Advertisements

ಖದರ್ ಲುಕ್ ನಲ್ಲಿ ರಾಕಿ ಭಾಯ್, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ಕೆ ಜಿ ಎಫ್ 2.

Cinema

ಕನ್ನಡ ಚಲನಚಿತ್ರೋದ್ಯಮವನ್ನು ಬಿಡಿ, ಇಡೀ ದೇಶ ಈಗ ದೊಡ್ಡ ಪರದೆಯಲ್ಲಿ ರಾಕಿ ಭಾಯ್ ಅನ್ನು ನೋಡಲು ಕಾಯುತ್ತಿದೆ. ಕೆಜಿಎಫ್ 2 ಈ ಸಮಯದಲ್ಲಿ ಭಾರತದಲ್ಲಿ ಹೆಚ್ಚು ನಿರೀಕ್ಷಿತ ಸಿನೆಮಾ ಆಗಿದೆ.

Advertisements

ಕೆಲವು ತಿಂಗಳುಗಳ ಹಿಂದೆ, ಕೆ.ಜಿ.ಎಫ್ 2 ಚಿತ್ರವು ಅಕ್ಟೋಬರ್ 23, 2020 ರಂದು ಚಿತ್ರಮಂದಿರಗಳಿಗೆ ಬರಲಿದೆ ಎಂದು ಘೋಷಿಸಿತ್ತು. ಆದರೆ COVID-19 ಸಾಂಕ್ರಾಮಿಕ ರೋಗ ಇರುವ ಕಾರಣ ಚಿತ್ರಮಂದಿರಗಳು ಸ್ಥಗಿತಗೊಂಡಿದೆ. ಕೆ.ಜಿ‌.ಎಪ್ 2 ಚಲನಚಿತ್ರ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗುತ್ತದೆಯೇ ಇಲ್ಲವೋ ಕಾದು ನೋಡಬೇಕಾಗಿದೆ.

ಕೆ.ಜಿ‌.ಎಪ್ 2 ಬಿಡುಗಡೆ ಅತ್ತಿರದಲ್ಲಿದ್ದರೆ ಅಥವಾ ಟ್ರೈಲರ್ ಅಥವಾ ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದರೂ ಸಹ, ಟ್ರೆಂಡಿಂಗ್ ನಲ್ಲಿ ಇರುವುದು ಸಾಮಾನ್ಯ. ಆದರೆ #KgfChapter2 ಯಾಶ್ ಟ್ಯಾಗ್ ಇಂದು ಅಂತರ್ಜಾಲದಲ್ಲಿ ಭಾರಿ ಟ್ರೆಂಡಿಂಗ್ ನಲ್ಲಿ ಇದೆ.

ಅದಕ್ಕೆ ಕಾರಣ ರಾಕಿಂಗ್ ಸ್ಟಾರ್ ಯಶ್, ಹೌದು ಸಾಮಾಜಿಕ ಜಾಲತಾಣಗಳಲ್ಲಿ ಯಶ್ ತಮ್ಮ ಡಿಪಿಯನ್ನು ಬದಲಾಯಿಸಿದ್ದಾರೆ. ಈ ಡಿಪಿಯಲ್ಲಿ ಯಶ್ ಖದರ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಲುಕ್ ಅನ್ನು ನೋಡಿ ಸಮಯ ವ್ಯರ್ಥ ಮಾಡದೆ ಯಾಶ್ ಟ್ಯಾಗ್ ಬಳಸಿ ವೈರಲ್ ಮಾಡಿದ್ದಾರೆ. ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ KgfChapter2. ಟ್ರೆಂಡಿಂಗ್ ಸೃಷ್ಟಿಯಾಗಿದೆ.