನ್ನು ಜಗದ ಕಣ್ಣಿಗೆ ತೋರ್ಪಡಿಸದೇ, ತನ್ನ ತೋಳ ತೆಕ್ಕೆಯಲ್ಲಿ ಕಂದನನ್ನು ಸಾಕುವ ಸುಂದ ಮುಗ್ದ ಜೀವವೇ ತಾಯಿ.. ತಾಯಿ ತನ್ನ ಮಗುವನ್ನು ಎಷ್ಟು ಆರೈಕೆ ಮಾಡ್ತಾಳೆ, ಪ್ರೀತಿ ಮಾಡ್ತಾಳೆ ಅನ್ನೋದಕ್ಕೆ ಪದಗಳ ವರ್ಣನೆ ಬೇಕಿಲ್ಲ.. ಯಾಕಂದ್ರೆ ತಾಯಿ ಮಗುವನ ಬಾಂದವ್ಯ ಜಗತ್ತಿನ ಎಲ್ಲ ಬಾಂಧವ್ಯಗಳಿಗಿಂತ ಹೆಚ್ಚಾಗಿರುವುದು ನಿಮಗೆಲ್ಲ ಗೊತ್ತೇ ಇರುವ ವಿಚಾರ.. ಆದ್ರೆ ಇವತ್ಯಾಕೆ ತಾಯಿ ಮಗುವಿನ ಬಗ್ಗೆ ಹೇಳ್ತಾಯಿದ್ದೀವಿ ಅಂದುಕೊಂಡ್ರಾ ಅದಕ್ಕೂ ಕಾರಣವಿದೆ.. ಹೆತ್ತ ತಾಯಿಯೇ ಮಗುವನ್ನು ಸಾಕಲು ಶಕ್ತಿ ಇಲ್ಲದ ಕಾರಣಕ್ಕೆ ಐದು ಸಾವಿರಕ್ಕೆ ಮಾರಾಟವಾಗಿದ್ದ ಪ್ರ’ಕ’ರಣ ರಾಜ್ಯದಲ್ಲಿ ಸದ್ದು ಮಾಡಿದ್ದರ ಬಗ್ಗೆ ನಿಮಗೆ ಗೊತ್ತೇಯಿದೆ.

Advertisements

ಮಾರಾಟವಾಗಿದ್ದ ಗಂಡು ಮಗು ಕಡೆಗೂ ಹುಬ್ಬಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ. ತಾಯಿಯಿಂದ ದೂರಾವಾಗಿದ್ದ ಮಗು ಅನಾರೋಗ್ಯಕ್ಕೆ ಒಳಗಾಗಿದೆ, ಈ ಹಿನ್ನಲೆ ಮಗುವಿಗೆ ಚಿ’ಕಿ’ತ್ಸೆಗಾಗಿ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಗು ವಿಜಯಪುರದಲ್ಲಿ ನಾಪತ್ತೆಯಾಗಿದ್ದ ಮಗು ಎಂಬ ಅಂಶ ಬೆಳಕಿಗೆ ಬಂದಿದೆ. ಮಗುವನ್ನು ಖರೀದಿಸಿದವರೇ ಕಿಮ್ಸ್ ನಲ್ಲಿ ದಾಖಲು ಮಾಡಿದ್ದಾರೆ. ಮಕ್ಕಳಿಲ್ಲದ ಕಾರಣ ಗಂಡು ಮಗುವನ್ನು ಸಿಂದಗಿ ಮೂಲದ ವ್ಯಕ್ತಿ ಖರೀದಿ ಮಾಡಿದ್ದರು. ಮಗು ಖರೀದಿಸಿದ್ದ ಆಟೋ ಡ್ರೈವರ್ ಮೇಲೂ ಪ್ರ’ಕ’ರಣ ದಾಖಲಿಸಲಾಗಿದೆ.

ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ರೇಣುಕಾ ಕಾಂಬಳೆ ಎಂಬ ಮಹಿಳೆ ತನ್ನ ಎಂಟು ದಿನದ ಗಂಡು ಮಗುವನ್ನು 5 ಸಾವಿರ ರೂಗೆ ಮಾ’ರಾ’ಟ ಮಾಡಿದ್ದಳು. ಬಡತನದಲ್ಲಿರುವ ರೇಣುಕಾ ಕಾಂಬಳೆಯ ಪತಿ ದೂ’ರ’ವಾಗಿದ್ದು, ಈಗಾಗಲೇ ಒಂದು ಹೆಣ್ಣು ಮಗು ಇರುವುದರಿಂದ ಎರಡನೇ ಮಗು ಸಾಕುವುದು ಕಷ್ಟ ಎಂಬ ಕಾರಣಕ್ಕೆ ಮಗುವನ್ನೇ ತಾಯಿ ರೇಣುಕಾ ಮಾರಾಟ ಮಾಡಿದ್ದಳಂತೆ. ಈ ಬಗ್ಗೆ ಸಹಾಯವಾಣಿಗೆ ಕರೆ ಬಂದಿದೆ. ನಂತರ ತನಿಖೆ ನಡೆಸಿದಾಗ ಈ ವಿಚಾರ ಬಯಲಾಗಿದೆ. ಕಿ’ತ್ತು ತಿ’ನ್ನು’ವ ಬಡತನವೋ ಹಣದ ಮೋ’ಹ’ವೋ ಇತ್ತೀಚಿನ ದಿನಗಳಲ್ಲಿ ಸಂಬಂಧವೇ ಮೌಲ್ಯ ಕಳೆದುಕೊಳ್ಳುತ್ತಿರೋದು ಸುಳ್ಳಲ್ಲ.