Advertisements

ತಿನ್ನಲು ಊಟ ಇಲ್ಲದೆ ಸಾ’ಯ’ಲು ಹೋಗಿದ್ದ ಸಾಧು ಕೋಕಿಲ ಜೀವನದ ಕಣ್ಣೀರಿನ ಕಥೆ..

Cinema

ನಮಸ್ತೇ ಸ್ನೇಹಿತರೆ, ಈ ಕನ್ಮಡದ ನಟನನ್ನು ನೋಡಿ ನಗದ ಜನರೇ ಇಲ್ಲಾ.. ಅದು ಯಾರು ಅಂದ್ರೆ ಸಾಧುಕೋಕಿಲ. ಸಾಧು ಕೋಕಿಲ ಅವರು ಊಟವಿಲ್ಲದೇ ಮಾವಿನ ಹಣ್ಣನ್ನು ತಿಂದು ಹಸಿವನ್ನ ನೀಗಿಸಿಕೊಳ್ಳುತ್ತಾ ಅಂಗಡಿಯಲ್ಲಿ ಕೆಲಸ ಮಾಡಿ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡಿ ಅವಮಾನಗಳನ್ನ ತಾಳಲಾರದೇ ಸಾಯಲು ಮುಂದಾಗಿ ಯಾವುದೇ ಗಾಡ್ ಪಾಧರ್ ಇಲ್ಲದೇ ಕೇವಲ ಕಠಿಣ ಪರಿಶ್ರಮದಿಂದ ಕರ್ನಾಟಕದ ಜನ ಮೆಚ್ಚಿದ ಸಾಧು ಮಹಾರಾಜ್ ಆಗಿದ್ದಾರೆ.. ಸಾದು ಮಹಾರಾಜ್ ಅವರು ಸಂಗೀತ ಕುಟುಂಬದಲ್ಲಿ ಜನಿಸಿದಂತವರು. ಚಿಕ್ಕ ವಯಸ್ಸಿಂದಲೂ ಕೂಡ ಕಷ್ಟಗಳನ್ನು ನೋಡಿದಂತವರು.. ಬಡವರ ಕುಟುಂಬದಲ್ಲಿ ಹುಟ್ಟಿದ ಸಾದು ಕುಟುಂಬಕ್ಕೆ ಕಷ್ಟ ಪಡುವಂತ ಪರಿಸ್ಥಿತಿ ಇರುತ್ತದೆ. ಇಂತಹ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುವಂತಹ ಬಡ ಕುಟುಂಬದಲ್ಲಿ ಹುಟ್ಟಿದಂತವರು.. ಸಾಧುಕೋಕಿಲ ಅವರು ಸೆಂಟ್ ಜೋಸೆಫ್ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪಡೆಯುತ್ತಿರ್ತಾರೆ. ಶಾಲೆಗೆ ಹೋದ ಸಾಧುಕೋಕಿಲ ಅವರ ಮಧ್ಯಾಹ್ನದ ಊಟಕ್ಕೆ ಇವರ ತಾಯಿ 4 ಕಿಲೋಮೀಟರ್ ನಡೆದುಕೊಂಡು ಬಂದು ಮಾವಿನ ಹಣ್ಣನ್ನ ಸಾಧುಕೋಕಿಲ ಅವರಿಗೆ ಕೊಡ್ತಾಯಿದ್ರು..

Advertisements

ಇದೇ ಮಧ್ಯಾಹ್ನದ ಊಟವಾಗಿತ್ತು. ಇನ್ನೂ ತೀರ ಬಡತನವಿದ್ದ ಕಾರಣ 8ನೇ ತರಗತಿಗೆ ವಿದ್ಯಾಭ್ಯಾಸ ಮುಗಿಸಿದ ಸಾಧುಕೋಕಿಲ ಅವರು ದುಡಿಯೋದಕ್ಕೆ ಶುರು ಮಾಡ್ತಾರೆ.. ಶಾಲೆ ಬಿಟ್ಟ ನಂತರ ಕಸ್ತೂರಿ ಶಂಕರ್ ರಾವ್ ವಾದ್ಯಗಳ ಅಂಗಡಿಯಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಳ್ತಾರೆ.. ಅಂಗಡಿಯಲ್ಲಿ ಕಸ ಗುಡಿಸಿ, ವಾದ್ಯಗಳ ಮೇಲಿರುವಂತಹ ದೂಳನ್ನು ವರೆಸುತ್ತಿದ್ರು.. ಇದೆಲ್ಲಾ ಮಾಡೋವಾಗ ಸಾಧುಕೋಕಿಲ ಅವರಿಗೆ ವಾದ್ಯಗಳ ಮೇಲೆಯೇ ಕಣ್ಣು. ಆಗ ಅವರಿಗೆ ಸಂಗೀತದ ಮೇಲೆ ಆಸಕ್ತಿ ಮೂಡುತ್ತೆ.. ಆಗ ಅವ್ರು ನಿರ್ಧಾರ ಮಾಡ್ತಾರೆ ನಾನು ಸಂಗೀತ ಕ್ಷೇತ್ರದಲ್ಲೇ ಏನಾದ್ರು ಸಾಧನೆ ಮಾಡ್ಲೇಬೇಕು ಅಂಥ. ನಂತರ ಆರ್ ಮೋಹನ್ ಎನ್ನುವವರ ಆರ್ಕೆಸ್ಟ್ರಾದಲ್ಲೇ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಳ್ತಾರೆ.. ಈ ಕೆಲಸಕ್ಕೆ ಒಂದು ದಿನಕ್ಕೆ 10 ರೂಪಾಯಿ ಸಂಬಳ ಸಾಧು ಅವರಿಗೆ ಸಿಗುತ್ತೆ. ಇನ್ನೂ ಒಂದು ಸಾಧು ಅವರು ಆರ್ಕೆಸ್ಟ್ರಾದ ವಾದ್ಯವೊಂದನ್ನ ಸರಿಯಾಗಿ ಜೋಡಿಸಿರೋದಿಲ್ಲಾ.. ಅದನ್ನ ನೋಡಿದ ಮೋಹನ್ ಅವರು ಸಾಧುಕೋಕಿಲ ಅವರಿಗೆ ಬೈಯ್ಯುತ್ತಾರೆ. ನೀನು ಒಬ್ಬ ಸಹಾಯಕ ಅಷ್ಟೇ, ಮೆಜಿಷನ್ ರೀತಿ ಆಡ್ಬೇಡ ಅಂಥ ಮನಬಂದಂತೆ ಬೈತಾರೆ..

ನಂತರ ಸಾಧುಕೋಕಿಲ ಅವರಿಗೆ 200 ರೂಪಾಯಿ ಸಂಬಳದ ಬದಲು ಒಂದು ಟೀಷರ್ಟ್ ಕೊಡ್ತಾರೆ. ಆಗ ಕೋಪದಲ್ಲಿ ಸಾಧುಕೋಕಿಲ ಅವರು ತಾನು ಹಾಕಿಕೊಂಡಿದ್ದಂತಹ ಆರ್ಕೆಸ್ಟ್ರಾ ಟೀಷರ್ಟ್ ಬಿಚ್ಚಿ ಅವರ ಮೇಲೆ ಎಸೆದು ಬರೀ ಮೈಯಲ್ಲಿ ಹೊರಬರ್ತಾರೆ.. ನಂತರ ಅಣ್ಣನ ಬಳಿ ಹೋಗಿ ನಾನು ಎಲ್ಲಿಗೆ ಹೋಗ್ತಿನೋ ಗೊತ್ತಿಲ್ಲಾ. ಮತ್ತೆ ಬರ್ತಿನೋ ಗೊತ್ತಿಲ್ಲಾ ಎಂದು ಸೈಕಲ್ ಏರಿ ಸಾ’ಯ’ಲು ಹಲಸೂರು ಕೆರೆಯ ಕಡೆಗೆ ಹೋಗ್ತಾರೆ.. ದಾರಿಯಲ್ಲಿ ಬರೋವಾಗ ಲುಮೋನ್ ಥಿಯೇಟರ್ ನ ಬಳಿ ಇಂಗ್ಲೀಷ್ ಸಿನಿಮಾದ ಪೋಸ್ಟರ್ ಒಂದನ್ನ ನೋಡ್ತಾರೆ. ಸಾ’ಯೋ’ಕೆ ಮುಂಚೆ ಈ ಸಿನಿಮಾವನ್ನ ನೋಡ್ಬೇಕು ಅಂಥ ಹೋಗಿ ಪೂರ್ತಿಯಾಗಿ ನೋಡ್ತಾರೆ.. ಆ ಸಿನಿಮಾದ ಪ್ರಾರಂಭದಿಂದ ಕೊನೆಯವರೆಗೂ ಬರೀ ಕಾಮಿಡಿ. ಸಾಧುಕೋಕಿಲ ಅವರು ಈ ಸಿನಿಮಾವನ್ನು ನೋಡಿ ನಕ್ಕಿದ್ದೇ ನಕ್ಕಿದ್ದು.. ತನ್ನ ನೋವನ್ನೆಲ್ಲಾ ಮರಿತಾರೆ ಸಾಧುಕೋಕಿಲ ಅವರು. ಇನ್ನೂ ಈ ಸಿನಿಮಾ ಸಾಧುಕೋಕಿಲ ಅವರ ಜೀವನವನ್ನೇ ಬದಲಿಸಿಬಿಡುತ್ತೆ.‌

ನಂತರ ನಾನು ದೊಡ್ಡ ಮ್ಯೂಸಿಷನ್ ಆಗಿ ಬೆಳೆದು ತೋರಿಸ್ತೀನಿ ಅಂಥ ಶಪಥ ಮಾಡ್ತಾರೆ.. ಇದಾದ ಕೆಲವೇ ವರ್ಷಕ್ಕೇ ಸಾಧುಕೋಕಿಲ ಅವರು ತನಗೆ ಅವಮಾನ ಮಾಡಿದ್ದ ಮೋಹನ್ ಅವರನ್ನ ಕರೆದು ತಮ್ಮ ಆಲ್ಬಮ್ ಒಂದಕ್ಕೆ ಹಾಡು ಹೇಳುವ ಅವಕಾಶ ಕೊಡ್ತಾರೆ.. ಆಗ ಮೋಹನ್ ಅವರು ಸಾಧುಕೋಕಿಲ ಅವರಿಗೆ ನಾನು ಆರ್ಕೇಸ್ಟ್ರಾ ಇದ್ದುದ್ದರಿಂದ ಆ ರೀತಿ ಹೇಳಬೇಕಾಯ್ತು.. ನೀನು ಗ್ರೇಟ್ ಮ್ಯೂಸಿಷನ್ ಅಂಥ ಹೇಳ್ತಾರೆ. ನಂತರ ಮ್ಯೂಸಿಕ್ ಡೈರೆಕ್ಟರ್ ಗಳಾದ ಹಂಸಲೇಕ ಮತ್ತು ಇನ್ನೂ ಹಲವರ ಜೊತೆ ಕೆಲಸ ಮಾಡ್ತಾರೆ. ನಂತರ ಉಪೇಂದ್ರ ಅವರ ಸಿನಿಮಾಗಳಲ್ಲು ಕೂಡ ಕೆಲಸ ಮಾಡಿ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಆಗ್ತಾರೆ ಸಾಧುಕೋಕಿಲ ಅವರು.. ಉಪೇಂದ್ರ ನಿರ್ದೇಶಿಸಿದಂತಹ ಸಿನಿಮಾ ಬ್ಲಾಕ್ ಬ್ಲಸ್ಟರ್ ಹಿಟ್ ಆಗಲು ಸಾಧುಕೋಕಿಲ ಮ್ಯೂಸಿಕ್ ಸಹ ಕಾರಣ ಆಗಿರುತ್ತೆ. ಸಾಧು ಬರೀ ಮ್ಯೂಸಿಕ್ ಡೈರೆಕ್ಟರ್ ಮಾತ್ರವಲ್ಲಾ ಅವರು ಒಬ್ಬ ನಟ ಸಹ ಎಂಬುದನ್ನ ಗುರುತಿಸಿದ್ದು ನಟ ಉಪೇಂದ್ರ ಅವರು.. ಅದೇ ರೀತಿ ಉಪೇಂದ್ರ ಅವರು ಸಾಧುಕೋಕಿಲ ಅವರನ್ನ ಕರೆಸಿ ಒಂದು ಡ್ರೆಸ್ ಹಾಕಿಸಿ ನಟನೆ ಮಾಡಲು ಅವಕಾಶ ಕೊಡ್ತಾರೆ.. ಈ ರೀತಿ ನಟರು ಸಹ ಆಗ್ತಾರೆ ಸಾಧುಕೋಕಿಲ ಅವರು.

