Advertisements

ವಿಶ್ವಸಂಸ್ಥೆಯ ಅಂಬಾಸಿಡರ್ ಆದ ಕ್ಷೌರಿಕನ 13 ವರ್ಷದ ಮಗಳು !

Inspire

ಲಾಕ್ ಡೌನ್ ವೇಳೆ ಸಂಕಷಕ್ಕೆ ಒಳಗಾಗಿದ್ದ ಜನರ ನೆರವಿಗೆ ಧಾವಿಸಿದ್ದ ಕ್ಷೌರಿಕರೊಬ್ಬರ ಮಗಳು ಈಗ ವಿಶ್ವಸಂಸ್ಥೆಯ ರಾಯಭಾರಿಯಾಗಿ ಆಯ್ಕೆಯಾಗಿದ್ದು ಜನರ ಮೆಚ್ಚುಗೆಗೆ ಕಾರಣವಾಗಿದೆ. ಹೌದು, ತಮಿಳುನಾಡಿನ ಮಧುರೈವರಾದ,ಕ್ಷೌರಿಕ ವೃತ್ತಿ ಮಾಡುತ್ತಿರುವ ಮೋಹನ್ ಎಂಬುವವರ ಪುತ್ರಿಯೇ ಈ ಮಹಾನ್ ಸಾಧನೆ ಮಾಡಿದ ಸಾಧಕಿ.

Advertisements

ಕೊರೋನಾ ಕಾರಣದಿಂದಾಗಿ ಲಾಕ್ ಡೌನ್ ಆದ ಕಾರಣ ಬಹುತೇಕ ಜನರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದರು. ಆಗ ಮಧುರೈನ ಕ್ಷೌರಿಕ ಮೋಹನ್ ರವರ ಮಗಳಾದ ಹದಿಮೂರು ವರ್ಷದ ನೇತ್ರ ಎಂಬ ಯುವತಿ ಸಂಕಷ್ಟಕ್ರ ನೆರವಿಗೆ ಧಾವಿಸಿದ್ದು, ತನ್ನ ತಂದೆ ತನಗಾಗಿ ಕೂಡಿಟ್ಟಿದ್ದ ಬರೋಬ್ಬರಿ 5 ಲಕ್ಷ ರೂಗಳ ಹಣವನ್ನ ಸುಮಾರು ೬೦೦ ಕಿಂತ ಹೆಚ್ಚು ಕುಟುಂಬಳಿಗೆ ಆಹಾರದ ಕಿಟ್ ಗಳನ್ನ ಹಂಚಲು ಆ ಹಣವನ್ನ ಬಳಸಿದ್ದರು.

ಇನ್ನು ಇದೆ ವಿಷಯ ಪ್ರಧಾನಿ ಮೋದಿಯವರ ಕಿವಿಗೆ ಬಿದ್ದಿದ್ದು, ಫೇಮಸ್ ರೇಡಿಯೋ ಕಾರ್ಯಕ್ರಮವಾದ ಪ್ರಧಾನಿಯವರ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ನೇತ್ರಾರವರ ಸಾಧನೆಯನ್ನ ಕೊಂಡಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.ಈಗ ನೇತ್ರರವರ ಈ ಸಾಧನೆಯನ್ನ ಗುರುತಿಸಿರುವ ವಿಶ್ವಸಂಸ್ಥೆ, ನ್ಯೂಯಾರ್ಕ್ ಮತ್ತು ಜಿನೇವಾದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಅದರಲ್ಲೂ ವಿಶ್ವನಾಯಕರ ಮುಂದೆ ಭಾಷಣ ಮಾಡಲಿದ್ದಾಳೆ ಎಂದು ಹೇಳಲಾಗಿದೆ. ಇನ್ನು ಈ ಭಾಷಣಕ್ಕಾಗಿ 13 ವರ್ಷದ ನೇತ್ರ ಒಂದು ಲಕ್ಷ ಶಿಷ್ಯವೇತನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.