ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕರಲ್ಲಿ ಎಸ್. ಮಹೇಂದರ್ ಕೂಡ ಒಬ್ಬರು. ಹಲವಾರು ನಟರಿಗೆ ಸ್ಟಾರ್ ಪಟ್ಟ ಕೊಟ್ಟ ಅದ್ಭುತ ನಿರ್ದೇಶಕ. ಕನ್ನಡ ಚಿತ್ರರಂಗದಲ್ಲಿ ಸೆಂಟಿಮೆಂಟಲ್ ಚಿತ್ರಗಳನ್ನ ಮಾಡಿ ಎಷ್ಟೋ ಜನರ ಕಣ್ಣಿನಲ್ಲಿ ನೀರುಕ್ಕುವಂತೆ ಮಾಡಿದ ಅದ್ಭುತ ಕಲಾಕಾರ. ಆದರೆ ಎಷ್ಟೋ ಜನರ ಬೆಳವಣಿಗೆಗೆ ಕಾರಣರಾದ ಎಸ್.ಮಹೆಂದರ್ ಜೀವನದಲ್ಲಿ ಆಗಿದ್ದೇ ಬೇರೆ. ಹಾಗಾದ್ರೆ ಅವರು ಈಗ ಹೇಗಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನ ತಿಳಿಯೋಣ ಬನ್ನಿ..
ಅದೊಂದು ಕಾಲದಲ್ಲಿ ಹಿಟ್ ಮೇಲೆ ಹಿಟ್ ಚಿತ್ರಗಳನ್ನ ಕೊಡುತ್ತಿದ್ದ ಮಹೇಂದರ್ ಆಗ ನಿರ್ಮಾಪಕರ ನಿರ್ದೇಶಕ ಎನಿಸಿಕೊಂಡಿದ್ದರು. ಹೌದು, ಸಂಬಂಧಗಳನ್ನೇ ಕಥಾವಸ್ತುವನ್ನಾಗಿ ಮಾಡಿ ಕಡಿಮೆ ಬಜೆಟ್ ನಲ್ಲಿ ಸಿನಿಮಾ ತೆಗೆದು ಹೆಚ್ಚು ಲಾಭ ಮಾಡಿಕೊಡುತ್ತಿದ್ದ ಮಹೇಂದರ್ ಗಾಗಿ ನಿರ್ಮಾಪಕರು ಕ್ಯೂ ನಿಲ್ಲುತ್ತಿದ್ದರಂತೆ. ಹೀಗೆ ಎಲ್ಲವೂ ಚೆನ್ನಾಗಿಯೇ ಹೋಗುತಿತ್ತು. ಇನ್ನು ಮಹೇಂದರ್ ಅವರ ನಿರ್ದೇಶನದ ಚಿತ್ರಗಳಲ್ಲಿ ಹಾಗೂ ಅವರ ಜೊತೆ ನಟಿಸಿದ್ದ, ನಟಿ ಶ್ರುತಿ ಹಾಗೂ ಮಹೇಂದರ್ ನಡುವೆ ಪ್ರೀತಿ ಬೆಳೆದು ೧೯೯೮ರಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ಈ ಮುದ್ದಾದ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸುತ್ತದೆ.

ಇನ್ನು ಶ್ರುತಿ ಮತ್ತು ಮಹೇಂದರ್ ಅವರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಇನ್ನು ಇದೆ ವೇಳೆ ತನ್ನ ಹುಟ್ಟೂರಾದ ಕೊಳ್ಳೆಗಾಳಕ್ಕೆ ಏನಾದರು ಮಾಡಬೇಕು ಎಂಬ ಬಯಕೆಯಿಂದ ಮಹೇಂದರ್ ರಾಜಕೀಯಕ್ಕೆ ಧುಮಿಕಿ ಕೊಳ್ಳೇಗಾಲದ ವಿಧಾನಸಭಾ ಚುನಾವಣೆಗೂ ಕೂಡ ನಿಲ್ಲುತ್ತಾರೆ. ಇನ್ನು ರಾಜಕಾರಣದ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲದ ಮಹೇಂದರ್ ಚುನಾವಣೆಗಾಗಿ ತನ್ನಲ್ಲಿದ್ದ ಹಣವನ್ನೆಲ್ಲಾ ಖರ್ಚು ಮಾಡುತ್ತಾರೆ. ಆದರೆ ಅವರ ವಿಧಿ ಬೇರೆಯೇ ಇತ್ತು. ಹನ್ನೆರಡು ಸ್ವೀರ ಮತಗಳ ಅಂತರದಿಂದ ಚುನಾವಣೆಯಲ್ಲಿ ಸೋಲುತ್ತಾರೆ ನಿರ್ದೇಶಕ S ಮಹೇಂದರ್. ಇನ್ನು ಎಲೆಕ್ಷನ್ ಬಳಿಕ ಮಹೇಂದರ್ ಜೀವನದಲ್ಲಿ ಎಲ್ಲಾ ಬದಲಾಗುತ್ತಾ ಹೋಯಿತು.