ಚಿತ್ರಗಳಿಗೆ ಒಳ್ಳೆಯ ಮ್ಯುಸಿಷನ್ ಮಾಡಿ, ಇದತ ಜೊತೆಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಕನ್ನಡದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಮತ್ತು ಸ್ಟಾರ್ ಕಾಮಿಟಿ ನಟನಾಗಿ ಗುರುತಿಸಿಕೊಳ್ತಾರೆ ನಮ್ಮ ಸಾಧುಕೋಕಿಲರವರು.. ನಂತರ ತಾವು ದುಡಿದ ಹಣವನ್ನೆಲ್ಲಾ ಖರ್ಚು ಮಾಡಿ ಒಂದು ಸಿನಿಮಾ ನಿರ್ಮಾಣ ಮಾಡ್ತಾರೆ.. ಆದರೆ ಆ ಸಿನಿಮಾ ಹಿಟ್ ಆಗ್ಲಿಲ್ಲಾ.. ನಂತರ ದುಡ್ಡಿಲ್ಲದೇ ಸಾಲಗಾರಾಗ್ತಾರೆ ಸಾಧುಕೋಕಿಲ ಅವರು.. ಇಷ್ಟಾದ್ರು ಎದೆ ಗುಂದದೆ ಸಿನಿಮಾಗಳಲ್ಲಿ ನಟನೆ ಮಾಡ್ತಾರೆ. ಅಂದಿನಿಂದ ಇಂದಿನವರೆಗೂ ಅವಕಾಶ ಸಿಕ್ಕ ಎಲ್ಲಾ ಸಿನಿಮಾಗಳಲ್ಲು ನಟಿಸುತ್ತಲೇ ಇದ್ದಾರೆ ಸಾಧುಕೋಕಿಲ ಅವರು.. ಕೇವಲ 5 ವರ್ಷಗಳಲ್ಲೇ ತಾವು ಮಾಡಿಕೊಂಡ ಸಾಲವನ್ನು ತೀರಿಸಿ ಮಾರಿದ ಮನೆಯನ್ನ ಖರೀದಿಸಿ ಅಲ್ಲೇ ಹೊಸ ಮನೆಯನ್ನ ಕಟ್ಟಿ ತಮ್ಮ ಕುಟುಂಬಕ್ಕೆ ಮತ್ತೆ ಆಧಾರ ಸ್ತಂಭವಾಗಿ ನಿಲ್ತಾರೆ ಸಾಧುಕೋಕಿಲ ಅವರು..