Advertisements

ಟಿಕ್ ಟಾಕ್ ಪರ ನಿಂತ ಕಿರಿಕ್ ನಟಿ ! ಬ್ಯಾನ್ ಬಗ್ಗೆ ಹೇಳಿದ್ದೆ ಬೇರೆ ?

Cinema

ಮಹಾಮಾರಿ ಕರೋನಾ ಹುಟ್ಟುವಿಗೆ ಕಾರಣವಾದ ಚೀನಾ ದೇಶದ ವಸ್ತುಗಳನ್ನ ಬಹಿಷ್ಕಾರ ಮಾಡಿ ಸ್ವದೇಶಿ ವಸ್ತುಗಳನ್ನ ಉಪಯೋಗಿಸಬೇಕು ಎಂಬ ದೊಡ್ಡ ಕೂಗು ಈಗ ದೇಶದೆಲ್ಲಡೆ ಕೇಳಿಬರುತ್ತಿದೆ. ಸ್ವತಃ ಪ್ರಧಾನಿ ಮೋದಿಯವರು ಕೂಡ ಸ್ವದೇಶಿ ವಸ್ತುಗಳನ್ನ ಬಳಸುವಂತೆ ಕರೆ ನೀಡಿದ್ದಾರೆ. ಈಗ ಇದರ ಬೆನ್ನಲ್ಲೇ ಚೀನಾ ನಿರ್ಮಿತಟಿಕ್ ಟಾಕ್ ಆ್ಯಪ್ ನ್ನ ಬ್ಯಾನ್ ಮಾಡಬೇಕು ಎಂಬ ಕೂಗು ದೇಶದೆಲ್ಲಡೆ ಹೆಚ್ಚಾಗಿದೆ.

Advertisements

ಟಿಕ್ ಟಾಕ್ ಬ್ಯಾನ್ ಮಾಡಬೇಕೆಂಬ ಕೂಗು ದೇಶದಲ್ಲಿ ಕೇಳಿಬರುತ್ತಿರುವುದು ಇದೇನು ಮೊದಲಲ್ಲ. ಕರೋನಾ ಬಂದ ಬಳಿಕ ಇದರ ಕೂಗು ಹೆಚ್ಚಾಗಿದ್ದು, ಬ್ಯಾನ್ ಮಾಡಿ ಎಂದು ಕೇಂದ್ರ ಸರ್ಕಾರಕ್ಕೂ ಕೂಡ ಮನವಿ ಮಾಡಿದ್ದಾರೆ. ಇನ್ನು ಇದರ ಬಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಹೌದು, ಇತ್ತೀಚೆಗಷ್ಟೇ ಸ್ಯಾಂಡಲ್ವುದು ಖ್ಯಾತ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್, ಎಪಿ.ಅರ್ಜುನ್, ಪವನ್ ಒಡೆಯರ್ ಸೇರಿದಂತೆ ಹಲವು ನಿರ್ದೇಶಕರು ಟಿಕ್ ಟಾಕ್ ಬ್ಯಾನ್ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ.

ಇನ್ನು ಇದರ ನಡುವೆಯೇ ಭಾರತದಲ್ಲಿ 4.5ರೇಟಿಂಗ್ಸ್ ಇದ್ದ ಟಿಕ್ ಟಾಕ್ ಆ್ಯಪ್ ಈಗ 1.6 ರೇಟಿಂಗ್ಸ್ ಗೆ ಇಳಿದಿದೆ. ಆದರೆ ಕಿರಿಕ್ ಪಾರ್ಟಿಯ ನಟಿ ಸಂಯುಕ್ತಾ ಹೆಗಡೆ ಬೇರೆಯದನ್ನೇ ಹೇಳಿದ್ದಾರೆ. ಟಿಕ್ ಟಾಕ್ ಬ್ಯಾನ್ ಮಾಡಬೇಡಿ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ನಟಿ, ಯಾವುದೊ ಒಂದು ಫ್ಲಾಟ್ ಫಾರ್ಮ್ ನ್ನ ನಿಷೇಧ ಮಾಡುವುದರಿಂದ ಅದರಲ್ಲಿರುವ ಜನರ ಮನಸ್ಥಿತಿ ಬದಲಾಗದು. ಆದರೆ ಜನರು ತಮ್ಮ ವಿಷಯಗಳನ್ನ ಅಪ್ಲೋಡ್ ಮಾಡಲು ಬೇರೆಯದೇ ಆ್ಯಪ್ ಹುಡುಕುತ್ತಾರೆ ಎಂದು ಸಂಯುಕ್ತ ಹೆಗಡೆ ಬರೆದುಕೊಂಡಿದ್ದು, ಟಿಕ್ ಟಾಕ್ ಆ್ಯಪ್ ಗೆ ಏನೇ ಆದರೂ ವೈಯುಕ್ತಿವಾಗಿ ನನಗೇನು ಆಗಬೇಕಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.