Advertisements

ನನ್ನನ್ನ ಟಚ್ ಮಾಡಿದರೆ ಸರ್ಕಾರವೇ ಶೇಕ್ ಆಗಿಬಿಡುತ್ತೆ, ಸಂಜನಾ ಶಾಕಿಂಗ್ ಹೇಳಿಕೆ! ಇನ್ನೂ ಏನು ಹೇಳಿದ್ದಾರೆ ನೋಡಿ..

News

ನಮಸ್ತೆ ಸ್ನೇಹಿತರೆ ಡ್ರ’ಗ್ ಪ್ರಕರ’ಣದಲ್ಲಿ ರಾಗಿಣಿ ಅರೆ’ಸ್ಟ್ ಅದ ಬೆನ್ನಲೇ ಈಗ ಸಂಜನಾ ಅವರನ್ನು ಪೊಲೀಸರು ಅರೆ’ಸ್ಟ್ ಮಾಡಿದ್ದಾರೆ. ಹೌದು ಸಂಜನಾ ಆಪ್ತ ರಾಹುಲ್ ನೀಡಿರುವ ಹೇಳಿಕೆಯ ಮೇಲೆ ಸಂಜನಾ ಅವರನ್ನುಬಂಧಿಸಲಾಗಿದೆ. ಆದರೆ ರಾಗಿಣಿಗೆ ವಿಚಾರಣೆ ನೋಟಿಸ್ ನೀಡಿ ತದನಂತರ ರಾಗಿಣಿ ಮನೆಯ ಮೇಲೆ ರೇ’ಡ್ ಮಾಡಿದ್ದರು ಆದರೆ ಸಂಜನಾ ಅವರಿಗೆ ಯಾವುದೇ ನೋಟಿಸ್ ನೀಡದೆ ಪೊಲೀಸರು ಪ್ರತ್ಯಕ್ಷವಾಗಿದ್ದಾರೆ. ಇನ್ನೂ ಪ್ರಶಾಂತ್ ಸಂಭರ್ಗಿ ಅವರು ಕೂಡ ಸಂಜನಾ ಅವರು ಡ್ರ’ಗ್ ಪ್ರಕರ’ಣಗಲ್ಲಿ ಇದ್ದಾರೆ ಎಂದು ತಿಳಿಸಿದ್ದರು ಆದರೆ ಸಂಜನಾ ನಾನು ಯಾವುದೇ ತಪ್ಪು ಮಾಡಿಲ್ಲ ಇದಕ್ಕೂ ನನಗೂ ಸಂಬಂಧ ವಿಲ್ಲ ಎಂದು ಹೇಳಿಕೊಂಡು ಮಾಧ್ಯಮದವರ ಮೇಲೆ ಹಾಗೂ ಪ್ರಶಾಂತ್ ಸಂಭರ್ಗಿ ಮೇಲೆ ರೇಗಾಡಿದ್ದರು.

