Advertisements

ಹೆಂಡತಿ ದಪ್ಪ ಇದಾಳೆ ಅಂತ ಗಂಡ ಬಿಟ್ಟೋದ.. ಆದರೆ ಮತ್ತೊಬ್ಬ ಬಂದು ಈ ಮಹಿಳೆ ಜೀವನವನ್ನ ಹೇಗೆ ಬದಲಾಯಿಸಿದ ಗೊತ್ತಾ?

Kannada Mahiti

ನಮಸ್ತೇ ಸ್ನೇಹಿತರೆ, ಪ್ರೀತಿ ಮಮತೆ ಪ್ರಾಮಾಣಿಕತೆ ಮಮತೆ ತ್ಯಾಗಗಳೇ ಸಂಬಂಧಗಳು.. ಅದರಲ್ಲೂ ಒಂದು ಸುಖ ಸಂಸಾರಕ್ಕೆ ಬೇಕಾಗಿರುವಂತದ್ದು ಗಂಡ ಹೆಂಡಿನ ನಡುವೆ ಒಂದು ಸಾಮರಸ್ಯ. ಆದರೆ ಪ್ರತಿಯೊಂದು ಗಂಡ ಹೆಂಡತಿಯ ನಡುವೆ ಬಹಳಷ್ಟು ಭಿನ್ನಾಭಿಪ್ರಾಯ ಬಂದು ಹೋಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.. ಆದರೆ ಸಾಕ್ಷಿ ಎಂಬ ಒಂದು ಹೆಣ್ಣಿನ ಜೀವನದಲ್ಲಿ ನಡೆದಿರುವಂತಹ ಘ’ಟ’ನೆ ಕೇಳಿದ್ರೆ ನಿಜಕ್ಕೂ ಬಹಳ ಖುಷಿ ಕೊಡುತ್ತೆ. ಸಾಕ್ಷಿ ಮತ್ತು ಕಾರ್ತಿಕ್ ಗೆ ಮನೆಯವರೇ ನೋಡಿ ಮದುವೆ ಮಾಡಿರ್ತಾರೆ‌‌.. ಮೊದ ಮೊದಲು ಒಬ್ಬರಿಗೊಬ್ಬರು ಬಿಟ್ಟು ಇರೋಕೆ ಆಗಲ್ಲ ಅಂಥ ಇದ್ದವರು, ಬಹಳ ಸುಖವಾಗಿ ಜೀವನ ಮಾಡ್ತಿದ್ರು.. ನಂತರ ಇವರಿಗೆ ಒಂದು ಮಗು ಕೂಡ ಹುಟ್ಟುತ್ತೆ. ನಂತರ ದಿನಗಳಲ್ಲಿ ಸಾಕ್ಷಿ ಮತ್ತು ಕಾರ್ತಿಕ್ ನಡುವೆ ಭಿನ್ನಾಭಿಪ್ರಾಯಗಳು ಆಗೋದಕ್ಕೆ ಶುರುವಾಗುತ್ತೆ.. ಮಗು ಹುಟ್ಟಿದ ನಂತರ ಸಾಕ್ಷಿ ದಿನೇ ದಿನೇ ದಪ್ಪ ಆಗ್ತಾಳೆ ಅವಳ ಸೌಂದರ್ಯಕ್ಕೆ ಕೊ’ರತೆ ಉಂಟಾಗುತ್ತೆ. ಆದರೆ ಕಾರ್ತೀಕ್‌ ಗೆ ಸಾಕ್ಷಿ ಮೇಲೆ ಇರುವಂತಹ ವ್ಯಾಮೋಹ, ಪ್ರೀತಿ ಎಲ್ಲವೂ ಕೂಡ ಕಡಿಮೆ ಆಗ್ತಾ ಹೋಗುತ್ತೆ.

