Advertisements

ರಾಬರ್ಟ್ ಚಿತ್ರದಲ್ಲಿ ನಟಿಸಲು ದರ್ಶನ್ ಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರ ಬಿಡುಗಡೆಗೆ ಇನ್ನೇನು ಎರಡು ದಿನಗಳು ಮಾತ್ರ ಬಾಕಿ ಉಳಿದಿದ್ದು ಇಡೀ ರಾಜ್ಯವೇ ಸಿನಿಮಾ ನೋಡಲು ಬಹಳ ಕುತೂಹಲದಿಂದ ಕಾಯುತ್ತಿದೆ. ಹಾಗಾದ್ರೆ ರಾಬರ್ಟ್ ಚಿತ್ರಕ್ಕಾಗಿ ದರ್ಶನ್ ಅವರು ತೆಗೆದುಕೊಂಡ ಸಂಭಾವನೆ ಎಷ್ಟು ಅಂತ ನೊಡೊಣ. ರಾಬರ್ಟ್ ಚಿತ್ರ ಇಡೀ ರಾಜ್ಯಾದ್ಯಂತ ಮೊದಲ ದಿನ 700 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.

Advertisements

ಈಗಾಗಲೇ 656 ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗೋದು ಖಚಿತವಾಗಿದೆ. ಇನ್ನೂ ಸುಮಾರು 50 ಚಿತ್ರ ಮಂದಿರಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗುವ ನಿರೀಕ್ಷೆ ಇದೆ. ಇದರ ಜೊತೆಗೆ 90ಕ್ಕು ಅಧಿಕ ಮಲ್ಟಿಪ್ಲೆಕ್ಸ್ ನಲ್ಲಿ ರಾಬರ್ಟ್ ಅಬ್ಬರಿಸಲಿದ್ದಾರೆ.. ಇದೆಲ್ಲವನ್ನೂ ಲೆಕ್ಕ ಹಾಕಿದರೆ ಗುರುವಾರ ಒಂದೇ ದಿನ ರಾಬರ್ಟ್ ಚಿತ್ರ 2 ಸಾವಿರಕ್ಕೂ ಹೆಚ್ಚು ಶೋಗಳು ಪ್ರದರ್ಶನ ಕಾಣಲಿದೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲೂ ಕೂಡ ರಾಬರ್ಟ್ ಅಬ್ಬರಿಸಲಿದ್ದಾರೆ..

ಇನ್ನೂ ರಾಬರ್ಟ್ ಚಿತ್ರದ ಬಜೆಟ್ ವಿಷಯಕ್ಕೆ ಬರೋದಾದರೆ ಈ ಚಿತ್ರಕ್ಕೆ ಸುಮಾರು 50 ರಿಂದ 60 ಕೋಟಿ ಖರ್ಚಾಗಿದೆ ಎಂದು ಹೆಳಲಾಗಿದೆ. ಈ ಚಿತ್ರದ ಶೇಖಡಾ 80 ರಷ್ಟು ಭಾಗವನ್ನ ಸೆಟ್ ಗಳನ್ನ ಹಾಕಿ ಶೂಟ್ ಮಾಡಲಾಗಿದೆ. ಇನ್ನೂ ಈ ಚಿತ್ರಕ್ಕೆ ದರ್ಶನ್ ಅವರು ಬರೋಬ್ಬರಿ 15 ರಿಂದ 16 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.. ನಿಮ್ಮ ಪ್ರಕಾರ ರಾಬರ್ಟ್ ಚಿತ್ರ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್ ಮಾಡುತ್ತದೆ ಎಂದು ನಿಮ್ಮ ಅನಿಸಿಕೆ ತಿಳಿಸಿ.