Advertisements

ರಾಬರ್ಟ್ ಸಿನಿಮಾ ಒಂದೇ ದಿನಕ್ಕೆ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಗೊತ್ತಾ? ಬಾಕ್ಸ್ ಆಫಿಸ್ ಧೂಳ್..

Cinema

ನಮಸ್ತೇ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರ ಇಡೀ ದೇಶದಾದ್ಯಂತ ಅದ್ದೂರಿಯಾಗಿ ಪ್ರದರ್ಶನವಾಗುತಿದ್ದು ಬರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅದೇ ರೀತಿ ರಾಬರ್ಟ್ ಚಿತ್ರ ನೋಡಿದ ಪ್ರೇಕ್ಷಕರು ಹೇಳಿದ್ದೇ‌ನು, ಒಂದೇ ದಿನಕ್ಕೆ ರಾಬರ್ಟ್ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂದು ತಿಳಿಯೋಣ. ರಾಬರ್ಟ್ ಸಿನಿಮಾ ಕರ್ನಾಟಕದಲ್ಲಿ ಸುಮಾರು 700 ಕ್ಕು ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದೂ.. 180 ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬೆಳಗ್ಗೆ 6 ಘಂಟೆಯಿಂದಲೇ ರಾಬರ್ಟ್ ಶೋಗಳು ಆರಂಭವಾಗಿದ್ದು ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

Advertisements

ರಾಬರ್ಟ್ ಚಿತ್ರ ಮೊದಲ ದಿನದ ಶೋಗಳು ಮುಗಿದಿದ್ದು, ರಾಬರ್ಟ್ ಚಿತ್ರವನ್ನು ನೋಡಿದ ಅಭಿಮಾನಿಗಳು ಮತ್ತು ಸಿನಿಮಾ ಪ್ರಿಯರು ಸಿನಿಮಾ ನೋಡಿ ತುಂಬಾ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.. ಚಾಲೆಂಜಿಂಗ್ ಸ್ಟಾರ್ ಸಿನಿಮಾ ಎಂದಾಕ್ಷಣ ನೆನಪಾಗುವುದು ಆ್ಯಕ್ಷನ್ ದೃಶ್ಯಗಳು. ರಾಬರ್ಟ್ ಸಿನಿಮಾದಲ್ಲೂ ಕೂಡ ಬಹಳಷ್ಟು ಆ್ಯಕ್ಷನ್ ಇದ್ದೂ ಪಸ್ಟ್ ಆಫ್ ನಲ್ಲಿ ಎರಡು ಆ್ಯಕ್ಷನ್ ದೃಶ್ಯಗಳಿದ್ದೂ ಸೆಕೆಂಡ್ ಆಫ್ ನಲ್ಲಿ ಮುರು ಆ್ಯಕ್ಷನ್ ದೃಶ್ಯಗಳಿವೆ.

ರಾಬರ್ಟ್ ಸಿನಿಮಾ ಎಲ್ಲೋ ನೋಡಿದ್ದೀವಿ ಅನಿಸಿದರೂ ಕೂಡ ನಿರ್ದೇಶಕರು ರಾಬರ್ಟ್ ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ.. ಅದ್ದೂರಿಯಾಗಿ ಮೇಕಿಂಗ್ ಮೂಲಕ ತೆರೆ ಮೇಲೆ ತಂದಿದ್ದಾರೆ. ಇನ್ನೂ ರಾಬರ್ಟ್ ಚಿತ್ರದ ಮೊದಲ ದಿನದ ಕಲೆಕ್ಷನ್ ವಿಚಾರಕ್ಕೆ ಬಂದರೆ.. ಈ ಚಿತ್ರ ಮೊದಲ ದಿನವೇ ಸುಮಾರು 25 ಕೋಟಿ ಕಲೆಕ್ಷನ್ ಮಾಡಿರಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಮಾಡಿದ್ದಾರೆ.