Advertisements

ಇಲ್ಲಿರುವ ಸೂರ್ಯದೇವನಿಗೆ ಮಣ್ಣಿನ ಗೊಂಬೆ ಹರಕೆ ಹೊತ್ತರೆ ಸಾಕು ಕೇಳಿಕೊಂಡಿದ್ದೆಲ್ಲಾ ಕೊಡುವನು ಈ ಸೂರ್ಯದೇವಾ! ಈ ದೇವಾಲಯ ಎಲ್ಲಿದೆ ಗೊತ್ತಾ?

Temples

ಪ್ರಿಯ ವೀಕ್ಷಕರೆ ನಮಸ್ಕಾರ ಮನುಷ್ಯನಿಗೆ ಕಷ್ಟ ಅಂತಾ ಬಂದಾಗ ಇರುವ ಒಂದೆ ಮಾರ್ಗ ಆ ದೇವರಲ್ಲಿ ಪ್ರಾರ್ಥಿಸುವುದು. ಭಕ್ತಿಯಿಂದ ಪ್ರಾರ್ಥನೆ ಮಾಡುವುದರಿಂದ ಎದುರಾದ ಕಷ್ಟಗಳೆಲ್ಲವು ಮಾಯವಾಗುತ್ತವೆ ಅದು ಭಕ್ತಿಗಿರುವ ಮಹತ್ವದ ಶಕ್ತಿ. ಇನ್ನು ತಮ್ಮ ಸಮಸ್ಯೆಗಳು, ಬೇಡಿಕೆಗಳು ಈಡೇರಿಕೆಗಾಗಿ ಹರಕೆ ಕೊಡ ಹೊರತ್ತಾರೆ. ಆಯಾ ಭಾಗದ ದೇವರುಗಳ ಸಂಪ್ರದಾಯದ ಆಧಾರದ ಮೇಲೆ ಜಗತ್ತಿನಲ್ಲಿ ವಿಭಿನ್ನವಾಗಿ ಹರಕೆ ಹೊರುತ್ತಾರೆ. ಕೆಲವರು ಪ್ರಾಣಿ ಬಲಿ ನೀಡಿ ಹರಕೆ ಹೊತ್ತರೆ ಇನ್ನು ಕೆಲವರು ಉಪವಾಸ, ಉರಳುಸೇವೆ, ಸಿಡಿ ಆಡುವುದು, ಅನ್ನ ಪ್ರಸಾದ ಹಾಕುವುದು ಹೀಗೆ ಹಲವು ಬಗೆಯ ಹರಕೆಯನ್ನು ಹೊರುತ್ತಾರೆ. ಹರಕೆಗಳು ಆಯಾ ದೇವರುಗಳ ಪ್ರಾಚೀನ ಹಿನ್ನಲೆ , ಸಂಪ್ರದಾಯ ಹಾಗೂ ವಿಶಿಷ್ಟವಾದ ಶಕ್ತಿಯ ಮೇಲೆ ‌ನಿರ್ಧಾರವಾಗಿದ್ದು ಜನರು ಅವುಗಳನ್ನು ಅನುಸರಿಸಿಕೊಂಡು ಬಂದಿರುತ್ತಾರೆ. ಇಲ್ಲೊಂದು ವಿಶಿಷ್ಟವಾದ ಪುರಾತನ ದೇವಾಲಯದವಿದೆ ಅಲ್ಲಿ‌ ಈ ವಿಶೇಷವಾದ ಹರಕೆ ಹೊತ್ತು ಅದನ್ನು ಭಕ್ತಿಯಿಂದ ಮಾಡಿದರೆ ಸಂಕಷ್ಟಗಳೆಲ್ಲವು ಪರಿಹಾರವಾಗುತ್ತವೆ. ಹಾಗಾದರೆ ಆ ದೇವಸ್ತಾನ ಯಾವುದು, ಅದು ಎಲ್ಲಿದೆ, ಆ ಹರಕೆ ಯಾವುದು ಅಂತೀರಾ ನೋಡಿ..

[widget id=”custom_html-3″]

