Advertisements

ಸೂಜಿಯಿಂದ ಬುಲೆಟ್ ಆಗಿದ್ದು ಹೇಗೆ ಗೊತ್ತಾ?

Cinema

ಹುಡುಗರ ಕ್ರಶ್ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್. ಒಂದು ಊರಲ್ಲಿ ಒಬ್ಬ ಹುಡುಗ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ ಹೋಗುತ್ತಿದ್ದರೆ ಅದರ ಶಬ್ದ ಕೇಳಿ ವಾವ್ ಬುಲೆಟ್ ಬೈಕ್ ಎನ್ನದವರಿಲ್ಲ. ರಾಯಲ್ ಎನ್ಫೀಲ್ಡ್ ಇದ್ದರೆ ಅವರು ನಿಜಕ್ಕೂ ಶ್ರೀಮಂತರು ಎಂಬ ಭಾವನೆ ಇವತ್ತಿಗೂ ಜನರಲ್ಲಿ ಇದೆ. ನೂರು ವರ್ಷಕ್ಕೂ ಹೆಚ್ಚುಕಾಲ ಇತಿಹಾಸವಿರುವ ರಾಯಲ್ ಎನ್ಫೀಲ್ಡ್ ಜಗದ್ವಿಖ್ಯಾತ ಆಗಿದ್ದು ಹೇಗೆ ಅದರ ಹುಟ್ಟು ಬೆಳವಣಿಗೆ ಹೇಗೆ? ಇವೆಲ್ಲ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತೆ. ಹಾಗಾದರೆ ಇದೆಲ್ಲವನ್ನು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Advertisements

ರಾಯಲ್ ಎನ್ಫೀಲ್ಡ್ ದ್ವಿಚಕ್ರವಾಹನದ ಲೋಕದಲ್ಲಿ ಅತಿ ದೊಡ್ಡ ಹೆಸರು ಮಾಡಿದೆ. ಇದರ ಮೂಲ ಪಶ್ಚಿಮ ಇಂಗ್ಲೆಂಡ್. ಇಂಗ್ಲೆಂಡ್ ಬಳಿಯ ರೆಡಿಷನಲ್ಲಿ ಇದರ ಕೇಂದ್ರ ಕಚೇರಿ ಇದೆ. ಜಾರ್ಜ್ ಡೌನ್ಸೆಂಡ್ ಎಂಬಾತ ಈ ಕಂಪನಿಯನ್ನು ಶುರುಮಾಡಿದ. ಈತ ಮೊದಲು ಸೂಜಿ ವ್ಯಾಪಾರಿಯಾಗಿದ್ದ. ಇವನ ಮಗ ಸೈಕಲ್ ಗಳ ಬಿಡಿಭಾಗಗಳನ್ನು ತಯಾರಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸ್ವಲ್ಪ ದಿನದ ಹೊತ್ತಿಗೆ ಇವರು ಬೈಸಿಕಲ್ ನ್ನು ತಯಾರಿಸುತ್ತಾರೆ. ಕೆಲವು ದಿನಗಳ ನಂತರ ತಮ್ಮ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ ಡೌನ್ಸೆಂಡ್ ಅದನ್ನು ಆಲ್ಬರ್ಟ್ ಎಡ್ಡಿ ಮತ್ತು ರಾಬರ್ಟ್ ಸ್ಮಿತ್ ಎಂಬುವರಿಗೆ ತನ್ನ ಕಂಪನಿಯ ಉತ್ತರಾಧಿಕಾರವನ್ನು ಬಿಟ್ಟುಕೊಡುತ್ತಾನೆ. ಇಂದಿನ ದಿನಗಳಲ್ಲಿ ರಾಯಲ್ ಎನ್ಫೀಲ್ಡ್ ಬ್ರಾಂಡ್ ನ ಅಧಿಕೃತ ಸ್ಥಾಪಕರು ಎನಿಸಿಕೊಂಡರು.