Advertisements

ನಂತರ ಕಾರ್ತಿಕ್ ದಿನನಿತ್ಯ ಸಾಕ್ಷಿಯ ಜೊತೆ ನೀನು ದಪ್ಪಗೆ ಆಗಿದಿಯಾ ನೋಡೊದಕ್ಕೆ ಚನಾಗಿಲ್ಲಾ ಅಂಥ ಜ’ಗ’ಳ ಮಾಡೋಕೆ ಶುರುಮಾಡ್ತಾನೆ.. ಇದರಿಂದ ಬೇಸತ್ತ ಸಾಕ್ಷಿ ಗಂಡ ಕಾರ್ತಿಕ್ ಹತ್ತಿರ ನಾನು ಜಿಮ್ ಗೆ ಸೇರ್ತಿನಿ ಸ್ವಲ್ಪ ದುಡ್ಡು ಕೊಡಿ ಅಂಥ ಕೇಳ್ತಾಳೆ. ಆದರೆ ಕಾರ್ತಿಕ್ ಅ’ಸ’ಹ್ಯವಾಗಿ ನಗ್ತಾ ಸಾಕ್ಷಿಗೆ ಮನೆಕೆಲಸ ಮಾಡು, ತಿನ್ನೋದು ಸ್ವಲ್ಪ ಕಡಿಮೆ ಮಾಡು ಸಣ್ಣಗೆ ಆಗ್ತಿಯಾ ಅಂಥ ಹೆಳ್ತಾನೆ.. ಆದರೆ ಕಾರ್ತಿಕ್ ಪ್ರತಿಯೊಂದು ವಿಷಯದಲ್ಲೂ ಕೂಡ ಸಾಕ್ಷಿನಾ ಹೀಯಾಳಿಸಿ ಮಾತಾಡ್ಸ್ತಿದ್ದ. ಆದರೆ ಸಾಕ್ಷಿಗೆ ಸಣ್ಣ ಅಗೋದ್ರ ಕಡೆಗೆ ಹೆಚ್ಚು ಗಮನ ಕೊಡೊಕೆ ಆಗ್ತಿರಲಿಲ್ಲಾ.. ಯಾಕಂದ್ರೆ ಮನೆ ಕೆಲಸ, ಮಗುವನ್ನ ನೋಡಿಕೊಳ್ಳೊದ್ರ ಕಡೆ ಜ್ಯಾಸ್ತಿ ಗಮನ ಕೊಡ್ತಿದ್ದರಿಂದ ಸಣ್ಣ ಆಗೋದ್ರ ಕಡೆ ಗಮನ ಕೊಡ್ತಿರಲಿಲ್ಲಾ.. ಇದೇ ರೀತಿ ಸಾಕ್ಷಿ ದಿನ ಕಳೆಯುತ್ತಾ ಹೋದಾಗ ತುಂಬಾ ದಪ್ಪಗೆ ಆಗೋಗ್ತಾರೆ. ಇದನ್ನೆಲ್ಲಾ ನೋಡಿದ ಕಾರ್ತಿಕ್ ಒಂದು ದಿನ ಆಕೆಯ ಜೊತೆ ದೊಡ್ಡ ಜ’ಗ’ಳ ಮಾಡಿ ಸಾಕ್ಷಿಯನ್ನ ಹೊರಗೆ ಹಾಕ್ತಾನೆ. ಇನ್ನೂ ಈಕಡೆ ಸಾಕ್ಷಿ ಕಣ್ಣೀರು ಸುರಿಸುತ್ತಾ ಮಗವನ್ನು ಎತ್ಕೊಂಡು ತವರು ಮನೆಗೆ ಬರ್ತಾಳೆ.