ಶ್ರುತಿ ಮತ್ತು ಮಹೇಂದರ್ ಸಂಸಾರದಲ್ಲಿ ಬಿರುಕು ಉಂಟಾಗಿ ಶ್ರುತಿ ಅವರು ಮಹೇಂದರ್ ಅವರಿಂದ ೨೦೦೯ರಲ್ಲಿ ವಿಚ್ಚೇಧನ ಪಡೆದುಕೊಳ್ಳುತ್ತಾರೆ. ಬಳಿಕ ಮೂರೂ ವರ್ಷಗಳ ಕಾಲ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದ ಏಸ್.ಮಹೇಂದರ್ ೨೦೧೨ರಲ್ಲಿ ಯಶೋಧ ಎಂಬುವವರನ್ನ ಮದುವೆ ಮಾಡಿಕೊಳ್ಳುತ್ತಾರೆ. ಇನ್ನು ಇದರ ನಡುವೆಯೇ ಮಹೇಂದರ್ ಅವರ ಮೊದಲನೆಯ ಮಗಳಾದ ಗೌರಿ ಅವರು ಬರೆದಿದ್ದ ಪೋಸ್ಟ್ ಒಂದು ಆಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಐ ಲವ್ ಯೂ ಅಪ್ಪ..ನೀವೇ ಯಾವಾಗಲೂ ನನ್ನ ಮೊದಲ ಪ್ರೀತಿಯಾಗಿದ್ದೀರಿ. ನೀವೇ ನನ್ನ ನೆಚ್ಚಿನ ಹೀರೊ ಕೂಡ. ನಮ್ಮಿಬ್ಬರ ನಡುವೆ ಇರುವ ತಂದೆ ಮಗಳ ಪ್ರೀತಿಯನ್ನ ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನಿಮ್ಮೊಂದಿಗೆ ಸಮಯ ಕಳೆಯಬೇಕೆನ್ನುವುದು ನನ್ನ ಬಯಕೆ ಯಾಗಿದೆ, ಆ ಸಮಯ ಬಹುಬೇಗ ಬರಲಿ ಎನ್ನುವುದು ನನ್ನ ಆಸೆ. ಐ ಮಿಸ್ ಯೂ ಅಪ್ಪ ಎಂದು ಗೌರಿ ಪತ್ರದಲ್ಲಿ ಬರೆದುಕೊಂಡಿದ್ದರು.

ಇನ್ನು ಎರಡನೇ ಮದುವೆಯ ಬಳಿಕ ತುಂಬಾ ಗ್ಯಾಪ್ ನಂತರ ೨೦೧೭ರವರೆಗೆ ಮೂರೂ ಸಿನಿಮಾಗಳನ್ನ ಎಸ್.ಮಹೇಂದರ್ ನಿರ್ದೇಶನ ಮಾಡುತ್ತಾರೆ. ಆದರೆ ಯಾವ ಸಿನಿಮಾ ಕೂಡ ಅಂದುಕೊಂಡಷ್ಟು ಯಶಸ್ಸು ಕಾಣುವುದಿಲ್ಲ. ಇನ್ನು ಕಳೆದ ಮೂರೂ ವರ್ಷಗಳಿಂದ ಯಾವುದೇ ಸಿನಿಮಾಗಳ ನಿರ್ದೇಶನ ಮಾಡಿಲ್ಲ ಮಹೇಂದರ್. ಸ್ನೇಹಿತರೇ, ಸಂಬಂಧಗಳ ಬಗ್ಗೆ ಅದ್ಭುತವಾಗಿ ಸಿನಿಮಾ ಮಾಡುವ S ಮಹೇಂದರ್ ಅವರು ಮತ್ತೆ ನಿರ್ದೇಶನಕ್ಕೆ ಇಳಿಬೇಕಾ ಎಂಬುದನ್ನ ಕಾಮೆಂಟ್ ಮಾಡಿ ತಿಳಿಸಿ..