Advertisements

ಸಮಂತಾ ನಾಗಚೈತನ್ಯ ದೂರ ಆಗೋದಕ್ಕೆ ನಿಜವಾದ ಕಾರಣ ಏನು ಗೊತ್ತಾ? ಬಯಲಾಯ್ತು ಅಸಲಿ ಸತ್ಯ! 10 ಕೋಟಿ ಮದುವೆ ನಾಲ್ಕು ವರ್ಷ ಬಂತು..

Cinema

ಆ ಕಪಲ್ಸ್ ಸ್ಟೇಜ್​ಗೆ ಬಂದ್ರೆ ಅದೇನೋ ಚಪ್ಪಾಳೆ, ಶಿಳ್ಳೆ, ಕೇಕೆ.. ಆಡಿಯನ್ಸ್ ಕಲರವ.. ಅಬ್ಬಬ್ಬಾ.. ಪ್ರೇಕ್ಷಕ ಪ್ರಭುಗಳ ಮನದ ಅರಸ ಅರಸಿಯರು. ಈ ಇಬ್ಬರು. ಆದ್ರೆ ಅದೆನಾಯ್ತು? ಯಾವ ಮಸಣಿ ಕಣ್ಣು ಬಿತ್ತು? ಯಾರ ಕೆಟ್ಟ ಕಣ್ಣು ಈ ಕಪಲ್ಸ್ ಮೇಲೆ ಬಿತ್ತು? ಎಲ್ಲವೂ ಅಸ್ಪಷ್ಟ.. ಆದ್ರೆ ಒಂದು ಸ್ಪಷ್ಟವಾಗಿದೆ. ಅದು ಈ ಯೇ ಮಾಯಾ ಚೇಸವೇ ಸಿನಿಮಾ ಮಾಡಿ ಮೋಡಿ ಮಾಡಿದ ಜೋಡಿ.. ಇವತ್ತು ಜೊತೆಯಾಗಿಲ್ಲ. ಟಾಲಿವುಡ್​ನ ಈ ಮುದ್ದಾದ ಜೋಡಿಯ ಮೇಲೆ ಅದ್ಯಾರ ವಕ್ರದೃಷ್ಟಿ ಬಿತ್ತೋ.. ತೆಲುಗಿನ ಕ್ಯೂಟ್​​ ಕಪಲ್​​ ಮೇಲೆ ಅದ್ಯಾವ ಕೆಂಗಣ್ಣು ಬಿತ್ತೋ. ಕಳೆದೊಂದು ದಶಕದಿಂದ ಪ್ರೀತಿ ಎಂಬ ಯುಗಳ ಗೀತೆ ಹಾಡುತ್ತಿದ್ದ ಇಬ್ಬರ ಬಾಳಲ್ಲಿ ಈಗ ವಿರಹ ಗೀತೆ ಹಾಡುವ ಸಮಯ ಬಂದೇ ಬಿಟ್ಟಿದೆ. ಇಡೀ ದೇಶವೇ ಇಬ್ಬರ ಜೋಡಿ ನೋಡಿ ವಾಹ್ ಎಷ್ಟು ಚೆಂದ ಅಲ್ವಾ ಅಂತಾ ಅಸೂಯೆಪಟ್ಟುಕೊಳ್ಳುತ್ತಿದ್ದ ಹೊತ್ತಲ್ಲೇ, ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ದೂರಾಗುವ ಘೋಷಣೆ ಮಾಡಿಬಿಟ್ಟಿದ್ದಾರೆ..

