Advertisements

ಈ ದ್ರಾಕ್ಷಿಯ ಒಂದು ಗೊಂಚಲಿನ ಬೆಲೆ 7 ಲಕ್ಷ ರೂಪಾಯಿ.. ಯಾಕಿಷ್ಟು ಬೆಲೆ, ಇದನ್ನ ಬೆಳೆಯೋದು ಹೇಗೆ ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಒಂದು ಕೇಜಿಯ ದ್ರಾಕ್ಷಿ ಬೆಲೆ ಸಾಮಾನ್ಯವಾಗಿ 30 ರಿಂದ 40 ರುಪಾಯಿ ಇರುತ್ತದೆ.. ಅಕಸ್ಮಾತ್ ದ್ರಾಕ್ಷಿ 100 ರಿಂದ 150 ರೂಪಾಯಿ ವರೆಗೂ ಹೋಗಬಹುದು. ಆದರೆ ಈ ದ್ರಾಕ್ಷಿ ಒಂದು ಗೊಂಚಲಿನ ಬೆಲೆ 7 ಲಕ್ಷ ರೂಪಾಯಿ.. 1995 ರಲ್ಲಿ ಜಪಾನ್ ನಲ್ಲಿ 400 ದ್ರಾಕ್ಷಿ ತಳಿಯನ್ನು ಸಂಶೊಧನೆಗೆ ಒಳಪಡಿಸಿದಾಗ ಹುಟ್ಟಿದ್ದೇ ರುಬಿ ರೋಮನ್. ಇದು ಪ್ರಪಂಚದ ದುಬಾರಿ ದ್ರಾಕ್ಷಿ ಎಂದು ಪ್ರಸಿದ್ಧಿ ಗಳಿಸಿರುವ ಈ ದ್ರಾಕ್ಷಿ ಹೆಸರು ರುಬಿ ರೋಮನ್.. ಇದನ್ನು ಜಪಾನ್ ನಲ್ಲಿ ಬೆಳೆಯಲಾಗುತ್ತದೆ. ಹಾಗೆ ಈ ಬಾರಿ ಒಂದು ದ್ರಾಕ್ಷಿಯ ಗೊಂಚಲು 7 ಲಕ್ಷಕ್ಕೆ ಸೇಲ್ ಆಗುವ ಮೂಲಕ ದಾಖಲೆ ಬರೆದಿದೆ..

Advertisements

ಅಷ್ಟಕ್ಕೂ ಈ ದ್ರಾಕ್ಷಿಗೆ ಯಾಕೆ ಇಷ್ಟೊಂದು ಬೆಲೆ ಗೊತ್ತಾ? ರುಬಿ ರೋಮನ್ ದ್ರಾಕ್ಷಿ ಅಂತಿಂತ ದ್ರಾಕ್ಷಿ ಅಲ್ಲ. ಈ ದ್ರಾಕ್ಷಿಯು ರಸ್ಪೂರಿವಾಗಿದ್ದು ಒಂದು ಬೈಟ್ ನಲ್ಲಿಯೇ ಬಾಯಿ ಸಂಪೂರ್ಣವಾಗಿ ಸಿಹಿ ರಸದಿಂದ ಕೂಡುತ್ತದೆ.. ದೊಡ್ಡ ದೊಡ್ಡ ಶ್ರೀಮಂತರಿಗೆ ಈ ದ್ರಾಕ್ಷಿಯ ಮೇಲೆ ಆಸೆ ಜ್ಯಾಸ್ತಿ ಹಾಗೆ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಈ ದ್ರಾಕ್ಷಿಯನ್ನು ಉಡುಗೊರೆಯಾಗಿ ಕೊಡಲಾಗುತ್ತದೆ. ರುಬಿ ರೋಮನ್ ದ್ರಾಕ್ಷಿಯ ಒಂದು ಗೊಂಚಲಿನಲ್ಲಿ 24 ದ್ರಾಕ್ಷಿಯ ಹಣ್ಣುಗಳಿರುತ್ತವೆ ಹಾಗೆ ಒಂದು ದ್ರಾಕ್ಷಿ 20 ಗ್ರಾಂ ತೂಕ ಹೊಂದಿರುತ್ತದೆ. ಸಿಹಿ ಜೊತೆ ಉತ್ತಮ ಪೌಷ್ಟಿಕಾಂಶ ಹೊಂದಿರುವ ಈ ದ್ರಾಕ್ಷಿಗೆ ರಷ್ಯಾ, ಜಪಾನ್, ಚೀನಾ ದೇಶಗಳಲ್ಲಿ ಬಾರಿ ಬೇಡಿಕೆ ಇದೆ..

