ಸ್ನೇಹಿತರೇ, ನೀವು ಮಾಲ್ ಗಳಿಗೂ ಕೆಲವೊಂದು ಥಿಯೇಟರ್ ಗಳಿಗೋ ಅಥ್ವಾ ಹೋಟೆಲ್, ರೆಸ್ಟೋ ರೆಂಟ್ ಗಳಿಗೋ ಹೋದಾಗ ಅಲ್ಲಿ ಸಿಗುವ ತಿನ್ನೋ ಪದಾರ್ಥಗಳ ಬೆಲೆ ನೋಡಿ ಶಾಕ್ ಆಗಿರುತ್ತೀರಾ..ಹೊರಗಡೆ ಕೇವಲ ೧೦ ರುಪಾಯಿಗೆ ಸಿಗುವ ಪದಾರ್ಥ ಮಾಲ್ ಗಳಲ್ಲಿ ೨೫೦ರೂ ಗಳವರೆಗೆ ಬೆಲೆ ಇರುತ್ತದೆ. ಕೆಲವೊಂದು ಚಿತ್ರಮಂದಿರಗಳಲ್ಲಿ ಹೊರಗಡೆ ೧೦ ರೂಗೆ ಸಿಗುವ ಸಮೋಸಗೆ ೩೦ರೂ ವರೆಗೆ ಕೊಡಬೇಕಾಗುತ್ತದೆ. ನಮ್ಮ ಹವ್ಯಾಸಗಳನ್ನೇ ಲಾಭಕ್ಕಾಗಿ ಬಳಸಿಕೊಳ್ಳುವ ಮಾಲೀಕರು ಆಹಾರ ಪದಾರ್ಥಗಳಿಗೆ ಮೂರು ಪಟ್ಟು ಹತ್ತು ಪಟ್ಟು ಹಣ ಜಾಸ್ತಿ ಮಾಡಿ ಜೇಬು ತುಂಬಿಸಿಕೊಳ್ಳುತ್ತಾರೆ.

ಅದೇ ರೀತಿ ಅಹಮದಾಬಾದ್ ನ್ ೬೭ ವರ್ಷದ ರೋಹಿತ್ ಪಾಟೀಲ್ ಎಂಬ ವ್ಯಕ್ತಿಯು ಕೇವಲ 20ರೂಪಾಯಿಯ ನೀರಿನ ಬಾಟಲ್ ಗೆ ಬರೋಬ್ಬರಿ 164ರೂ ಬಿಲ್ ಕೊಟ್ಟು, ಆ ರೆಸ್ಟೋರೆಂಟ್ ವಿರುದ್ಧ ೫ ವರ್ಷಗಳ ಕಾಲ ಕಾನೂನಿನ ಸಮರ ಸಾರಿ ೫ ವರ್ಷಗಳ ನಿರಂತರ ಪ್ರಯತ್ನದಿಂದಾಗಿ ಗೆಲುವು ಕಂಡಿರುವ ಘಟನೆ ನಡೆದಿದೆ. ಇದೆಲ್ಲಾ ಹಾಗಿದ್ದೇಗೆ ಎಂದರೆ, ೫ ವರ್ಷಗಳ ಹಿಂದೆ ಅಕ್ಟೊಬರ್ 2015ರಂದು ರೋಹಿತ್ ಪಾಟೀಲ್ ಅಹಮದಾಬಾದ್ ನಲ್ಲಿರುವ ರೆಸ್ಟೋರೆಂಟ್ ಒಂದಕ್ಕೆ ತಮ್ಮ ಸ್ನೇಹಿತರ ಜೊತೆಗೂಡಿ ಹೋಗುತ್ತಾರೆ. ಬೇಕಾದ ಆಹಾರದ ಜೊತೆಗೆ ನೀರಿನ ಬಾಟಲ್ ಕೂಡ ಆರ್ಡರ್ ಮಾಡಿರುತ್ತಾರೆ. ಊಟದ ಬಳಿಕ ಬಿಲ್ ಅವರಿದ್ದ ಟೇಬಲ್ ಬಳಿ ಬರುತ್ತದೆ. ಬಿಲ್ ನೋಡಿದ ರೋಹಿತ್ ಅವರಿಗೆ ಒಂದು ಕ್ಷಣ ಶಾಕ್ ಆಗುತ್ತದೆ.