Advertisements

ಹಲವು ದಿನಗಳಿಂದ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಸಮಂತಾ, ನಾಗಚೈತನ್ಯ ಇಬ್ಬರೂ ದಾಂಪತ್ಯ ಜೀವನಕ್ಕೆ ಶುಭಂ ಹಾಡಿದ್ದಾರೆ.. ಕೆಲವೊಂದು ಸಂಬಂಧಗಳೇ ಹಾಗೆ ..ಅದ್ಯಾವಾಗ ಹುಟ್ಟುತ್ತೋ ಅದ್ಯಾವಾಗ ಎಂಡ್​ ಆಗುತ್ತೋ ಹೇಳಕ್ಕಾಗಲ್ಲ. ಅದರಲ್ಲೂ ಸೆಲೆಬ್ರೆಟಿಗಳ ಸಂಬಂಧಕ್ಕೆ ಎಕ್ಸ್​​ಪೈರಿ​ ಡೇಟ್​​ ಸನಿಹದಲ್ಲೇ ಇರುತ್ತದೆ ಅನ್ನೋದನ್ನ ಸಮಂತಾ ನಾಗಚೈತನ್ಯ ಸಾಬೀತುಪಡಿಸಿದ್ದಾರೆ. ಫ್ಯಾನ್ಸ್​ ಪಾರ್ಥನೆ ಫಲಿಸಲಿಲ್ಲ. ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದ್ದ ವದಂತಿ ಸುಳ್ಳಾಗಲಿಲ್ಲ. ಈ ಜೋಡಿಗೆ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆ ನಡೆಸಲು ಸಾಧ್ಯವಾಗಿಲ್ಲ. ಇನ್ಮುಂದೆ ನಾಗ ಚೈತನ್ಯ ಹಾಗೂ ಸಮಂತಾ ಪತಿ ಪತ್ನಿಯರಾಗಿರುವುದಿಲ್ಲ. ಟಾಲಿವುಡ್​​ನ ಕ್ಯೂಟ್​​ ಕಪಲ್​ ಸಂಸಾರದಲ್ಲಿ ವಿರಸ ಉಂಟಾಗಿದೆ. ಯಾವ ಜೋಡಿಯನ್ನ ನೋಡಿ ಇಡೀ ಟಾಲಿವುಡ್​​ನ ಕ್ಯೂಟ್​ ಕಪಲ್ ಅನ್ನಲಾಗ್ತಿತ್ತೊ..

ಯಾವ ಜೋಡಿ ಅಂದು ರಿಯಾಲಿಟಿ ಶೋಗಳಲ್ಲಿ ಕೂತು ಆದರ್ಶ ದಂಪತಿಯ ಕುರಿತು ಮಾತಾಡಿದ್ರೋ, ಇಂದು ಅದೇ ಜೋಡಿ ತಮ್ಮ ದಾಂಪತ್ಯ ಜೀವನಕ್ಕೆ ಗುಡ್​ ಬೈ ಎಂದಿದೆ. ನಾಗ ಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ದಾಂಪತ್ಯ ಜೀವನದ ಕುರಿತು ಹಲವು ಅಂತೆಕಂತೆಗಳು ಟಾಲಿವುಡ್​ ಅಂಗಳದಲ್ಲಿ ರೆಕ್ಕೆ ಪುಕ್ಕೆಗಳೊಂದಿಗೆ ತೇಲಿ ಹೋಗ್ತಿದ್ವು.. ಆದ್ರೆ, ಅದ್ಯಾವುದಕ್ಕೂ ತಲೆಕಡೆಸಿಕೊಳ್ಳದೇ, ಪ್ರತಿಕ್ರಿಯಿಸದೇ ನಮ್ಮಿಬ್ಬರ ಮಧ್ಯೆ ಎಲ್ಲವೂ ಚೆನ್ನಾಗಿದೆ ಎನ್ನುವಂತಿದ್ದವರು ಕೊನೆಗೂ ಆ ವದಂತಿಗಳೇ ಸತ್ಯ ಎಂದಿದ್ದಾರೆ. ಸಮಂತಾ ನಾಗಚೈತನ್ಯ ಡಿವೋರ್ಸ್​ ಘೋಷಿಸುವ ಮೂಲಕ ದಾಂಪತ್ಯ ಜೀವನದ ಇನ್ನಿಂಗ್ಸ್​ಗೆ ಅಂತ್ಯವಾಡಿದ್ದಾರೆ. ಸಮಂತಾ ಸ್ಟೇಟ್​ಮೆಂಟ್​​ನ್ನ ಚೈತನ್ಯ ತಮ್ಮ ಇನ್​​ಸ್ಟಾ ಗ್ರಾಂ ಅಕೌಂಟ್​​ನಲ್ಲಿ ಶೇರ್ ಮಾಡಿದ್ದಾರೆ. ಎಲ್ಲಾ ನನ್ನ ಆತ್ಮೀಯ ಹಿತೈಷಿಗಳೇ, ತುಂಬಾ ಯೋಚಿಸಿದ ನಂತರ ನಾನು ದೃಢ ನಿರ್ಧಾರಕ್ಕೆ ಬಂದಿದ್ದು ನಾನು ನನ್ನ ದಾಂಪತ್ಯ ಜೀವನದಿಂದ ಬೇರೆಯಾಗಲು ಬಯಸಿದ್ದೇನೆ.

