Advertisements

ಮಾರುವೇಷದಲ್ಲಿ ಕರ್ನಾಟಕ ಸಿಂಗಂ ಎಸ್.​ಪಿ ರವಿ ಚನ್ನಣ್ಣನವರ್ ಸಿಕ್ಕಿಹಾಕಿಕೊಂಡ. ಆರ್ ಟಿ ಓ ಅಧಿಕಾರಿಗಳು.

News

ಎಸ್​ಪಿ ರವಿ ಚನ್ನಣ್ಣನವರ್ ಎಂದ ತಕ್ಷಣ ನೆನಪಿಗೆ ಬರುವುದು ಉನ್ನತ ಸ್ಥಾನದಲ್ಲಿದ್ದರೂ ಸಾರ್ವಜನಿಕರಿಗೆ ಕುಂದುಕೊರತೆಗಗಳನ್ನು ಬಗೆಹರಿಸುವುದು ಅನ್ಯಾಯದ ವಿರುದ್ಧ ನ್ಯಾಯಾಂಗದ ಮೂಲಕ ಹೋರಾಡುವವರು .ರವಿ ಚನ್ನಣ್ಣನವರು ಎಸ್​ಪಿ ಅಧಿಕಾರಿ ಜೊತೆಗೆ ಕರ್ನಾಟಕದ ಸಿಂಗಂ ಎಂದು ಪ್ರಖ್ಯಾತಿ ಹೆಸರು ಪಡೆದಿರುವವರು.

Advertisements

ಬೆಂಗಳೂರು ಗ್ರಾಮಾಂತರ ಎಸ್​.ಪಿ ಆಗಿರುವ ರವಿ ಡಿ ಚೆನ್ನಣ್ಣನವರ ಸಾರಿಗೆ ಅಧಿಕಾರಿಗಳನ್ನು ಬೇಟೆಯಾಡುವ ಮೂಲಕ ಅಬ್ಬರಿಸಿದ್ದಾರೆ. ಎಲ್ಲಾ ಪೊಲೀಸ್ ಮತ್ತು ಸಾರಿಗೆ ಅಧಿಕಾರಿಗಳು ಕೊರೊನ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇದೇ ಸರಿಯಾದ ಸಮಯ ಎಂದು ತಿಳಿದು ಅತ್ತಿಬೆಲೆ ಯಲ್ಲಿರುವ ಕರ್ನಾಟಕ-ತಮಿಳುನಾಡು ಗಡಿ ಭಾಗ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ನಿಲ್ಲಿಸಿ ಹಣ ವಸೂಲಿ ಮಾಡುತ್ತಿದ್ದ ಭ್ರಷ್ಟ ಹುಬ್ಬಳ್ಳಿ ಸಾರಿಗೆ ಅಧಿಕಾರಿಗಳಾದ ಹೋಂ ಗಾರ್ಡ್ ವಿವೇಕ್, ಆರ್ಟಿಓ ಬ್ರೇಕ್ ಇನ್ಸ್ಪೆಕ್ಟರ್ ಗಳಾದ ,ಕರಿಯಪ್ಪ, ಜಯಣ್ಣ ಅವರನ್ನು ರವಿ ಡಿ ಚನ್ನಣ್ಣನವರ್ ಹಿಡಿದಿದ್ದಾರೆ. ಅವರ ಬಳಿ ಇದ್ದ 12,350ರೂ ಗಳನ್ನು ವಶಪಡಿಸಿಕೊಂಡ್ಡಿದ್ದರೆ.

ಇಬ್ಬರು ಬ್ರೇಕ್ ಇನ್ಸ್ಪೆಕ್ಟರ್ ಗಳನ್ನು ಸೇವೆಯಿಂದ ಅಮಾನತುಗೊಳಿಸಿವ ಮೂಲಕ ಜಿಲ್ಲಾಧಿಕಾರಿ ಶಿವಮೂರ್ತಿ ಇವತ್ತು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಅತ್ತಿಬೆಲೆ ಚೆಕ್ ಪೋಸ್ಟ್ ನಲ್ಲಿ ತಮಿಳುನಾಡು ಕಡೆಯಿಂದ ಕರ್ನಾಟಕದ ಕಡೆ ಬರುವ ವಾಹನಗಳನ್ನು ನಿಲ್ಲಿಸಿ ಸಾರಿಗೆ ಅಧಿಕಾರಿಗಳಾದ ಕರಿಯಪ್ಪ ನವರ ಮಾರ್ಗದರ್ಶನದಲ್ಲಿ ಹೋಂ ಗಾರ್ಡ್ ವಿವೇಕ್, ಸಿಬ್ಬಂದಿ ಪರ್ಮಿಟ್ ಕೊಡುವ ನೆಪದಲ್ಲಿ ಒಂದೊಂದು ವಾಹನದಿಂದ 400ರಿಂದ 500 ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದರು.

ಇದೇವೇಳೆ ಲಾರಿ ಚಾಲಕನಾಗಿ ಮಾರುವೇಷದಲ್ಲಿ ಬಂದ ಬೆಂಗಳೂರು ಗ್ರಾಮಾಂತರ ಎಸ್ ಪಿ ಡಿ ರವಿ ಚನ್ನಣ್ಣನವರ ರೆಡ್ ಹ್ಯಾಂಡ್ ಗಿ ಹಿಡಿದು ಬಂಧಿಸಿದ್ದಾರೆ. ರವಿಚನ್ನಣ್ಣನವರ ಈ ಕಾರ್ಯಕ್ಕೆ ಎಲ್ಲರೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟಬೇಕು ಎಂಬುದು ಎಲ್ಲರ ಆಶಯ.