ಹೌದು, ಆ ಬಿಲ್ ನಲ್ಲಿ ಒಂದು ನೀರಿನ ಬಾಟಲ್ ಗೆ 150ರೂ ಬೆಲ್ ಸೇರಿದಂತೆ ಸರ್ವಿಸ್ ಟ್ಯಾಕ್ಸ್ ಎಲ್ಲಾ ಸೇರಿ 164ರೂ ಚಾರ್ಜ್ ಮಾಡಲಾಗಿರುತ್ತದೆ. ಎಲ್ಲೋ ಕಣ್ತಪ್ಪಿನಿಂದಾಗಿರಬಹುದು ಎಂದು ರೆಸ್ಟೋರೆಂಟ್ ಸಿಬ್ಬಂದಿಯನ್ನ ವಿಚಾರಿಸಿದಾಗ ಆ ನೀರಿನ ಬಾಟಲ್ ಬೆಲೆ ಅಷ್ಟೇ ಎಂದು ಅವರು ಹೇಳುತ್ತಾರೆ. ಬಳಿಕ ರೆಸ್ಟೋರೆಂಟ್ ಮಾಲೀಕನೊಂದಿಗೆ ಇದರ ಬಗ್ಗೆ ವಾದ ಪ್ರತಿವಾದ ಶುರುವಾಗಿದ್ದು ಕೊನೆಗೆ ಏನೂ ಮಾಡಲಾಗದೆ ಬಿಲ್ ಕೊಟ್ಟ ರೋಹಿತ್ ಪಾಟೀಲ್ ಅವರು ಮನೆಗೆ ಮರಳುತ್ತಾರೆ. ಆದರೆ ಇದನ್ನ ಅಷ್ಟಕ್ಕೇ ಬಿಡದ ರೋಹಿತ್ ಅವರು ರೆಸ್ಟೋರೆಂಟ್ ನವರು ಮಾಡುತ್ತಿರುವ ಅನ್ಯಾಯದ ಕುರಿತು ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಬಳಿಕ ಈ ಕೇಸ್ ಬರೋಬ್ಬರಿ ೫ ವರ್ಷಗಳ ಕಾಲ ನಡೆಯುತ್ತದೆ. ಇಷ್ಟು ವರ್ಷಗಳು ಕೂಡ ಸಹನೆ ಕಳೆದುಕೊಳ್ಳದ ರೋಹಿತ್ ಪಾಟೀಲ್ ಅವರು ೨೮ ಬಾರಿ ನ್ಯಾಯಾಲಯದ ವಿಚಾರಣೆಗೆ ಬಂದು ಹೋಗಿರುತ್ತಾರೆ.

ಇನ್ನು ಕಡೆಗೂ ರೋಹಿತ್ ಪಾಟೀಲ್ ಅವರ 5 ವರ್ಷಗಳ ಭಗೀರಥ ಪ್ರಯತ್ನದ ಬಳಿಕ ಇದೆ ತಿಂಗಳು 2ನೇ ತಾರೀಖಿನಂದು ಈ ಪ್ರಕರಣ ಕುರಿತಂತೆ ಕೋರ್ಟ್ ತೀರ್ಪು ನೀಡಿದ್ದು ರೆಸ್ಟೋರೆಂಟ್ ನವರಿಗೆ ಕ್ಯಾಕರಿಸಿ ಉಗಿದಿದ್ದಾರೆ. ನಿಗದಿ ಬೆಲೆಗಿಂತ ದುಪ್ಪಟ್ಟು ದರ ವಿಧಿಸಿದ ರೆಸ್ಟೋರೆಂಟ್ ಗೆ ಚೀಮಾರಿ ಹಾಕಿದ ನ್ಯಾಯಾಲಯ ರೋಹಿತ್ ಪಾಟೀಲ್ ಅವರಿಗೆ 5500 ಪರಿಹಾರ ನೀಡುವಂತೆ ತನ್ನ ತೀರ್ಪಿನಲ್ಲಿ ತಿಳಿಸಿದೆ. ಇನ್ನು ಇದರ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿರುವ ರೋಹಿತ್ ಪಾಟೀಲ್ ಅವರು ಎಂಆರ್ಪಿ ಬೆಲೆಗಿಂತ ಹೆಚ್ಚು ಹಣ ಪಡೆಯುವ ಅಧಿಕಾರ ಯಾರಿಗೂ ಇಲ್ಲ. ಹೀಗೆ ಹಗಲು ದ’ರೋಡೆ ಮಾಡುವವರನ್ನ ಸುಮ್ಮನೆ ಬಿಡದೆ, ನಾವೆಲ್ಲಾ ಎಚ್ಚೆತ್ತುಕೊಂಡು ನಮ್ಮ ಹಕ್ಕುಗಳಿಗಾಗಿ ಪ್ರತಿಯೊಬ್ಬರೂ ಹೋರಾಟ ಮಾಡಬೇಕು ಎಂದು ಅವರು ಹೇಳಿದ್ದಾರೆ.