ತವರು ಮನೆಗೆ ಬಂದಾಗ್ಲೂ ಸಹ ಸಾಕ್ಷಿ ಗಂಡನ ಮನೆಗೆ ಹೋಗ್ಬೆಕು ಅಂಥ ಕಾರ್ತಿಕ್ ಗೆ ತುಂಬಾ ಸರಿ ಕಾಲ್ ಮಾಡ್ತಾಳೆ, ಕಾರ್ತಿಕ್ ಕೆಲಸ ಮಾಡ್ತಿದ್ದಂತಹ ಆಫಿಸ್ ಹತ್ತಿರವೂ ಕೂಡ ಹೋಗ್ತಾಳೆ.. ಇಷ್ಟಾದ್ರು ಕೂಡ ಕಾರ್ತಿಕ್ ಸಾಕ್ಷಿಯ ಕಡೆಗೆ ತಿರುಗಿ ನೋಡೋದಿಲ್ಲಾ. ನಂತರ ಕಾರ್ತಿಕ್ ನೀನು ಇದೇ ರೀತಿ ಯಾವಾಗಲೂ ಬಂದು ಟಾ’ರ್ಚ’ರ್ ಕೊಡ್ತಿದ್ರೆ ನಾನು ಡೈ’ವೋರ್ಸ್ ಕೊಡ್ತಿನಿ ಅಂಥ ಹೇಳಿ ಸಾಕ್ಷಿಗೆ ಒಂದು ಲೆಟರ್ ಕಳಿಸ್ತಾನೆ. ಇದನ್ನ ನೋಡಿದ ಸಾಕ್ಷಿ ಆ ದಿನದಿಂದ ಕಣ್ಮರೆ ಆಗ್ತಾಳೆ.. ತವರು ಮನೆಯ ಜೊತೆಗೆ ಬೇರೆ ಕಡೆ ಹೋಗಿ ಜೀವನ ಮಾಡ್ತಿರ್ತಾಳೆ. ಒಂದು ದಿನ ಕಾರ್ತಿಕ್ ಯುಟೂಬ್ ಪೇಸ್ಬುಕ್ ಗಳನ್ನೆಲ್ಲಾ ನೋಡ್ತಿದ್ದಂತಹ ಸಂದರ್ಭದಲ್ಲಿ ಅವನಿಗೆ ಒಂದು ಅಚ್ಚರಿ ಕಾಣುತ್ತೆ.. ಅದೇನಪ್ಪಾ ಅಂದರೆ ತಾನು ಮದುವೆ ಆಗಿರುವಂತಹ ಸಾಕ್ಷಿ, ಆತನ ಹೆಂಡತಿ ಒಂದು ಟೀವಿ ಚಾನೆಲ್ ನಲ್ಲಿ ನ್ಯೂಸ್ ಆ್ಯಂಕರ್ ಆಗಿ ಕೆಲಸ ಮಾಡ್ತಿರುವಥದ್ದು.. ಅದೇ ರೀತಿ ಸಾಕ್ಷಿ ದೇಹದ ತೂಕ ಕಡಿಮೆಯಾಗಿ ತುಂಬಾ ಸುಂದರವಾಗಿ ಕಾಣ್ತಿರ್ತಾಳೆ. ತುಂಬಾ ಖುಷಿಯಾದ ಕಾರ್ತಿಕ್ ಆಕೆ ಎಲ್ಲಿದ್ದಾಳೆ ಎಂಬುದನ್ನು ಪತ್ತೆ ಮಾಡಿ ಸಾಕ್ಷಿ ಮನೆಗೆ ಹೋಗ್ತಾನೆ..

ನಂತರ ಸಾಕ್ಷಿ ಹತ್ತಿರ ಹೋಗಿ ತುಂಬಾ ಸಣ್ಣ ಆಗಿದಿಯಾ ನೋಡೊದಕ್ಕೆ ತುಂಬಾ ಸುಂದರವಾಗಿ ಕಾಣ್ತಿದಿಯಾ ಬಾ ಮನೆಗೆ ಹೋಗೋಣ ಅಂಥ ಕರಿತಾನೆ.. ಆಗ ಸಾಕ್ಷಿ ಒಂದು ಮಾತು ಹೇಳ್ತಾಳೆ.. ಆ ದಿನ ನಾನು ತುಂಬಾ ಬೇಡಿಕೊಂಡೆ, ಗೋಗರದೇ ನನ್ನನ್ನ ಬಿಟ್ಟು ಹೋಗಬೇಡಿ ಅಂಥ.. ಇವತ್ತು ನನ್ನ ಜೀವನದಲ್ಲಿ ನಿಮಗಿಂತ ಮುಖ್ಯವಾಗಿ ಇರುವಂತಹ ಒಬ್ಬ ವ್ಯಕ್ತಿ ಇದಾನೆ ಅವನನ್ನು ಬಿಟ್ಟು ನಾನು ಬರೋದಕ್ಕೆ ಆಗೋದಿಲ್ಲಾ ಅಂಥ. ಇದನ್ನ ಕೇಳಿದ ಕಾರ್ತಿಕ್ ಗೆ ಬಹಳಷ್ಟು ಕೋ’ಪ ಬರುತ್ತೆ.. ಎಲ್ಲೋ ಸಾಕ್ಷಿ ಇನ್ನೊಂದು ಮದುವೆ ಆಗಿದ್ದಾಳಾ ಅಥವಾ ಯಾರನ್ನಾದ್ರು ಇಟ್ಟುಕೊಂಡಿದ್ದಾಳಾ ಅನ್ನುವ ಪ್ರಶ್ನೆ ಕಾಡುತ್ತೆ. ಜೋರಾಗಿ ಕಿ’ರು’ಚಿ ಹೇಳ್ತಾನೆ ಹಾಗಾದರೆ ನೀನು ಇನ್ನೊಬ್ಬನನ್ನ ಇ’ಟ್ಟುಕೊಂಡಿದಿಯಾ, ಮದುವೆಯಾಗಿದಿಯಾ ಹಾಗೆ ಈಗೆ ಅಂಥ ಕೂಗಾಡ್ತಾನೆ.. ಆಗ ಸಾಕ್ಷಿ ಹೇಳ್ತಾಳೆ ನೀನು ಅಂದುಕೊಂಡಾಗೆ ಏನು ಇಲ್ಲಾ.. ನನ್ನ ಜೀವನವನ್ನ ಬದಲಾಯಿಸಿದಂತಹ ವ್ಯಕ್ತಿ ಮತ್ಯಾರು ಅಲ್ಲಾ ಅಲ್ಲಿ ಕುತ್ಕೊಂಡಿದಾನೆ ನೋಡು ಆ ವ್ಯಕ್ತಿ ಅಂಥ ಹೆಳ್ತಾಳೆ. ಅದು ಯಾರು ಅಲ್ಲಾ ಕಾರ್ತಿಕ್ ಮತ್ತು ಸಾಕ್ಷಿಗೆ ಹುಟ್ಟಿರುವಂತಹ ಆರು ವರ್ಷದ ಮಗ.. ನನ್ನ ಮಗನೇ ನನಗೆ ಸರ್ವಸ್ವ, ಅವನೇ ನನ್ನ ಜೀವನವನ್ನ ಬದಲಾಯಿಸಿದ್ದು ಅಂಥ ಹೇಳ್ತಾಳೆ.

