Advertisements

ನಾಗಚೈತನ್ಯ ಜೊತೆ ಡೈವರ್ಸ್.. ಈಗ ಅವರ ಕಾಟ ತಡೆಯಲಾರದೆ ಕೋರ್ಟ್ ಮೊರೆ ಹೋದ ಸಮಂತಾ.. ಏನಾಗಿದೆ ಗೊತ್ತಾ?

Cinema

ಸಮಂತಾ ನಟನೆಗೆ ಫಿದಾ ಆಗದವರು ಯಾರಿದ್ದಾರೆ ಹೇಳಿ! ಆವರ ನಗುವಿಂದ ಹಿಡಿದು,, ನಟನೆ ಎಲ್ಲವೂ ಸಹ ಅಧ್ಬುತ.. ಈ ಸಾಲಿಗೆ ಪುಷ್ಟಿ ಕೊಡಲು ಸಾಕಷ್ಟು ಸಿನಿಮಾಗಳು ಉದಾಹರಣೆಯಾಗಿ ನಮ್ಮ ಕಣ್ಣು ಮುಂದಿದೆ.. ಇತ್ತೀಚಿಗೆ ಬಾಲಿವುಡ್ ಅಲ್ಲಿ ಸಹ ತನ್ನ ಪ್ರತಿಭೆಯನ್ನು ಸಮಂತಾ ಅನಾವರಣ ಮಾಡಿದ್ರು.. ಫ್ಯಾಮಿಲಿ ಮ್ಯಾನ್ 2 ಸೀರೀಸ್ ಅಲ್ಲಿ ಸಮಂತಾ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆಯ ಮಹಾಪೂರ ಹರಿದು ಬಂತು ಈ ಖುಷಿಯ ನಶೆಯಲ್ಲಿ ಇರುವ ಹೊತ್ತಲೆ ಸಮಂತಾ ದಾಂಪತ್ಯ ಜೀವನ ಸಹ ಬಿರುಕು ಮೂಡಿದ ವಿಚಾರ ಸ್ಪೋ’ಟ’ಕವಾಗಿ ಹೊರಹೊಮ್ಮಿತು. ಈ ಸುದ್ದಿ ಸಾಕಷ್ಟು ಚರ್ಚೆಯಾಯಿತು.. ಅದೇನೇ ಇರಲಿ ಆದರೇ ವಿಚ್ಛೇದನದ ವಿಚಾರ ಹೊರ ಬಂದಾಗಿನಿಂದ ಸಮಂತಾ ಮಾತ್ರ ಸೋಶಿಯಲ್ ಮೀಡಿಯಾ ಅಲ್ಲಿ ಸಖತ್ ಆಕ್ಟೀವ್ ಆಗಿದ್ರು.
ದಿನ ಒಂದೊಂದು ಪೋಸ್ಟ್ ಹಾಕ್ತಾ ಇದ್ರು, ತನ್ನ ಮನಸಿನ ನೋವು ಮರೆಯಲು ಇತ್ತೀಚಿಗೆ ಹೃಷಿಕೇಶ ಹಾಗೂ ದುಬೈ ಟ್ರಿಪ್ ಸಹ ಹೋಗಿದ್ರು..

[widget id=”custom_html-3″]