Advertisements

ಇನ್ನೂ ನೆನ್ನೆ ಸಿಸಿಬಿ ಅಧಿಕಾರಿಗಳು ಕೋರ್ಟಿನಲ್ಲಿ ಸರ್ಚ್ ವಾರೆಂ’ಟ್ ಪಡೆದು ಬೆಳಂ ಬೆಳಗ್ಗೆ ಏಕಾಏಕಿ ಸಂಜನಾ ಮನೆಯ ಮೇಲೆ ರೆಡ್ ಮಾಡಿದ್ದಾರೆ. ಹೌದು ಇಂದಿರಾನಗರದಲ್ಲಿ ಇರುವ ನಟಿ ಸಂಜನಾ ಮನೆಯ ಮೇಲೆ 10 ಕ್ಕೂ ಹೆಚ್ಚು ಪೋಲೀಸರು ದಾ’ಳಿ ನಡೆಸಿ ಶೋಧ ಕಾರ್ಯವನ್ನು ನಡೆಸಿದ್ದಾರೆ. ಇನ್ನು ಈ ಶೋಧ ಕಾರ್ಯಾಚರಣೆ ಸತತವಾಗಿ 4 ಗಂಟೆಗಳ ನಡೆಸಿದ್ದು ಸಂಜನಾ ಅವರ ಲ್ಯಾಪ್ ಟಾಪ್, ಪೆನ್ಡ್ರೈವ್, ಪರ್ಸ್ ಸೇರಿದಂತೆ ಮೊಬೈಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೂ ಕೊನೆಗೆ ಸಿಸಿಬಿ ಅಧಿಕಾರಿಗಳು ಸಂಜನಾ ಅವರಿಗೆ ಸಿಸಿಬಿ ಕೇಂದ್ರಕ್ಕೆ ಹೋಗಬೇಕೆಂದು ಹೇಳಿದ್ದರು ಆದರೆ ಸಂಜನಾ ನಾನ್ಯಾಕೆ ಬರಲಿ, ನೀವು ನನಗೆ ನೋಟಿಸ್ ನೀಡಿಲ್ಲ. ಏಕಾ ಏಕಿ ದಾಳಿ ಮಾಡಿದ್ದೀರಾ, ನಾನು ಆರೋ’ಪಿಯಲ್ಲ ನಾನು ಬರೋದಿಲ್ಲ ಎಂದು ರಂಪಾಟವನ್ನು ಮಾಡಿದ್ದರು. ಆದರೆ ಪೊಲೀಸರು ನೀವು ಹೇಳಿದ ಹಾಗೆ ನಾವು ಕೇಳುವುದಕ್ಕೆ ಹಾಗುವುದಿಲ್ಲ ಎಂದು ಸಂಜನಾ ಮೇಲೆ ಗರಂ ಆಗಿದ್ದರು ನಂತರ ಬಾಯಿ ಮುಚ್ಚಿಕೊಂಡು ಸಿಸಿಬಿ ಕೇಂದ್ರಕ್ಕೆ ಸಂಜನಾ ಅವರು ಬಂದಿದ್ದಾರೆ.

ಇನ್ನೂ ಸಂಜನಾ ಸಿಸಿಬಿ ಕಚೇರಿಯಲ್ಲಿ ಬಂದ ನಂತರವೂ ತಮ್ಮ ರಂಪಾಟವನ್ನು ಮುಂದುವರೆಸಿದ್ದಾರೆ. ಹೌದು ಮೊಬೈಲ್ ಗಾಗಿ ರಂಪಾಟವನ್ನು ಮಾಡಿಕೊಂಡಿದ್ದಾರೆ. ನಾನು ನಿಮ್ಮ ಮುಂದೆಯೇ ಇದ್ದೀನಲ್ಲ ನನ್ನ ಮೊಬೈಲ್ ನನಗೆ ಕೊಡಿ, ನಾನೇನು ಸಾಕ್ಷಿ ನಾಶ ಮಾಡ್ತೀನಾ ನನ್ನ ಮೊಬೈಲ್ ಅನ್ನು ನನಗೆ ಕೊಟ್ಟಿ ಬಿಡಿ, ಮೊಬೈಲ್ ಬಿಟ್ಟು ಅರ್ಧ ಗಂಟೆ ಇರೋದಿಕ್ಕಾಗಲ್ಲ ನಾನೇನು ದೊಡ್ಡ ಕಳ್ಳನಾ ಎಂದು ಕಿರಿಕ್ ಮಾಡಿಕೊಂಡಿದ್ದಾರೆ ಆದರೆ ಪೊಲೀಸರು ಸಂಜನಾ ಮಾತಿಗೆ ಸೊಪ್ಪಾಕ್ಕಿಲ್ಲ. ಆದರೆ ಮತ್ತೊಂದು ಹೇಳಿಕೆ ನೀಡಿರುವ ಸಂಜನಾ ಮಾತಿಗೆ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಹೌದು ಸಂಜನಾ ಅವರು ಪೊಲೀಸರಿಗೆ ಧಮಕಿ ಅಕುವಂತಹ ಮಾತುಗಳನ್ನು ಮಾತಾಡಿದ್ದಾರೆ. ನನ್ನನ್ನ ಟಚ್ ಮಾಡಿದರೆ ಸರ್ಕಾರವೇ ಶೇಕ್ ಆಗಿಬಿಡುತ್ತೆ ಯಾರದ್ದೋ ಮಾತು ಕೇಳಿ ನನ್ನ ತಂಟೆಗೆ ಬರಬೇಡಿ ನನ್ನ ಬಗ್ಗೆ ನಿಮಗಿನ್ನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಸಂಜನಾ ಅವರು ಇಂತಹ ಮಾತನ್ನು ಹೇಗೆ ಸಾಧ್ಯ ಇದರ ಹಿಂದೆ ಇನ್ನೂ ಯಾರಿರಬಹುದು ಎಂದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ.