Advertisements

ಒಟ್ಟಿಗೆ ಸಾವಿರಾರು ಶಿವಲಿಂಗಗಳ ದರ್ಶನ ಪಡೆಯುವ ಕರ್ನಾಟಕದ ಈ ಸ್ಥಳದ ಬಗ್ಗೆ ನಿಮಗೆ ಗೊತ್ತಾ!

Adyathma

ಭೂಮಿಯ ಮೇಲೆ ಹಲವಾರು ಸ್ಥಳಗಳಿವೆ, ಕೆಲವೊಂದು ಸ್ಥಳಗಳು ರಹಸ್ಯವಾಗಿ ಉಳಿದಿವೆ ಅಂತಹ ಸ್ಥಳಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ನಮ್ಮ ಭಾರತದಲ್ಲೂ ಕೂಡ ಅಂತ ಸ್ಥಳಗಳಿಗೆ ಏನು ಕಡಿಮೆ ಇಲ್ಲ ಹಲವು ವಿಶಿಷ್ಟ ಸ್ಥಳಗಳನ್ನು ಒಂದಿವೆ. ಅದರಲ್ಲೂ ನಮ್ಮ ಕರ್ನಾಟಕದಲ್ಲಿ ಒಂದು ಧಾರ್ಮಿಕ ಸ್ಥಳವಿದೆ. ಇಲ್ಲಿನ ಒಂದು ನದಿಯ ದಡದಲ್ಲಿ ಒಟ್ಟಿಗೆ ಸಾವಿರಾರು ಶಿವಲಿಂಗಗಳ ದರ್ಶನ ಪಡೆಯಬಹುದು. ಆಶ್ಚರ್ಯವಾದರೂ ಇದು ನಿಜ. ಶಿವ ಭಕ್ತರಿಗೆ ಇಲ್ಲಿನ ಸ್ಥಳ ಅತಿ ಹೆಚ್ಚು ಪ್ರಿಯಕರ ಏಕೆಂದರೆ ಇಲ್ಲಿ ಅನೇಕ ಶಿವಲಿಂಗಗಳು ಇರುವುದರಿಂದ.

Advertisements

ಈ ಪವಿತ್ರ ಸ್ಥಳ ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ 0.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ. ಅಲ್ಲದೆ ನಂದಿಯ ಮೇಲೆ ಶಿವನು ಸವಾರಿ ಮಾಡುವ ಪ್ರತಿಮೆಯೂ ಸಹ ಇದೆ.

ಈ ಲಿಂಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ. ಇಲ್ಲಿನ ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಪ್ರತಿ ಮಹಾಶಿವರಾತ್ರಿ ಸಮಯದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಶಿವಲಿಂಗದ ಬಳಿ ಪ್ರಾರ್ಥಿಸುತ್ತಾರೆ.

ಮಳೆಗಾಲದಲ್ಲಿ ನದಿಯ ನೀರಿನಲ್ಲಿ ಶಿವಲಿಂಗಗಳು ಮುಳುಗಿದರೆ ನೀರಿನ ಮಟ್ಟ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಆ ಸಮಯದಲ್ಲಿ ಶಿವಲಿಂಗಗಳು ಇದ್ದಕ್ಕಿದ್ದಂತೆ ಉದ್ಭವವಾಗುವ ರೀತಿ ಕಾಣುತ್ತದೆ ಆಗ ನದಿಯನ್ನು ನೋಡಲು ನಿಜಕ್ಕೂ ಅದ್ಭುತವಾಗಿ ಕಾಣಿಸುತ್ತದೆ.