Advertisements

ಈ ಮಧ್ಯೆ ಮದುವೆ ಬಗ್ಗೆ ಸಮಂತಾ ಎಲ್ಲ ಪೋಷಕರನ್ನು ಉದ್ದೇಶಿಸಿ ಒಂದು ಪೋಸ್ಟ್ ಹಾಕಿದ್ದಾರೆ ಸದ್ಯ ಈ ಪೋಸ್ಟ್ ಈಗ ಜನ ಮನ ಸೆಳೆಯುತ್ತಿದೆ. ಹೌದು ಸಮಂತಾ ಈ ರೀತಿಯಾಗಿ ಪೋಸ್ಟ್ ಮಾಡಿದ್ದಾರೆ. ನಿಮ್ಮ ಮಗಳನ್ನು ಸಮರ್ಥವಾಗಿ ಬೆಳೆಸಿ. ಇದರಿಂದ ಮಕ್ಕಳಿಗೆ ತಾವು ಯಾರನ್ನು ಮದುವೆ ಆಗುತ್ತೇವೆ ಎನ್ನುವ ಚಿಂತೆಯೇ ಅವರಿಗೆ ಬರದಿರಲಿ. ಮಗಳ ಮದುವೆಗೆ ಹಣ ಕೂಡಿಡುವ ಬದಲು, ಅವರ ಶಿಕ್ಷಣಕ್ಕೆ ಆ ಹಣವನ್ನು ಬಳಸಿರಿ.. ಅವರನ್ನು ಮದುವೆಗೆ ಮಾನಸಿಕವಾಗಿ ಸಿದ್ಧಪಡಿಸುವ ಬದಲು ವೈಯಕ್ತಿಕವಾಗಿ ಗಟ್ಟಿಗೊಳಿಸಿ. ಸೆಲ್ಫ್​ ಲವ್​, ಆತ್ಮವಿಶ್ವಾಸವನ್ನು ಅವರಲ್ಲಿ ಜಾಸ್ತಿ ಮಾಡಿ ಅಂತ ಸಮಂತಾ ಪೋಸ್ಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಸಮಂತಾ ವೈಯಕ್ತಿಕ ಜೀವನದ ಬಗ್ಗೆ ಕಳೆದ ಕೆಲವು ತಿಂಗಳಿಂದ ಹಲವು ಸುದ್ದಿಗಳು ಊಹಾ ಪೋಹಗಳು ಎಗ್ಗಿಲ್ಲದೆ ಹರಿದಾಡಿದ್ದವು. ಅದರಲ್ಲಿ ಎಷ್ಟು ಸುಳ್ಳು, ಎಷ್ಟು ಸತ್ಯಇದೆ ಎಂಬುದು ತಿಳಿದಿಲ್ಲ.

[widget id=”custom_html-3″]

ಮಾಜಿ ಪತಿ ನಾಗ ಚೈತನ್ಯ ಜೊತೆಗೆ ವಿ’ಚ್ಛೇ’ದನ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಬಣ್ಣಬಣ್ಣದ ಗಾಸಿಪ್​ಗಳು ಕೇಳಿಬಂದಿದ್ದು ಸಮಂತಾಗೆ ನಿಜಕ್ಕೂ ಬೇಸರ ಮೂಡಿಸಿದೆ. ಈ ಹಿನ್ನಲೆ ಸಮಂತಾ ಒಂದು ನಿರ್ಧಾರಕ್ಕೆ ಬಂದರು.. ತನ್ನ ವಿರುದ್ಧ ಕತೆ ಕಟ್ಟುವವರ ವಿರುದ್ಧ ಸಮಂತಾ ಕಾನೂನು ಸಮರ ಸಾರಿದ್ದಾರೆ. ತಮ್ಮ ವಿರುದ್ಧ ಮಾನಹಾನಿ ಆಗುವಂತಹ ಮಾಹಿತಿಯನ್ನು ಪ್ರಸಾರ ಮಾಡಿದ ಯೂಟ್ಯೂಬರ್​ಗಳ ಮೇಲೆ ಅವರು ಮಾ’ನ’ನಷ್ಟ ಮೊ’ಕ’ದ್ದಮೆ ಹೂಡಿದ್ದರು. ಆದರೆ ನ್ಯಾಯಾಲಯದಲ್ಲಿ ಸಮಂತಾಗೆ ಹಿನ್ನಡೆ ಆಗಿತ್ತು. ಹೈದರಾಬಾದ್​ನ ಸ್ಥಳೀಯ ನ್ಯಾಯಾಲಯದಲ್ಲಿ ಸಮಂತಾ ಈ ಮೊಕದ್ದಮೆ ಹೂಡಿದ್ದರು.. ಅಲ್ಲದೇ ಈ ಕೇ’ಸ್​ ವಿಚಾರಣೆಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು ಎಂದು ಸಮಂತಾ ಪರ ವಕೀಲರು ಮನವಿ ಸಹ ಮಾಡಿಕೊಂಡಿದ್ದಾರೆ. ಆದ್ರೆ ಈ ವಿಚಾರವನ್ನು ಗಂ’ಭೀ’ರವಾಗಿ ಪರಿಗಣಿಸದ ಕೋರ್ಟ್ ಅದಕ್ಕೆಲ್ಲ ಒಪ್ಪಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.