Advertisements

ಇದೆ ನೋಡಿ ಶಿರಡಿಯ ಸಾಯಿಬಾಬಾ ತಮ್ಮ ಅಂತ್ಯದವೇಳೆ ಧರಿಸಿದ ಬಟ್ಟೆ!

Adyathma

ಪ್ರಿಯ ಓದುಗರೆ ಸಾಯಿಬಾಬಾ ಎಂದರೆ ಎಲ್ಲರಿಗೂ ಅದೇನು ಮೂಕವಿಸ್ಮಿತವನ್ನಾಗಿ ಮಾಡುವ ಭಕ್ತಿಭಾವ. ಜೀವಿತದ ಕೊನೆಯ ಗಳಿಗೆಯವರೆಗೂ ಬಡಜನರ ಏಳಿಗೆಗೆ ಮತ್ತು ಅವರ ಸಹಾಯ, ಅವರ ಉದ್ಧಾರಕ್ಕಾಗಿಯೇ ಮಿಡಿದ ದೇವ ಹೃದಯ. ಸದಾ ಜನರ ಮಧ್ಯೆ ಇದ್ದು ನಂಬಲಾಗದ ಪ’ವಾಡಗಳನ್ನು ಮಾಡುತ್ತಾ ಇಂದಿಗೂ ಕಲಿಯುಗದಲ್ಲಿ ಎಲ್ಲರಿಂದಲೂ ಪೂಜಿಸಿ ಕೊಳ್ಳುತ್ತಿರುವ ದೇವರು ಶ್ರೀ ಶಿರಡಿ ಸಾಯಿಬಾಬಾ. ಅವರು ಕೊನೆಗಳದಲ್ಲಿ ಎಲ್ಲಿ ನೆಲೆಸಿದರು?ಅವರು ಯಾವ ಗಿಡದ ಕೆಳಗೆ ನೆಲೆಸಿದ್ದರು.. ಬಿಳಿಯ ನಿಲುವಂಗಿ, ತಲೆಗೆ ಒಂದು ಬಿಳಿ ಬಟ್ಟೆ, ಎಡ ಭುಜಕ್ಕೆ ಒಂದು ಜೋಳಿಗೆ ಇಂದು ಸಾಯಿಬಾಬಾ ಅವರ ಉಡುಗೆಯಾಗಿತ್ತು. ಅವರ ಗುರುಗಳಾದ ಭಗತ್ ಜೊತೆಯಲ್ಲೇ ತಾನು ಶಿರಡಿಯಲ್ಲಿ ಇರುವುದಾಗಿ ತಿಳಿಸಿದರಂತೆ.. ಬಾಬಾ ಕಂಡೊಪಾನ ಅರ್ಚಕ ವೃತ್ತಿಯನ್ನು ಮಾಡುತ್ತಾ, ಗುರುವಿನ ಜಾಗದಲ್ಲಿದ್ದ ಉತ್ತರ ದಿಕ್ಕಿನಲ್ಲಿರುವ ಬೇವಿನ ಮರದ ಕೆಳಗೆ ಹೋಗಿ ಕುಳಿತು ಕೊಂಡರಂತೆ.

[widget id=”custom_html-3″]