ನಮ್ಮ ಮುಂದಿನ ದಾರಿಯನ್ನು ನೋಡಿಕೊಳ್ಳುವ ಕಾರಣದಿಂದ ಇನ್ಮುಂದೆ ನಾವು ಪತಿ ಪತ್ನಿಯರಾಗಿರುವುದಿಲ್ಲ. ಸುಮಾರು 10 ವರ್ಷಗಳ ಕಾಲ ಉತ್ತಮ ಸ್ನೇಹಿತರಾಗಿದ್ದು ನಮ್ಮ ಸೌಭಾಗ್ಯ ಎಂದು ಭಾವಿಸುತ್ತೇನೆ. ನಮ್ಮ ಸ್ನೇಹ ತುಂಬಾ ಗಟ್ಟಿಯಾಗಿದ್ದಕ್ಕೆ ಇದು ಸಾಕ್ಷಿಯಾಗಿದೆ. ನಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ನಮ್ಮ ಖಾಸಗಿ ಜೀವನ ನೆಮ್ಮದಿಯಾಗಿರುವಂತೆ ಸಹಕಾರ ನೀಡಬೇಕೆಂದು ಈ ಮೂಲಕ ನಾನು ಕೇಳಿಕೊಳ್ಳುತ್ತೇನೆ. ನಮಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು
ಅದ್ಯಾವಾಗ ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತೋ, ಅಭಿಮಾನಿಗಳಿಗೆ ಬರ ಸಿ’ಡಿ’ಲು ಬ’ಡಿ’ದಂತಾಗಿದೆ. ಇಬ್ಬರ ಅಭಿಮಾನಿಗಳಲ್ಲೂ ನಿರಾಸೆಯ ಕಾರ್ಮೋಡ ಕವಿದಿದೆ. ಅಲ್ಲದೇ ಅವರ ನೆಚ್ಚಿನ ದಂಪತಿ​​ ಮತ್ತೆ ಒಂದಾಗುವಂತೆ ಮನವಿ ಮಾಡ್ತಿದ್ದಾರೆ..


2010ರಲ್ಲಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಭೇಟಿಯಾಗಿದ್ರು. ಯೇ ಮಾಯಾ ಚೇಸಾವೇ ಸಿನಿಮಾ ಸೆಟ್​ನಲ್ಲಿ ಒಬ್ಬರನ್ನೊಬ್ಬರ ನೋಡಿದ ಕೂಡಲೇ ಪ್ರೇಮಾಂಕುರವಾಗಿತ್ತು. ಬರೋಬ್ಬರಿ ವರ್ಷಗಳ ಪ್ರೀತಿಯ ಪಯಣಕ್ಕೆ 2017ರಲ್ಲಿ ನಿಶ್ಚಿತಾರ್ಥವೆಂಬ ಮುದ್ರೆ ಒತ್ತಿಕೊಂಡಿದ್ರು. ಅಕ್ಟೋಬರ್ 7ನೇ 2017ರಲ್ಲಿ ದೇಶದ ಸಿನಿದಿಗ್ಗಜರ ಸಮ್ಮುಖದಲ್ಲಿ ಇಬ್ಬರ ವಿವಾಹ, ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯದಲ್ಲೂ ಅದ್ದೂರಿಯಾಗಿ ನಡೆದಿತ್ತು. ಜಸ್ಟ್​ ಐದೇ ದಿನ.. ಇನ್ನೂ ಕೇವಲ 5 ದಿನಗಳಾಗಿದ್ರೆ, ಇದೇ ಅಕ್ಟೋಬರ್ 7ನೇ ತಾರೀಕಿಗೆ ಇಬ್ಬರೂ ತಮ್ಮ 4ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಆದ್ರೆ, ವಿ’ಧಿ’ಯಾಟ ಬೇರೆಯಾಗಿತ್ತು. ಹಲವು ದಿನಗಳಿಂದ ಮೂಡಿದ್ದ ಬಿರುಕನ್ನು ಸರಿಪಡಿಸುವ ಪ್ರಯತ್ನ ಮಾಡಿದ್ರೋ ಇಲ್ವೋ ಗೊತ್ತಿಲ್ಲ.. ಬಟ್.. ಇಬ್ಬರ ನಡುವೆ ವೈವಾಹಿಕ ಜೀವನ ಗಟ್ಟಿಯಾಗಿ ನಿಂತುಕೊಳ್ಳಲಿಲ್ಲ.