ಹಣ ಅನ್ನೋದು ಮನುಷ್ಯನನ್ನು ಯಾವತರಹ ಬೇಕಾದ್ರೂ ಬದಲಾಯಿಸುತ್ತೆ, ಹುಟ್ಟುತ್ತಾ ಜೊತೆ ಜೊತೆಯಾಗಿ ಬೆಳೆದು ದೊಡ್ಡವರಾಗುವ ಹಾದಿಯಲ್ಲಿ ಒಟ್ಟಿಗೆ ಕನಸು ಕಾಣುವ ಅಣ್ಣ ತಮ್ಮಂದಿರ ಮಧ್ಯೆಯೂ ಹಣ ಅನ್ನೋ ಕಾಗದದ ರೂಪದಲ್ಲಿರುವ ನಗದು ಆಟವಾಡಿ ಬಿಟ್ಟಿದೆ. ಹೌದು ದುಡ್ಡು ಅನ್ನೋದು ಮನುಷ್ಯರನ್ನು ಹೇಗೆ ಬದಲಾಯಿಸುತ್ತೆ ಅಂತ ಹೇಳೋಕ್ಕಾಗಲ್ಲ, ಬಹುಶಃ ತಪ್ಪು ಅಂತಾನೂ ಹೇಳೋಕ್ಕೆ ಆಗಲ್ಲ, ಯಾಕಂದ್ರೆ ಈಗಿನ ಯುಗದಲ್ಲಿ ದುಡ್ಡೇ ದೊಡ್ಡಪ್ಪ..ದುಡ್ಡಿಲ್ಲ ಅಂದ್ರೆ ಏಮನು ಸಾಧ್ಯವಿಲ್ಲ ಅನ್ನೋ ಹಾಗಾಗಿದೆ, ಆದ್ರೆ ಭಾವನೆಗಳ ಮೇಲೆ ಹಣ ಯಾವತ್ತು ಬರೆ ಎಳೆಯುವಂತಿರಬಾರದು.. ಆದ್ರೆ ಇಲ್ಲೊಂದು ಮನೆಯಲ್ಲಿ ಜಗಳದಲ್ಲಿ ಶುರುವಾದ ಕಲಹ ಹಣದ ವಿಚಾರಕ್ಕೆ ಸಾವಿನಲ್ಲಿ ಅಂತ್ಯಗೊಂಡಿದೆ. ಆದ್ರೆ ಸ್ವಂತ ತಮ್ಮನೇ ಅಣ್ಣನ ಜೀ’ವ ತಗೆದಿದ್ದಾನೆ.

ಹಣಕಾಸಿನ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ನಡೆಯುತ್ತಿದ್ದ ಜಗಳದ ಘಟನೆ ಮಂಡ್ಯ ನಗರದ ವಿದ್ಯಾನಗರದಲ್ಲಿ ಜರುಗಿದೆ. ರೇಣುಕಾಪ್ರಸಾದ್ ಎಂಬಾತ ತನ್ನ ಅಣ್ಣ ಮಹೇಶ್ನನ್ನು ಸಾ’ಯಿ’ಸಿ ಪರಾರಿಯಾಗಿದ್ದಾನೆ. ಅಷ್ಟಕ್ಕೂ ಕಾರಣ ಏನು ಗೊತ್ತಾ ಹೇಳ್ತೀವಿ.. ರೇಣುಕಾಪ್ರಸಾದ್ ಮಹೇಶ್ಗೆ ಖಾಸಗಿ ಸಹಕಾರ ಸಂಘದಲ್ಲಿ ಜಾಮೀನು ನೀಡಿ ಸಾಲ ಕೊಡಿಸಿದ್ದರು. ಆದರೆ ಮಹೇಶ್ ಸರಿಯಾಗಿ ಸಾಲದ ಕಂತನ್ನು ಪಾವತಿ ಮಾಡದ ಕಾರಣ ಸಂಘದವರು ರೇಣುಕಾಪ್ರಸಾದ್ ಅವರನ್ನು ನಿಮ್ಮ ಅಣ್ಣ ಕಂತು ಕಟ್ಟಿಲ್ಲ ಎಂದು ಕೇಳುತ್ತಿದ್ದರು.. ಹೀಗೆ ಪದೇ ಪದೇ ಸಂಘದವರು ಕೇಳಿದ್ರಿಂದ ರೇಣುಕಾಪ್ರಸಾದ್ ಬೇಸರಪಟ್ಟುಕೊಂಡಿದ್ರು.
ಇದೇ ವಿಚಾರಕ್ಕೆ ಹಲವು ದಿನಗಳಿಂದ ಅಣ್ಣ ತಮ್ಮಂದಿರ ನಡುವೆ ಜಗ”ಳವಾಗುತ್ತಿತ್ತು.

ಮಹೇಶ್ ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ನನ್ನ ವ್ಯಾಪಾರದಲ್ಲಿ ಲಾಸ್ ಆಗುತ್ತಿದೆ ಹೀಗಾಗಿ ಕಂತು ಕಟ್ಟಲು ಆಗುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದರು. ಆದರೆ ಮಹೇಶ್ ವ್ಯಾಪಾರ ಮಾಡಿದ ಹಣನ್ನು ಜೂ’ಜಾ’ಡಿ ಕ’ಳೆ’ಯುತ್ತಿದ್ದ ಎಂದು ಸಹ ಕೆಲವರು ಆ’ರೋ’ಪ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ರಾತ್ರಿ ಅಣ್ಣನನ್ನು ಮನೆಯ ಹತ್ತಿರ ಕರೆಸಿಕೊಂಡು ಕಂತಿನ ವಿಚಾರವನ್ನು ಕೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಡುವ ಹಂತಕ್ಕೆ ತಲುಪಿದೆ. ಈ ಪರಿಣಾಮ ರೇಣುಕಾಪ್ರಸಾದ್ ಮಹೇಶ್ಗೆ ಚಾ’ಕು’ವಿನಿಂದ ಚು’,ಚ್ಚಿ ಪರಾರಿಯಾಗಿದ್ದಾರೆ.