ಈ ಶ್ರೀಮಂತ ದ್ರಾಕ್ಷಿಗೆ ಜಪಾನ್ ದೇಶ ಒಂದು ಮಾ’ನದಂಡವನ್ನು ವಿಧಿಸಿದೆ. ಆ ಟೆಸ್ಟ್ ನಲ್ಲಿ ಪಾಸ್ ಆದರೆ ರುಬಿ ರೋಮನ್ ದ್ರಾಕ್ಷಿ ಮಾತ್ರ ದುಬಾರಿ ಬೆಲೆಗೆ ಮಾರಾಟ ಮಾಡಬಹುದಾಗಿದೆ.. ಆಗಿದ್ರೆ ಆ ಮಾ’ನದಂಡ ಏನು ಗೊತ್ತಾ? ಒಂದು ದ್ರಾಕ್ಷಿಯ ತೂಕ 20 ಗ್ರಾಂನಿಂದ 30 ಗ್ರಾಂ ಇರಬೇಕು. ಆ ದ್ರಾಕ್ಷಿ 18 ಪರ್ಸೆಂಟ್ ಶು’ಗರ್ ಕಂಟೆಂಟ್ ಹೊಂದಿರಲೇ ಬೇಕು ಕಡಿಮೆ ಆ’ಸಿಡಿಟಿ ಹೊಂದಿರಬೇಕು.. ಹಾಗೂ ಒಂದು ಗೊಂಚಲಿನ ತೂಕ ಕನಿಷ್ಠ 700 ಗ್ರಾಂ ಇರಬೇಕು ಇಗಿದ್ದರೆ ಮಾತ್ರ ಈ ದ್ರಾಕ್ಷಿಯನ್ನು ದುಬಾರಿ ಬೆಲೆಗೆ ಮಾರಾಟ ಮಾಡಬಹುದಾಗಿದೆ.ಆ ಟೆಸ್ಟ್ ನಲ್ಲಿ ಪಾಸ್ ಆದರೆ ರುಬಿ ರೋಮನ್ ದ್ರಾಕ್ಷಿ ಮಾತ್ರ ದುಬಾರಿ ಬೆಲೆಗೆ ಮಾರಾಟ ಮಾಡಬಹುದಾಗಿದೆ..

ಈ ದ್ರಾಕ್ಷಿಯನ್ನು ನೀವು ಬೆಳೆಯಲು ಇಚ್ಚಿಸಿದರೆ ಅಮೇಜಾನ್ ಹಾಗೂ ಇತರ ಅಂತಾರಾಷ್ಟ್ರೀಯ ವೆಬ್ಸೈಟ್ ಗಳಲ್ಲಿ ರುಬಿ ರೋಮನ್ ದ್ರಾಕ್ಷಿಯ ಬೀಜಗಳನ್ನು ಮಾರಾಟ ಮಾಡಲಾಗುತ್ತಿದೆ.. ಪ್ರಾರಂಭಿಕ ಹಂತ ಹಂತವಾಗಿ 10, 20 ಬೀಜ ಹಾಕಿ ಬೆಳೆದು ನೋಡಬಹುದಾಗಿದೆ. ರುಬಿ ರೋಮನ್ ದ್ರಾಕ್ಷಿ ಬೆಳೆಯುತ್ತಿರುವ ರೈತರ ಪ್ರಕಾರ ಮುಖ್ಯವಾಗಿ ಈ ದ್ರಾಕ್ಷಿ ಗಿಡ ಬೆಳೆಯುವಾಗ ಭೂಮಿಯ ತೇವಾಂಶದ ಕಡೆಗೆ ಹೆಚ್ಚು ಗಮನ ಕೊಡಬೇಕು.. ಯಾಕೆಂದರೆ ತೇವಾಂಶ ಹೆಚ್ಚಾದರೆ ಈ ಗಿಡಗಳು ಸಾ’ಯು’ತ್ತವೆ ಎಂದು ಹೇಳಲಾಗಿದೆ.