Advertisements

ನಮ್ಮ ರಾಜ್ಯದಲ್ಲೆ ಕಂಡುಬರುವ ದೇವಾಲಯ ಇದಾಗಿದೆ. ಧರ್ಮಸ್ಥಳದಿಂದ 13 ಕಿಮೀ ದೂರದಲ್ಲಿ ಶ್ರೀಸದಾಶಿವರುದ್ರ ದೇವಸ್ಥಾನವಿದೆ. 13ನೇ ಶತಮಾನದಲ್ಲಿ ಈ ದೇವಸ್ಥಾನದಲ್ಲಿ ಸೂರ್ಯನಾರಾಯಣ ನೆಲೆಸಿದ್ದಾನೆ ಎಂಬ ನಂಬಿಕೆ. ದೇವಾಲಯದಲ್ಲಿ ಮಣ್ಣಿನ ಗೊಂಬೆಗಳ ಹರಕೆಯನ್ನು ಒಪ್ಪಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ. ಇನ್ನು ಈ ದೇವಾಲಯದ ಹಿನ್ನಲೆ ನೋಡುವುದಾದರೆ ಒಂದಿನ ಮಹಿಳೆಯೊಬ್ಬಳು ತಮ್ಮ ಹೊಲದಲ್ಲಿ ಕಳೆಯನ್ನು ಕೀಳಬೇಕಾದರೆ ಅವಳ ಕೊಡಲಿ ಆಯ ತಪ್ಪಿ ವಿಗ್ರಹಕ್ಕೆ ತಾಕಿ ರ’ಕ್ತ ಚಿಮ್ಮುತ್ತದೆ. ಗಾಬರಿಯಿಂದ ಮಹಿಳೆ ತನ್ನ ಮಗನಾದ ಸೂರ್ಯನನ್ನು ಕರೆಯುತ್ತಾಳೆ. ಅಲ್ಲಿ ಜನ ಸೇರುತ್ತಾರೆ‌ ನಡೆದ ಘ’ಟನೆಯನ್ನು ಕಂಡು ಅಚ್ಚರಿ ಪಡಿತ್ತಾರೆ ಆದ್ದರಿಂದ ಈ ದೇವಾಲಯಕ್ಕೆ ಸೂರ್ಯ ನಾರಾಯಣ ದೇವಾಲಯ ಎಂದು ಕರೆಯುತ್ತಾರೆ‌‌ ಎಂಬ ಮಾಹಿತಿಯಿದೆ. ಇನ್ನು ಹಲವು ವರ್ಷಗಳ ಬಳಿಕ ದೇವಾಲಯ ಅಭಿವೃದ್ಧಿಯಾಗಿ ವಿಶಾಲವಾಗಿದೆ. ಈ ದೇವಾಲಯಕ್ಕೆ ಮಣ್ಣಿನ ಗೊಂಬೆಗಳ ಹರಕೆಯನ್ನು ಹೇಳಿಕೊಂಡು ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥಗಳು ಈಡೇರುತ್ತವೆ.

[widget id=”custom_html-3″]

ಸೂರ್ಯನಾರಾಯಣ ದೇವರನ್ನು ನೆನೆಸಿಕೊಂಡು ಭಕ್ತಿಯಿಂದ ಮನೆ ಕಟ್ಟಬೇಕು ಕಟ್ಟುವಂತಾದರೆ ನಿನಗೆ ಮಣ್ಣಿನ ಮನೆ ಹರಕೆಯನ್ನು ಅರ್ಪಿಸುತ್ತೇನೆ ಎಂದು ಕೇಳಿಕೊಳ್ಳಬೇಕು. ಮನೆಯಲ್ಲಿ ದೇವರನ್ನು ನೆನೆದು ಹರಕೆ ಹೇಳಿಕೊಳ್ಳಬಹುದು. ಕೋರಿಕೆ ಈಡೇರಿದ ನಂತರ ಹರಕೆಯಂತೆ ಮಣ್ಣಿನ ಮನೆಯನ್ನು ದೇವಾಲಯಕ್ಕೆ ಒಪ್ಪಿಸಬೇಕು. ದೇವಾಲಯದ ಸುತ್ತಮುತ್ತ ಅಂಗಡಿಗಳಲ್ಲಿ ಮಣ್ಣಿನ ಗೊಂಬೆಗಳು ಸಿಗುತ್ತದೆ. ಈ ದೇವಸ್ಥಾನದಲ್ಲಿ ದಿನನಿತ್ಯ ಅನ್ನ ಪ್ರಸಾದ ಇರುತ್ತದೆ ದೇವಸ್ಥಾನಕ್ಕೆ ಬಂದವರು ಅನ್ನ ಪ್ರಸಾದ ಪಡೆಯಬಹುದು. ಈ ದೇವಸ್ಥಾನದ ಪಕ್ಕದಲ್ಲಿ ಹರಕೆಯ ಬನ ಇದ್ದು ಭಕ್ತಾದಿಗಳು ತಾವು ಹರಕೆಯಾಗಿ ಹೇಳಿಕೊಂಡ ಮಣ್ಣಿನ ಗೊಂಬೆಗಳನ್ನು ಹರಕೆಯ ಬನದಲ್ಲಿ ಇಡಬೇಕಾಗುತ್ತದೆ, ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಹರಕೆಯ ಬನ ತೆರೆದಿರುತ್ತದೆ. ಬನದಲ್ಲಿ ಕಲ್ಯಾಣಿ ಇದೆ. ಪರಿಶುದ್ಧವಾಗಿದ್ದು ಸದಾ ಕಾಲ ನಿಶ್ಯಬ್ಧವಾಗಿರುತ್ತದೆ. ಈ ಬನದಲ್ಲಿ ಹಲವು ರೀತಿಯ ಗೊಂಬೆಗಳನ್ನು ನೋಡಬಹುದು ಅಲ್ಲದೆ ಈ ಬನ ನೋಡಲು ರಮಣೀಯವಾಗಿದ್ದು ಭಕ್ತಾದಿಗಳ ಕಣ್ಮನ ಸೆಳೆಯುತ್ತದೆ. ಧರ್ಮಸ್ಥಳಕ್ಕೆ ಭೇಟಿ ಕೊಟ್ಟರೆ ಹತ್ತಿರವಿರುವ ಶ್ರೀಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ಮಾಡಲೇ ಬೇಕಾದ ದೇವಾಲಯ ಇದಾಗಿದೆ.

[widget id=”custom_html-3″]