Advertisements

ದಿನನಿತ್ಯ ಶಿರಡಿಯಲ್ಲಿನ 5 ಮನೆಗಳಿಂದ ಭಿಕ್ಷೆ ಬೇಡಿ ಅದನ್ನು ತಂದು ಅದೇ ಮರದ ಕೆಳಗೆ ಕುಳಿತುಕೊಳ್ಳುತ್ತಿದ್ದಂತೆ. ತನ್ನ ಸುತ್ತಮುತ್ತಲು ಇರುವ ನಾಯಿ, ಬೆಕ್ಕು, ಗುಬ್ಬಚ್ಚಿ, ಕಾಗೆಗಳಿಗೂ, ಹಲವು ಪಕ್ಷಿಗಳಿಗೂ ಅದನ್ನು ಹಂಚಿ ಉಳಿದ ಆಹಾರವನ್ನು ತಿಂದು ಜೀವಿಸುತ್ತಿದ್ದ ರಂತೆ. ಇವರು ಸದಾ ಅದೇ ಬೇವಿನ ಮರದ ಕೆಳಗೇ ಇರುತ್ತಿದ್ದೂ, ಕೆಲವೊಮ್ಮೆ ಬೇರೆಡೆ ರಾತ್ರಿ ಕಳೆಯುತ್ತಿದ್ದಾರಂತೆ. ಸದಾ ಇನ್ನೊಬ್ಬರಿಗೆ ಹಂಚು ತಿನ್ನುವ ಗುಣದವ ರಾಗಿದ್ದರು ಬಾಬಾ ಅವರು. ಮುಂದೆ ಅವರ ವಾಸಸ್ಥಾನವು ಇದೆ ಮರದ ಬುಡ ಆಗಿತ್ತು. ಇಂದಿಗೂ ಈ ಮರದ ಕೆಳಗೆ ಬಾಬಾ ಅವರನ್ನು ನೆನೆದು ಪೂಜಿಸಲಾಗುತ್ತದೆ. ಇವರು ಸಿದ್ಧಿಯೋಗಿ. ತಮ್ಮ ಶರೀರಕ್ಕೆ ಬೇಕಾದ ಶೂಶ್ರುಕವನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಜನರ ನೋವುಗಳಿಗೆ ಮೌನವಾಗಿ ಉತ್ತರಿಸಿ ಅವರ ನೋವುಗಳನ್ನು ವಾಸಿ ಮಾಡುತ್ತಿದ್ದರು.

[widget id=”custom_html-3″]

ಇವರು ಕೊನೆಯದಾಗಿ ನೆಲೆಸಿದರು ಪುಣ್ಯಸ್ಥಳ ಶಿರಡಿ. ಇದು ಮಹಾರಾಷ್ಟ್ರದ ಅಹಮದನಗರ ಜಿಲ್ಲೆಯ ರಾಟ ತಾಲೂಕಿನ ಒಂದು ಪಟ್ಟಣ ಶಿರಡಿಯಾಗಿದೆ. ಇಲ್ಲಿ “ಸಬಕಾ ಮಾಲಿಕ್ ಏಕ ಹೈ “ಎನ್ನುವ ಭಾವನೆಯನ್ನು ಜೀವಂತವಾಗಿರಿಸಿದೆ. ಬಾಬಾರ ಪವಿತ್ರ ಆತ್ಮ ಇಲ್ಲಿ ಸುತ್ತಲೂ ಇದ್ದು, ತಮ್ಮನ್ನು ರಕ್ಷಿಸುತ್ತಿದ್ದಾರೆ ಎಂದು ಇಲ್ಲಿಯ ಜನರ ನಂಬಿಕೆಯಾಗಿದೆ. ಸಾಯಿಬಾಬಾ ಅವ್ರು ದಸರಾ ದಿನದಂದು ಸಮಾಧಿ ಸೇರಿದ್ದು, ಈ ದಿನದಂದು ಸಹಸ್ರಾರು ಜನರು ಬಂದು ಸ’ಮಾ’ಧಿಯ ದರ್ಶನವನ್ನು ಪಡೆಯುತ್ತಾರೆ. ಬಾಬಾ ಅವರ ಕೊನೆಗಳಿಗೆಯಲ್ಲಿ ಧರಿಸಿದ ಬಟ್ಟೆಗಳನ್ನು ಇಂದಿಗೂ ಶೇಖರಿಸಿ ಇಡಲಾಗಿದ್ದು, ಇವುಗಳನ್ನು ವಸ್ತುಸಂಗ್ರಹಾಲಯದಲ್ಲಿ ಕಾಣಬಹುದಾಗಿದೆ. ಇದೀಗ ಈ ಸ’ಮಾ’ಧಿಯ ಜಾಗದಲ್ಲಿ ಭವ್ಯ ದೇವಾಲಯವನ್ನು ನಿರ್ಮಿಸಲಾಗಿದ್ದು ನೀವು ಒಮ್ಮೆ ಇಲ್ಲಿ ಭೇಟಿಕೊಡಿ. ಬಾಬಾ ಅವರು ಬಳಸುತ್ತಿದ್ದ ಅದೆಷ್ಟು ವಸ್ತುಗಳನ್ನು ಇಲ್ಲಿಯ ಸಂಗ್ರಹಾಲಯದಲ್ಲಿ ಇದನ್ನು ಕಾಣಿರಿ..

[widget id=”custom_html-3″]