Advertisements

ನಟ ಸಾಯಿಕುಮಾರ್ ಅವರ ಮಗ ಸೊಸೆ ಯಾರು ಗೊತ್ತಾ? ತುಂಬಾನೆ ಫೇಮಸ್..

Cinema

ನಮಸ್ತೇ ಸ್ನೇಹಿತರೆ, ಡೈಲಾಗ್ ಕಿಂಗ್ ಸಾಯಿಕುಮಾರ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಖ್ಯಾತ ನಟ.. ಪೂರ್ಣ ಹೆಸರು ಸಾಯಿಕುಮಾರ್ ಶರ್ಮಾ ಪುಡಿಪೆಟ್ಟಿ. ತಂದೆ ಪಿಜೆ ಶರ್ಮಾ.. ನಟ ಮತ್ತು ಕಂಠದಾನ ಕಲಾವಿದರು.. ತಾಯಿ ಕೃಷ್ಣ ಜ್ಯೋತಿ. ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.. ಸಹೋದರ ರವಿಶಂಕರ್ ಮತ್ತು ಅಯ್ಯಪ್ಪ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಬಾಲ್ಯದಲ್ಲಿ ಕಂಠದಾನ ಕಲಾವಿದರಾಗಿ ಚಿತ್ರರಂಗ ಪ್ರವೇಶ ಮಾಡಿದ ಸಾಯಿ ಕುಮಾರ್ ಅವರು ಸುಮನ್, ರಾಜ ಶೇಖರ್ ಮುಂತಾದ ಕಲಾವಿದರಿಗೆ ಕಂಠದಾನ ನೀಡುತ್ತಿದ್ದರು..

[widget id=”custom_html-3″]

Advertisements

ಇವರ ಡೈಲಾಗ್ ಡಿಲೆವರಿ ಸ್ಟೈಲ್ ತುಂಬಾ ಪ್ರಸಿದ್ಧಯಾಯಿತು.. 1996 ರಲ್ಲಿ ತೆರೆಕಂಡ ಕನ್ನಡದ ಪೋಲಿಸ್ ಸ್ಟೋರಿ ಚಿತ್ರದಿಂದ ನಾಯಕರಾಗಿ ಬೆಳಕಿಗೆ ಬಂದರು. ಈ ಚಿತ್ರ ಬೇರೆ ಬಾಷೆಗಳಲ್ಲೂ ಕೂಡ ಡಬ್ ಆಗಿ ತುಂಬಾ ಯಶಸ್ಸು ಪಡಿಯಿತು.. ನಂತರ ತೆರೆಗೆ ಬಂದ ಅಗ್ನಿ ಐಪಿಎಸ್, ಕುಂಕುಮ ಭಾಗ್ಯ, ಪೋಲಿಸ್ ಸ್ಟೋರಿ 2, ಲಾಕಪ್ ಡೆತ್, ಸರ್ಕಲ್ ಇನ್ಸ್ಪೆಕ್ಟರ್ ಮುಂತಾದ ಚಿತ್ರಗಳು ಸಾಯಿ ಕುಮಾರ್ ಅವರಿಗೆ ಒಳ್ಳೆ ಇಮೇಜ್ ಅನ್ನು ತಂದುಕೊಟ್ಟವು.. ಅದರಲ್ಲೂ ಪೋಲಿಸ್ ಪಾತ್ರಗಳು ತುಂಬಾ ಪರಿಣಾಮಕಾರಿಯಾಗಿ ಬಂದವು. 2018 ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಭಾಗೆಪಲ್ಲಿ ಮತ ಕ್ಷೇತ್ರದಿಂದ ಸ್ಪರ್ಧಿಸಿದ್ದರು..

[widget id=”custom_html-3″]

ಸುರೇಖಾ ಎನ್ನುವವರನ್ನು ವಿವಾಹವಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ.. ಒಬ್ಬ ಮಗಳು ಮತ್ತು ಒಬ್ಬ ಮಗ. ಇನ್ನೂ ಇವರ ಪುತ್ರ ಆರ್ಯ ಅವರು ತೆಲುಗು ಸಿನಿಮಾ ರಂಗದಲ್ಲಿ ಈಗಾಗಲೇ ನಾಯಕರಾಗಿ ಮಿಂಚುತ್ತಿದ್ದಾರೆ.. ಇನ್ನೂ ಸಾಯಿ ಕುಮಾರ್ ಅವರು ತಮ್ಮ ಇಬ್ಬರು ಮಕ್ಕಳಿಗೆ ಈಗಾಗಲೇ ಮದುವೆ ಮಾಡಿದ್ದಾರೆ. ಇನ್ನೂ ಸಾಯಿಕುಮಾರ್ ಅವರ ಮಗ ಆದಿಯನ್ನು ಮದುವೆ ಆಗಿರುವ ಹುಡುಗಿಯ ಹೆಸರು ಅರುಣಾ.. ನೀವು ಈ ಪೋಟೊದಲ್ಲಿ ಸಾಯಿಕುಮಾರ್ ಅವರ ಸೊಸೆ ಅರುಣಾ ಅವರನ್ನು ನೋಡಬಹುದು. ಆದಿ ಹಾಗು ಅರುಣಾ ಅವರು 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..