Advertisements

ತಲೆ ಕೆಳಗಾಗಿರುವ ಶಿವನ ದೇವಾಲಯ ಎಲ್ಲಿದೆ ಗೊತ್ತಾ? ಇಲ್ಲಿ ನಿಮ್ಮ ಇಷ್ಟಾರ್ಥ ನೆರವೇರುವುದು ಪಕ್ಕಾ..

Temples

ನಮಸ್ಕಾರ ಸ್ನೇಹಿತರೆ ನಾವಿಂದು ಹೇಳ‌ ಹೊರಟಿರುವ ಸ್ಟೋರಿ ಒಮ್ಮೆ ಓದಿ ನಿಜಕ್ಕೂ ನಿಮಗೂ ಅಚ್ಚರಿಯನ್ನುಂಟು ಮಾಡುತ್ತದೆ. ಜಗತ್ತಿನ ಸೃಷ್ಟಿಕರ್ತ, ತ್ರಲೋಕಪಾಲ,‌ ಹಾಲಾಹಲವನ್ನುಂಡು ವಿಷಕಂಠನಾದ ಗಂಗಾಧರ ಹೀಗೆ ಶಿವನಿಗೆ ಒಂದಲ್ಲಾ ಎರೆಡಲ್ಲಾ ಹಲವು ನಾಮಾಧೇಯಗಳು. ಇಡೀ ಜಗತ್ತಿನಲ್ಲಿ ಶಿವ ಆರಾಧನೆಯನ್ನು ಮಾಡಲಾಗುತ್ತದೆ. ದೇಶದ ಮೂಲೆ ಮೂಲೆಗಳಲ್ಲಿ‌ ವಿಶೇಷವಾದ ದೇವಾಲಯಗಳನ್ನು ಕಾಣಬಹುದಾಗಿದೆ. ದೇವಾಲಯಗಳಲ್ಲಿ ಶಿವನ ವಿಗ್ರಹ, ಶಿವಲಿಂಗ ಪ್ರತಿಷ್ಟಾಪನೆ ಮಾಡಿ ಪೂಜಿಸಲಾಗುತ್ತದೆ. ಆದರೆ ದಕ್ಷಿಣ ಭಾರತದಲ್ಲಿ ಒಂದು ಅಪರೂಪವಾದ ಶಿವನ ಆಲಯವಿದೆ.ಇಲ್ಲಿ ಮಹಾಶಿವ ತಲೆಕೆಳಗಾಗಿ ಅಂದರೆ ಶೀರ್ಷಾಸನ ಹಾಕಿರುವ ಶಿವನ ಮೂರ್ತಿಯಿದೆ. ಹಾಗಾದರೆ ಆ ದೇವಾಲಯದ ಎಲ್ಲಿದೆ ಗೊತ್ತಾ.. ಆಂದ್ರಪ್ರದೇಶದ ಭೀಮಾವರಂನ ಯನಮದುರು ಎಂಬಲ್ಲಿ ಈ ವಿಶೇಷವಾದ ಶಿವನ ದೇವಾಲಯವಿದೆ. ಶಿವನ ತಲೆಯು ಭೂಮಿಯ ಕಡೆ ಮುಖ ಮಾಡಿದರೆ ಆತನ ಪಾದಗಳು ಆಕಾಶದ ಕಡೆ ಮುಖ ಮಾಡಿವೆ. ಶೀರ್ಷಾಸನದ ಪರಮಾತ್ಮ. ಪಕ್ಕದಲ್ಲಿ ಮಾತೆ ಪಾರ್ವತಿಯ ವಿಗ್ರಹವಿದ್ದು ಆಕೆಯ ಮಡಿಲಲ್ಲಿ ಮಗು ಕಾರ್ತಿಕೇಯನನ್ನು ಕಾಣಬಹುದಾಗಿದೆ.

