Advertisements

ಸದ್ಗುರುವನ್ನೇ ಅಳುವಂತೆ ಮಾಡಿದ ಕೆಜಿಎಫ್ ಚಿತ್ರದ ಗಾಯಕಿ..

Entertainment News

ಸದ್ಗುರು ಎಂದರೆ ಯಾರಿಗೆ ತಾನೇ ತಿಳಿದಿಲ್ಲ, ಅವರು ಈಗ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ಇಡೀ ಪ್ರಪಂಚವೇ ಅವರಿಗೆ ತಲೆ ಭಾಗಿದೆ. ಯೋಗ ಆಧ್ಯಾತ್ಮ, ನಮ್ಮ ಸಂಸ್ಕೃತಿ ಪರಂಪರೆಯ ರಾಯ ಭಾರಿಯಾಗಿದ್ದಾರೆ. ಮಹಾನ್ ಯೋಗಿ ಅಧ್ಯಾತಿಕ ಚಿಂತಕರು ನಿಜ ಗುರುವೂ ಆಗಿರುವ ಅವರು ಹಿಂದೂ ಕುಲ ತಿಲಕವಾಗಿದ್ದಾರೆ.

Advertisements

ಇಂದಿನ ಯುವ ಪೀಳಿಗೆಗೂ ಬಹಳ ಅಚ್ಚಮೆಚ್ಚಾಗಿರುವ ಸದ್ಗುರು ಜಗ್ಗಿ ವಾಸುದೇವ್. ಯುವಕರನ್ನು ಸರಿ ದಾರಿಗೆ ತರಬಲ್ಲ ಪ್ರಭಾವಿ. ಇಂತವರ ಜೊತೆ ಒಮ್ಮೆ ಭೇಟಿ ಮಾಡಿದರೆ ಪುಣ್ಯ ಎಂದುಕೊಳ್ಳುತ್ತಾರೆ ಎಲ್ಲಾ ಸೆಲೆಬ್ರಿಟಿಗಳು. ಅಂತದ್ದರಲ್ಲಿ ನಮ್ಮ ಕನ್ನಡದ ಹುಡುಗಿ ಕೆಜಿಎಫ್ ಖ್ಯಾತಿಯ ಗಾಯಕಿ ಅನನ್ಯ ಭಟ್ ಅವರಿಗೆ ಸದ್ಗುರುಗಳ ಮುಂದೆ ಹಾಡಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಅವರ ಅದೃಷ್ಟವೇ ಸರಿ.

ತಮಿಳು ನಾಡಿನ ವೆಳ್ಳಯ್ಯನ ಗಿರಿ ಪರ್ವತದಲ್ಲಿರುವ ಸದ್ಗುರುಗಳ ಈಶ ಯೋಗ ಕೇಂದ್ರದಲ್ಲಿ ಪ್ರತೀ ವರ್ಷ ಶಿವರಾತ್ರಿಯನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ನಡೆಸಲಾಗುತ್ತದೆ. ಇಲ್ಲಿ ಸಾಂಸೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಈ ಕಾರ್ಯಕ್ರಮದಲ್ಲಿ ಹಾಡುವ ಭಾಗ್ಯ ಅನನ್ಯ ಅವರಿಗೆ ಲಭಿಸಿತ್ತು. ಈ ಹುಡಗಿ ಹಾಡಿನ ಮೂಲಕ ನನ್ನ ಹೃದಯ ಗೆದ್ದಿದ್ದಾಳೆ ಎಂದು ಸ್ವತಃ ಸದ್ಗುರುಗಳೇ ಹೇಳಿದರು. ಅಷ್ಟೇ ಅಲ್ಲ ಕಣ್ಣೀರನ್ನೂ ಸುರಿಸಿದರು.

ಅಂದಹಾಗೆ ಆಕೆ ಹಾಡಿದ ಹಾಡು ಯಾವುದೆಂದರೆ ಸೋಜುಗಾದ ಮಲ್ಲಿಗೆ ಎಂಬ ಮಲೆ ಮಹದೇಶ್ವರನ ಜಾನಪದ ಗೀತೆ. ಆ ಕಡೆ ಅನನ್ಯ ಭಟ್ ಈ ಹಾಡು ಹಾಡುತ್ತಿದ್ದರೆ ಈ ಕಡೆ ಸದ್ಗುರುಗಳು ಕಣ್ಣು ಮುಚ್ಚಿ ಯಾವುದೂ ಲೋಕಕ್ಕೆ ಹೋಗಿದ್ದರು. ಹಾಡು ಕೊನೆಗೊಂಡಾಗ ತೇವವಾಗಿದ್ದ ತಮ್ಮ ಕಣ್ಣುಗಳನ್ನು ಒರೆಸಿಕೊಂಡರು. ಅದೇನು ಆನಂದ ಭಾಷ್ವವೋ, ಹಳೆಯ ನೆನಪೋ ಗೊತ್ತಿಲ್ಲ. ಆದರೆ ಅನನ್ಯ ಮಾತ್ರ ನಿಜಕ್ಕೂ ಅದೃಷ್ಟ ಶಾಲಿ. ನಮ್ಮ ಕನ್ನಡ ಸೋಗಡಿಗೆ ಹೊಸ ಗರಿ ಮುಡಿಸಿದರು.