Advertisements

ಒಬ್ಬರಿಗೊಬ್ಬರು ದೂರವಾದ್ರು ಮತ್ತೆ ಸುದ್ದಿಯಾದ ಜೋಡಿ.. ನಾಗಚೈತನ್ಯ ಸಮಂತಾ ನಡುವೆ ಈಗ ಆಗಿದ್ದೇನು ಗೊತ್ತೇ!

Cinema

ಸಮಂತಾ.. ಇತ್ತೀಚಿಗೆ ಅತೀ ಹೆಚ್ಚು ಸದ್ದು ಮಾಡುತ್ತಿರುವ ಸೆಲೆಬ್ರಿಟಿ. ಈಕೆ ಫ್ಯಾಮಿಲಿ ಮ್ಯಾನ್ 2 ಸಿರೀಸ್ ಅಲ್ಲಿ ಕಾಣಿಸಿಕೊಂಡ ನಂತರದ ದಿನಗಳಲ್ಲಿ ಅತಿ ಹೆಚ್ಚಾಗಿ ಸುದ್ದಿಯಾಗಿದ್ದಾರೆ. ವೆಬ್ ಸಿರೀಸ್ ಅಲ್ಲಿ ತನ್ನ ಹಾಟ್ ಲುಕ್ ಇಂದ ಸಮಂತಾ ಸದ್ದು ಮಾಡಿದ್ರೆ, ಅದಾದ ಮೇಲೆ ವೈಯಕ್ತಿಕ ವಿಚಾರಗಳಿಂದ ಸಮಂತಾ ಹೆಚ್ಚಾಗಿ ಚರ್ಚೆಯಲ್ಲಿ ಸಿಲುಕಿಕೊಂಡ್ರು.
ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೆಸರ ಜೊತೆಗಿದ್ದ ಅಕ್ಕಿನೇನಿ ಸರ್​​ನೇಮ್ ಅನ್ನು ತೆಗೆಯುವ ಮೂಲಕ ದಾಂಪತ್ಯ ಜೀವನದ ಬಿ’ರುಕಿ’ನ ಬಗ್ಗೆ ಹಿಂಡ್ಸ್ ಕೊಟ್ಟ ಸಮಂತಾ ನಂತರದ ದಿನಗಳಲ್ಲಿ ಅಕ್ಕಿನೇನಿ ಕುಟುಂಬದಿಂದ ಹೊರ ನಡೆಯುವ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ರು.

[widget id=”custom_html-3″]

Advertisements

ಇವರಿಬ್ಬರ ಡೈವೋರ್ಸ್ ಸಾಕಷ್ಟು ಸದ್ದು ಮಾಡಿತ್ತು. ಇತ್ತೀಚಿಗೆ ನಾಗಚೈತನ್ಯ ಬರ್ತಡೇಗೆ ವಿಶ್ ಮಾಡದೇ ಇದ್ದ ಸಮಂತಾ ತನ್ನ ನಾಯಿಯ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದ್ದು ಸಹ ಸದ್ದು ಮಾಡಿತ್ತು ಅದಾದ ಬಳಿಕ ಈಗ ಮತ್ತೆ ಸುದ್ದಿಯಾಗಿದ್ದಾರೆ. ಏನಾ ಸುದ್ದಿ ಇಲ್ಲಿದೆ ನೋಡಿ ಡಿಟೇಲ್ಸ್ ಅರೇಂಜ್‌ಮೆಂಟ್ಸ್ ಆಫ್ ಲವ್’ ಎಂಬ ಚೊಚ್ಚಲ ಹಾಲಿವುಡ್ ಚಿತ್ರದಲ್ಲಿ ಸಮಂತಾ ಅವರು ತಮಿಳು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.ನಿರ್ದೇಶಕ ಫಿಲಿಪ್ ಜಾನ್ ಜತೆಗೆ ಫೋಟೊ ಒಂದನ್ನು ಸಮಂತಾ ಅವರು ಪೋಸ್ಟ್ ಮಾಡಿದ್ದು, ಹೊಸ ಸಿನಿಮಾದ ಪೋಸ್ಟರ್ ಅನ್ನು ಕೂಡ ಶೇರ್ ಮಾಡಿಕೊಳ್ಳುವ ಮೂಲಕ ಹಾಲಿವುಡ್‌ಗೆ ತೆರಳುತ್ತಿರುವ ಬಗ್ಗೆ ದೃಢಪಡಿಸಿದ್ದಾರೆ. ಹೊಸ ಜಗತ್ತು, ಹೊಸ ಕೆಲಸಕ್ಕೆ ತೆರೆದುಕೊಳ್ಳುತ್ತಿದ್ದೇನೆ.. ವಿಶೇಷ ಅವಕಾಶವೊಂದು ನನ್ನ ಪಾಲಿಗೆ ಬಂದಿದೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.

[widget id=”custom_html-3″]

ಈ ಹಿಂದೆ ಸಮಂತಾ ನಟಿಸಿದ್ದ ‘ಓಹ್​ ಬೇಬಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದ ‘ಗುರು ಫಿಲ್ಮ್ಸ್​’ ಬ್ಯಾನರ್​ ಮೂಲಕವೇ ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಸಿನಿಮಾ ತಯಾರಾಗಲಿದೆ. ಅದೇ ಶೀರ್ಷಿಕೆಯ ಕಾದಂಬರಿ ಆಧರಿಸಿ ಈ ಚಿತ್ರ ಮೂಡಿಬರಲಿದೆ.ಇದು ನನಗೆ ಹೊಸ ಪ್ರಪಂಚ. ನಾನು ಕೊನೆ ಬಾರಿಗೆ ಆಡಿಷನ್​ ನೀಡಿದ್ದು 2009ರಲ್ಲಿ ‘ಏ ಮಾಯ ಚೇಸಾವೆ’ ಚಿತ್ರಕ್ಕಾಗಿ. 12 ವರ್ಷಗಳ ಬಳಿಕ ಮತ್ತೆ ಆಡಿಷನ್​ ನೀಡಿದ್ದೇನೆ. ಮತ್ತೆ ಅದೇ ರೀತಿ ನರ್ವಸ್​ ಆಗಿದ್ದೇನೆ. ಫಿಲಿಪ್​ ಜಾನ್ ಜೊತೆ ಕೆಲಸ ಮಾಡುವುದು ತುಂಬ ಅಪರೂಪದ ಅವಕಾಶ. ಈ ಪಾತ್ರಕ್ಕೆ ಆಯ್ಕೆ ಆಗಿರುವುದು ತುಂಬ ಖುಷಿ ಆಗುತ್ತಿದೆ. ಈ ಪಯಣ ಆರಂಭಿಸಲು ಕಾತರದಿಂದ ಕಾಯುತ್ತಿದ್ದೇನೆ’ ಎಂದು ಸಮಂತಾ ಹೇಳಿದ್ದಾರೆ.​ ಆಗಸ್ಟ್ 2022 ರಂದು ಸಿನಿಮಾ ಸೆಟ್ಟೇರುವ ನಿರೀಕ್ಷೆಯಿದೆ.

[widget id=”custom_html-3″]