[widget id=”custom_html-3″]

Advertisements

ಶಕ್ತಿ ಮತ್ತು ಈಶ್ವರ ಜೊತೆಯಾಗಿ ನೆಲೆಸಿರುವುದರಿಂದ ಈ ದೇವಾಲಯಕ್ಕೆ ಶಕ್ತೇಶ್ವರ ಎನ್ನುವ ಹೆಸರು ಬಂದಿದೆ. ಈ ದೇವಾಲಯದ ಹೊರಗೆ ಪರಮಪವಿತ್ರ ಕಲ್ಯಾಣಿಯ ಸಹ ಇದೆ. ಈ ದೇವಾಲಯ ನೋಡಲು ರಾಜ್ಯ ಮಾತ್ರವಲ್ಲದೆ ದೇಶದ ಹಲವು ಭಾಗಗಳಿಂದ ಭಕ್ತರ ದಂಡೆ ಹರಿದು ಬರುತ್ತದೆ. ಈ ದೇವಾಲಯದ ಹಿನ್ನಲೆ‌ ನೋಡುವುದಾದರೆ ಈ ಊರಿಗೆ ಯನಮದುರು ಎಂಬ ಹೆಸರು ಬರಲು ಕಾರಣ ಹಿಂದೆ ಶಂಭೂರಾ ಎಂಬ ರಾಕ್ಷಸನು ಶಿವನನ್ನು ತಪಸ್ಸಿನಿಂದ ಒಲಿಸಿಕೊಂಡು ತನಗೆ ಯಮಧರ್ಮ ಮೂಲಕ ಮಾತ್ರ ಮರಣ ಸಂಭವಿಸಬೇಕು ಎಂಬ ವರವನ್ನು ಪಡೆದುಕೊಳ್ಳುತ್ತಾನೆ. ವರ ಪಡೆದುದ್ದರಿಂದ ಅಹಂಕಾರದಿಂದ ಈತನು ಋಷಿಮುನಿಗಳಿಗೆ ಉಪಟಳವನ್ನು ನೀಡಲು ಪ್ರಾರಂಭಿಸುತ್ತಾನೆ. ಋಷಿಮುನಿಗಳು ಯಮಧರ್ಮರಾಯನಿಗೆ ಈ ರಾಕ್ಷಸನನ್ನು ಸಂಹರಿಸಬೇಕು ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳುತ್ತಾರೆ.

[widget id=”custom_html-3″]

ಈ ಮೂಲಕ ಯಮಧರ್ಮ ರಾಕ್ಷಸರ ಮೇಲೆ ಯು’ದ್ಧ’ವನ್ನು ಸಾರುತ್ತಾನೆ. ಯುದ್ಧದಲ್ಲಿ ಯಮಧರ್ಮ ಸೋಲು ಅನುಭವಿಸುತ್ತಾನೆ.ಕೊನೆಯಲ್ಲಿ ಯಮಧರ್ಮ ಶಿವನನ್ನು ಸಹಾಯಕ್ಕಾಗಿ ಯಾಚಿಸುತ್ತಾನೆ. ಭೂಲೋಕದಲ್ಲಿ ಈ ಘ’ಟ’ನೆ ನಡೆಯುವ ಸಮಯದಲ್ಲಿ ಶಿವನು ಕೈಲಾಸದಲ್ಲಿ ಶೀರ್ಷಾಸನ ಭಂಗಿಯಲ್ಲಿ ಧ್ಯಾನದಲ್ಲಿ ಮಗ್ನನಾಗಿರುತ್ತಾನೆ. ಎಷ್ಟು ಹೊತ್ತಾದರೂ ಶಿವನು ಯಮನ ಮುಂದೆ ಪ್ರತ್ಯಕ್ಷವಾಗುವುದಿಲ್ಲ. ಇದನ್ನು ಮನಗಂಡ ಪಾರ್ವತಿದೇವಿಯು ತನ್ನ ಶಕ್ತಿಯಿಂದ ಧ್ಯಾನ ಸ್ಥಿತಿಯಲ್ಲಿದ್ದ ಶಿವನನ್ನ ಭೂಮಿಗೆ ಕರೆತರುತ್ತಾಳೆ. ರಾಕ್ಷಸನ ಸಂಹಾರಕ್ಕಾಗಿ ಯಮನಿಗೆ ವಿಶೇಷ ಅಸ್ತ್ರವೊಂದನ್ನು ನೀಡುತ್ತಾಳೆ ಈ ಅಸ್ತ್ರದಿಂದ ಯಮನು ರಾಕ್ಷಸನನ್ನು ಸಂಹರಿಸುತ್ತಾನೆ.. ನಂತರ ಶಿವನು ಧ್ಯಾನಸ್ಥ ಸ್ಥಿತಿಯಲ್ಲಿ ಇದೇ ಸ್ಥಳದಲ್ಲಿ ನೆಲೆಸುತ್ತಾನೆ. ಆತನ ರಕ್ಷಣೆಗಾಗಿ ತನ್ನ ಪುತ್ರನೊಂದಿಗೆ ಅಲ್ಲಿಯೇ ನೆಲೆ ನಿಲ್ಲುತ್ತಾಳೆ.

ಯಮರಾಯನು ಶಂಭೂರನನ್ನು ಸಂ’ಹ’ರಿಸಿದ ಕಾರಣ ಈ ಸ್ಥಳ ಯಮನಾಪುರಿ ಎಂದು ಹೆಸರಾಗುತ್ತದೆ. ಕಾಲಾನುಕ್ರಮ ಜನರ ಆಡು ಭಾಷೆಯಲ್ಲಿ ಯನಮದುರು ಎಂದು ಪ್ರಖ್ಯಾತಿಯನ್ನು ಹೊಂದಿ ಪವಿತ್ರ ಸ್ಥಳವಾಗಿ ಬದಲಾಗುತ್ತದೆ. ಪಾರ್ವತಿ ಯಮನಿಗೆ ಅಸ್ತ್ರವನ್ನು ಹಸ್ತಾಂತರಿಸಿದ ಸ್ಥಳದಲ್ಲೇ ಪವಿತ್ರ ಕಲ್ಯಾಣಿ ಉಗಮವಾಗಿದೆ‌. ದೇವಸ್ಥಾನದ ಹೊರಗಿರುವ ಕಲ್ಯಾಣಿಯಿಂದಲೇ ದೇವರ ಪೂಜೆ ಹಾಗೂ ಪ್ರಸಾದ ತಯಾರಿಕೆಗೆ ಈ ನೀರನ್ನು ಬಳಸಲಾಗುತ್ತದೆ. ಮಹಾಕವಿ ಕಾಳಿದಾಸನು ಸಹ ಈ ದೇವಾಲಯಕ್ಕೆ ಭೇಟಿ ನೀಡಿ ಶಿವಶಕ್ತಿಯನ್ನು ಆರಾಧಿಸಿದ್ದಾರೆ ಎಂದು ಹೇಳಲಾಗುತ್ತದೆ. ಅತ್ಯಂತ ಪುರಾತನವಾದ ಶಿಥಿಲಗೊಂಡಿದ್ದ ದೇವಾಲಯವನ್ನು ಕೆಲ ವರ್ಷಗಳ ಹಿಂದೆಯಷ್ಟೇ ಪುನರುಜ್ಜೀವನಗೊಳಿಸಲಾಗಿದೆ. ಇಷ್ಟೆಲ್ಲ ಪುರಾಣ ಕಥೆಯನ್ನು ಹೊಂದಿರುವ ದೇವಾಲಯವು ಹಲವು ಚಮತ್ಕಾರಗಳಿಗೆ ಹೆಸರಾಗಿದೆ‌.‌ ಕಷ್ಟ ಎಂದು ಇಲ್ಲಿಗೆ ಬರುವ ಭಕ್ತರ ಬೇಡಿಕೆಯನ್ನು ಇಡೆರುತ್ತವೆ ಎಂಬ ನಂಬಿಕೆ ಇಲ್ಲಿದೆ‌. ಈ ವಿಶಿಷ್ಟವಾದ ತಲೆ ಕೆಳಗಾದ ಶಿವನ ದರ್ಶನ ಪಡೆಯಲು ಒಮ್ಮೆಯಾದರು ಈ ದೇವಾಲಯಕ್ಕೆ ಭೇಟಿ ನೀಡಿ.

[widget id=”custom_html-3″]