ಆಗ ಕಾರ್ತಿಕ್ ಅದು ಹೇಗೆ ಅಂಥ ಕೇಳ್ತಾನೆ.. ಅದಕ್ಕೆ ಸಾಕ್ಷಿ ನೀನು ನನ್ನ ದಪ್ಪ ಇದಿಯಾ, ಸುಂದರವಾಗಿಲ್ಲ ಅಂಥ ಹೀಯಾಳಿಸಿದೆ.. ಆದರೆ ನನ್ನ ಮಗ ತೊದಲು ಮಾತುಗಳಿಂದ ಅಮ್ಮ ನೀನು ತುಂಬಾ ಸುಂದರವಾಗಿದಿಯಾ ಅಂಥ ಹೇಳಿ ನನಗೆ ಸ್ಫೂರ್ತಿಯಾಗಿದ್ದ, ನಾನೇನೆ ಕೆಲಸಗಳು ಮಾಡ್ತಿದ್ರು, ವರ್ಕೌಟ್ ಮಾಡ್ತಿದ್ರು ಹುರಿದುಂಬಿಸ್ತಿದ್ದ.. ನನಗೇ ಅವನೇ ಪ್ರಪಂಚವಾಗಿದ್ದ. ನಿನ್ನ ನೆನಪಲ್ಲಿ, ನಿನ್ನನ್ನ ಅವನಲ್ಲಿ ಕಾಣ್ತಾ ನಾನು ಎಲ್ಲವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಇವತ್ತು ನ್ಯೂಸ್ ಆ್ಯಂಕರ್ ಆಗಿ ಕೆಲಸ ಮಾಡ್ತಿದ್ದೇನೆ ಅಂಥ. ಆಗ ಕಾರ್ತಿಕ್ ಗೆ ತನ್ನ ತಪ್ಪಿನ ಅರಿವಾಗುತ್ತೆ.. ನನ್ನಿಂದ ತಪ್ಪಾಗಿದೆ ಕ್ಷಮಿಸು ಬಿಡು ಅಂತ ಹೇಳಿ ಸಾಕ್ಷಿಯ ಕಾಲಿಗೆ ಬಿದ್ದು ಕ್ಷಮೆ ಕೇಳ್ತಾನೆ. ಆಗ ಸಾಕ್ಷಿ ಹೇಳ್ತಾಳೆ ನೀವು ನನ್ನ ಕಾಲಿಗೆ ಬೀಳ್ಬೇಡಿ, ನನ್ನ ಗಂಡ ಅನಿಸ್ಕೊಂಡಿದಿರಾ.. ನಿಮಗೆ ಮನವರಿಕೆ ಆಗ್ಬೇಕು ನೀವು ನಿಮ್ಮ ತಪ್ಪನ್ನ ಅರ್ಥ ಮಾಡಿಕೊಂಡು ಬಂದಿದಿರಲ್ವಾ ಅಷ್ಟೇ ಸಾಕು ಅಂಥ ಹೇಳಿ ಕಾರ್ತಿಕ್ ನನ್ನ ಗಟ್ಟಿಯಾಗಿ ತಬ್ಬಿಕೊಂಡು ಅಳ್ತಾಳೆ.. ಇದಾದ ನಂತರ ಸಾಕ್ಷಿಯ ಜೀವನ ಮೊದಲಿನಂತಾಗುತ್ತೆ, ಕಾರ್ತಿಕ್ ಗೆ ತನ್ನ ತಪ್ಪಿನ ಅರಿವಾಗುತ್ತೆ..