1902ರಿಂದ ನಿರಂತರವಾಗಿ ಇವರು ರಾಯಲ್ ಎನ್ಫೀಲ್ಡ್ ಬೈಕ್ ನ ತಯಾರಿಕೆಯನ್ನು ಪ್ರಾರಂಭಿಸಿದರು. ಇವತ್ತಿಗೂ ಸಹ ರಾಯಲ್ ಎನ್ಫೀಲ್ಡ್ ಜಾಗತಿಕ ಮಾರುಕಟ್ಟೆಯಲ್ಲಿನ ಅತ್ಯಂತ ಹಳೆಯ ಮತ್ತು ನಂಬರ್ ಒನ್ ಬ್ರಾಂಡ್ ಆಗಿದೆ. ಮೊದಲ ಮಹಾಯುದ್ಧದ ಸಂದರ್ಭದಲ್ಲಿಯು ಸಹ ರಾಯಲ್ ಎನ್ಫೀಲ್ಡ್ ವೆಪನ್ ವಾಹನವಾಗಿ ಬಳಸಲ್ಪಟ್ಟಿತು. ಕ್ರಮೇಣವಾಗಿ ಭಾರತಕ್ಕೂ ಕೂಡ ಬುಲೆಟ್ ಆಗಮಿಸಿತು. ಮದ್ರಾಸ್ ಮೋಟರ್ಸ್ ರಾಯಲ್ ಎನ್ಫೀಲ್ಡ್ ನ ಹಕ್ಕುಗಳನ್ನು ಖರೀದಿಸಿ ಭಾರತದಲ್ಲಿ ಅದರ ತಯಾರಿಕೆಯನ್ನು ಆರಂಭಿಸಿತು. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ದ್ವಿಚಕ್ರ ವಾಹನಗಳಿಗೆ ಡಿಸ್ಕ್ ಬ್ರೇಕ್ ಅಳವಡಿಸಿರುವ ಬ್ರಾಂಡ್ ಎಂಬ ಖ್ಯಾತಿ ರಾಯಲ್ ಎನ್ಫೀಲ್ಡ್ ಗೆ ಸಲ್ಲುತ್ತದೆ.

ಈ ಬೈಕು ಬುಲೆಟ್ ನಂತೆ ವೇಗವಾಗಿ ಚಲಿಸುತ್ತದೆ ಎಂಬ ಕಾರಣಕ್ಕೆ ರಾಯಲ್ ಎನ್ಫೀಲ್ಡ್ ಅನ್ನ ಬುಲೆಟ್ ಎಂದೇ ಕರೆಯಲಾಯಿತು. 2009ರಲ್ಲಿ ವರ್ಷಕ್ಕೆ 25 ಸಾವಿರ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದ ಈ ಬೈಕು ಇಂದು ಪ್ರತಿ ತಿಂಗಳಿಗೆ ಸರಿ ಸುಮಾರು 30 ಸಾವಿರಕ್ಕೂ ಹೆಚ್ಚು ಭಾರತ ದೇಶದ ಮಾರುಕಟ್ಟೆ ಒಂದರಲ್ಲಿಯೇ ಮಾರಾಟವಾಗುತ್ತಿವೆ. ರಾಯಲ್ ಎನ್ಫೀಲ್ಡ್ ನಮ್ ಮಾರುಕಟ್ಟೆ ಭಾರತ-ಜಪಾನ್ ಇಂಗ್ಲೆಂಡ್ ಇಟಲಿ ಸೇರಿದಂತೆ 45ಕ್ಕೂ ಅಧಿಕ ರಾಷ್ಟ್ರಗಳಿಗೆ ವ್ಯಾಪಿಸಿದೆ. ಹೀಗೆ ನೂರಾರು ವರ್ಷಗಳಿಂದ ರಾಯಲ್ ಎನ್ಫೀಲ್ಡ್ ಜಾಗತಿಕ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ.

Leave a Reply

Your email address will not be published. Required fields are marked *