Advertisements

ರಾಬರ್ಟ್ ಸಿನಿಮಾ ಹಿಟ್! ಆ್ಯಕ್ಟಿಂಗ್ ಓಕ್ಕೆ.. ಆದ್ರೆ ಕಥೆ?

Cinema

ನಮಸ್ತೆ ಸ್ನೇಹಿತರೆ, ಇಂದು ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ರಾಬರ್ಟ್ ಬಿಡುಗಡೆಯಾಗಿದೆ. ಹಾಗಾದರೆ  ಸಿನಿಮಾ ಹೇಗಿದೆ, ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು ಗೊತ್ತಾ? ಮೊದಲನೆಯದಾಗಿ ಸಿನಿಮಾದಲ್ಲಿ ದರ್ಶನ್ ಅವರ ಎಂಟ್ರಿ ನೋಡಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿರುತ್ತಾರೆ.. ಆ್ಯಕ್ಷನ್ ದೃಶ್ಯಗಳೊಂದಿಗೆ ಅವರಿಗೆ ಎಂಟ್ರಿ ಗೋಳಿಸೋದಕ್ಕೆ ನಿರ್ದೇಶಕರು ಕಾಯುತ್ತಿರುತ್ತಾರೆ. ಆದರೆ ಈ ಬಾರಿ ನಿರ್ದೇಶಕ ತರುಣ್ ಸುದೀರ್ ಅವರು ದರ್ಶನ್ ಅವರಿಗೆ.. ಬೇರೆ ರೀತಿಯಲ್ಲಿ ಎಂಟ್ರಿಗೊಳಿಸಿದ್ದಾರೆ. ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಅವರು ಹನುಮನ ಪಾತ್ರದ ಮೂಲಕ ಎಂಟ್ರಿ ಕೊಡುತ್ತಾರೆ.

Advertisements

ದರ್ಶನ್ ಈ ಮೊದಲು ಸಾಕಷ್ಟು ಬಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಈ ಸಿನಿಮಾದ ಪಾತ್ರ.. ಇವೆಲ್ಲವುಗಳಿಂತಲೂ ವಿಶಿಷ್ಠವಾಗಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ದರ್ಶನ್ ಮಿಂಚಿದ್ದಾರೆ. ಇದು ಪ್ರೇಕ್ಷಕರಿಗೆ ತುಂಬಾನೆ ಇಷ್ಟವಾಗಿದೆ. ರಾಬರ್ಟ್ ಸಿನಿಮಾದ ಮೊದಲಾರ್ಧದಲ್ಲಿ ಕಾಮಿಡಿ ಪಾತ್ರಗಳು ಸಾಕಷ್ಟು ಕ್ಲಿಕ್ ಆಗಿದೆ. ಶಿವರಾಜ್ ಕೆ.ಆರ್ ಪೇಟೆ, ಚಿಕ್ಕಣ್ಣ, ದರ್ಮಣ್ಣ ಪಾತ್ರಗಳು ಸಖತ್ ಹೈಲೇಟ್ ಆಗಿವೆ.  ರಾಬರ್ಟ್ ನ ಸೆಕೆಂಡ್ ಆಫ್ ನಲ್ಲಿ ಸಿನಿಮಾ ಸಾಕಷ್ಟು ಟರ್ನ್ ಅಂಡ್ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತದೆ.. ಇದನ್ನು ನೋಡಿದ ಅಭಿಮಾನಿಗಳು ರೋಮಾಂಚನ ಗೊಳ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ.

ಪಸ್ಟ್ ಆಫ್‌ ನಲ್ಲಿ ಅದ್ಬುತ ಎನಿಸುವ ಸಿನಿಮಾ ಸೆಕೆಂಡ್ ಆಫ್ ನಲ್ಲಿ ಮತ್ತಷ್ಟು ರೋಚಕತೆ ಪಡೆದುಕೊಳ್ಳಲಿದೆ.. ವಿನೋದ್ ಪ್ರಭಾಕರ್ ಅವರು ಸಿನಿಮಾದ ಸೆಕೆಂಡ್ ಆಫ್ ನಲ್ಲಿ ಕಾಣಿಸಿಕೊಳ್ಳಲಿದ್ದು ಅವರ ಪಾತ್ರಕ್ಕೂ ತುಂಬಾನೆ ಪ್ರಾಮುಖ್ಯತೆ ಇದೆ. ಇನ್ನೂ ವಿಲನ್ ಪಾತ್ರದಲ್ಲಿ ಜಗಪತಿ ಬಾಬು ಮತ್ತು ರವಿಶಂಕರ್ ಅವರು ತೆರೆ ಮೇಲೆ ಖಡಕ್ಕಾಗಿ ಅಬ್ಬರಿಸಿದ್ದಾರೆ. ಡಿ ಬಾಸ್ ಸಿನಿಮಾ ಎಂದಾಕ್ಷಣ ನೆನಪಾಗುವುದು ಆ್ಯಕ್ಷನ್ ದೃಶ್ಯಗಳು.. ರಾಬರ್ಟ್ ಸಿನಿಮಾದಲ್ಲೂ ಸಾಕಷ್ಟು ಆ್ಯಕ್ಷನ್ ಇದ್ದು ಪಸ್ಟ್ ಆಫ್ ನಲ್ಲಿ ಎರಡು ಆ್ಯಕ್ಷನ್ ದೃಶ್ಯಗಳಿದ್ದೂ..

ಸೆಕೆಂಡ್ ಆಫ್ ನಲ್ಲಿ ಮೂರು ಆ್ಯಕ್ಷನ್ ದೃಶ್ಯಗಳಿವೆ. ಇನ್ನೂ ಈ ಸಿನಿಮಾದ ನಾಯಕಿ ಪಾತ್ರ ಮಾಡಿರುವ ಆಶಾ ಭಟ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.. ಈ ಚಿತ್ರದ ಪ್ಲಸ್ ಪಾಯಿಂಟ್ ಅಂದರೆ ದರ್ಶನ್ ಅವರ ನಟನೆ ಬ್ಯಾಗ್ರೌಂಡ್ ಮ್ಯೂಸಿಕ್  ಮತ್ತು ಸಿನಿಮಾ ಆಟೋಗ್ರಫಿ. ಕೊನೆಯದಾಗಿ ಈ ಸಿನಿಮಾ ಎಲ್ಲೋ ನೋಡಿದ ರೀತಿ ಅನಿಸಿದ್ರೂ ಕೂಡ ‌ನಿರ್ದೇಶಕರು ರಾಬರ್ಟ್ ಚಿತ್ರವನ್ನು ಬಹಳ ಅಚ್ಚುಕಟ್ಟಾಗಿ ಅದ್ದೂರಿಯಾಗಿ ತೆರೆಮೇಲೆ ತಂದಿದ್ದಾರೆ.. ನಿಮ್ಮ ಪ್ರಕಾರ ಈ ಸಿನಿಮಾ ಹೇಗಿದೆ ಎಂದು ನಿಮ್ಮ ಅನಿಸಿಕೆ ತಿಳಿಸಿ.