Advertisements

ಸಲಗ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? ದಾಖಲೆಗಳೆಲ್ಲಾ ಬ್ರೇ’ಕ್..

Kannada Mahiti

ನಮಸ್ತೇ ಸ್ನೇಹಿತರೆ, ನಟ ದುನಿಯಾ ವಿಜಯ್ ಅವರ ಬಹು ನಿರೀಕ್ಷಿತ ಸಿನಿಮಾ.. ನಟ ದುನಿಯಾ ವಿಜಯ್ ಹಾಗು ಡಾಲಿ ಧನಂಜಯ್ ಅವರ ಅಭಿನಯದ ಬಹು ನಿರೀಕ್ಷಿತ ಸಲಗ ಸಿನಿಮಾ ಇಂದು ಕರ್ನಾಟಕದಾದ್ಯಂತ ಅದ್ದೂರಿಯಾಗಿ ಪ್ರದರ್ಶನ ಕಂಡಿದ್ದು ದುನಿಯಾ ವಿಜಯ್ ಅವರು ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಿದ್ದಾರೆ. ದುನಿಯಾ ವಿಜಯ್ ಅವರನ್ನ ನೋಡಿದ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದು ಸಲಗ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಕೊಟ್ಟ ಅಂಕ ಎಷ್ಟು ಹಾಗು ಮೊದಲ ದಿನವೇ ಬಾಕ್ಸ್ ಆಫಿಸ್ ನಲ್ಲಿ ಸಲಗ ಚಿತ್ರ ದುಳೆಬ್ಬಿಸಿದ್ಯಾ.. ಎಷ್ಟು ಕಲೆಕ್ಷನ್ ಮಾಡಿದೆ ಗೊತ್ತಾ.. ನಟ ದುನಿಯಾ ವಿಜಯ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸಲಗ ಟೀಸರ್ ಹಾಗು ಹಾಡುಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು..

Advertisements

ಇದಾದ ನಂತರ ಕ’ರೋ’ನ ಕಾರಣದಿಂದಾಗಿ ಸಲಗ ಚಿತ್ರ ಬಿಡುಗಡೆಗೆ ದಿನಗಳು ಕಾಯಬೇಕಾಗಿತ್ತು.. ಆದರೆ ಈಗ ಕ’ರೋ’ನ ಆತಂಕದ ನಡುವೆಯೂ ಸಲಗ ಚಿತ್ರ ಬಿಡುಗಡೆಯಾಗಿದ್ದು ಪ್ರೇಕ್ಷಕ ಪ್ರಭುಗಳಿಗೆ ರಸದೌತಣ ಉಣ ಬಡಿಸಿದೆ ಅಂತಾನೆ ಹೇಳಬಹುದು. ಇಂದು ಸಲಗ ಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಂಡಿದ್ದು ಸಲಗ ಚಿತ್ರಕ್ಕೆ ಪ್ರೇಕ್ಷಕ ಮಹಾಪ್ರಭುಗಳು ಫುಲ್ ಅಂಕ ಕೊಟ್ಟಿದ್ದಾರೆ.. ಹೌದು ಇಡೀ ಚಿತ್ರದಲ್ಲಿ ಎಲ್ಲೂ ಕೂಡ ಬೋರಿಂಗ್ ಆಗೋದಿಲ್ಲಾ. ಯಾಕೆಂದರೆ ಮಾಸ್ತಿ ಅವರ ಡೈಲಾಗ್, ಚರಣ್ ರಾಜ್ ಅವರ ಹಿನ್ನಲೆ ಸಂಗೀತ ಪ್ರೇಕ್ಷಕರನ್ನ ಕುಂತಲ್ಲಿಯೇ ಕಟ್ಟಿ ಹಾಕತ್ತೆ..

ಇನ್ನೂ ದುನಿಯಾ ವಿಜಯ್ ಹಾಗು ದನಂಜಯ್ ಅವರ ಜುಗಲ್ ಬಂದಿ ಎಲ್ಲರಿಗೂ ಮಜ ಕೊಡುತ್ತೆ.. ಇನ್ನೂ ಸಲಗ ಚಿತ್ರ ರಾಜ್ಯದ್ಯಾಂತ 350 ಕ್ಕು ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಮೊದಲ ದಿನವೇ ಅದ್ದೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ.. ಇನ್ನೂ ಸಲಗ ಚಿತ್ರ ಇನ್ನೊಂದು ಓಂ ಚಿತ್ರವಾಗುತ್ತೆ ಅಂಥ ಪ್ರೇಕ್ಷಕರು ಹೇಳ್ತಿದ್ದು ಸಲಗ ಚಿತ್ರಕ್ಕೆ ಫುಲ್ ಅಂಕವನ್ನು ಕೊಟ್ಟಿದ್ದಾರೆ. ಇನ್ನೂ ಮೊದಲ ದಿನವೇ ಹಲವಾರು ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿರುವ ಸಲಗ ಚಿತ್ರ ಮೊದಲ ದಿನವೇ ಬರೋಬ್ಬರಿ 8 ರಿಂದ 10 ಕೋಟಿ ಕಲೆಕ್ಷನ್ ಮಾಡಿದೆ ಅಂಥ ಗಾಂಧಿನಗರ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ..