Advertisements

ಸಂಚಾರಿ ವಿಜಯ್ ಬದುಕು ಹೇಗಿತ್ತು, ವಿಜಯ್ ದು ಎಂತಹ ವ್ಯಕ್ತಿತ್ವ ಗೊತ್ತಾ?ಸಂಚಾರಿ ವಿಜಯ್ ಬದುಕು ನೀವು ಅಂದುಕೊಂಡ ರೀತಿ ಇರಲಿಲ್ಲ..

Cinema

ಸಂಚಾರ ಮುಗಿಸಿದ ಸಂಚಾರಿ ವಿಜಯ್‌.. ಇವತ್ತು ಸಾಗರದಷ್ಟು, ಪ್ರೀತಿ, ಅಪ್ಪಟ ಕನ್ನಡಿಗನ ಅದ್ಭುತ ಪ್ರತಿಭೆಗಳಿಗೆ ಸಾಕಷ್ಟು ಪ್ರಶಂಸೆಗಳು ನಾಡಿನಲ್ಲಿ ಮಾತ್ರವಲ್ಲದೇ ದೂರದ ಅಮೇರಿಕಾದಿಂದಲೂ ಕೇಳಿ ಬಂತು. ಹಾಗಿದ್ರೆ ಸಂಚಾರಿ ವಿಜಯ್ ಅವರ ಸಿನಿಪಯಣ ಹೇಗಿತ್ತು.. ಅಷ್ಟೊಂದು ಸುಲಭದ ಸುಗಮ ದಾರಿಯಾಗಿತ್ತಾ.. ಖಂಡಿತಯಿಲ್ಲ. ಬಣ್ಣವೇ ನನ್ನ ಬದುಕು ಅಂತ ಸಿನಿರಂಗವನ್ನು ಆಯ್ಕೆ ಮಾಡಿಕೊಂಡ್ರು, ಸಿನಿರಂಗವೇನು ಸಂಚಾರಿ ವಿಜಯ್ ಅವರನ್ನು ಬಾಚಿ ತಬ್ಬಿಕೊಳ್ಳಲಿಲ್ಲ. ಹೆತ್ತವರ ಧಾರುಣ ಸಾ’ವನ್ನು ಬಾಲ್ಯದಲ್ಲಿಯೇ ಕಂಡು ಕುಗ್ಗಿ ಹೋದವರು ಸಂಚಾರಿ ವಿಜಯ್. ಇವರು ಮೂಲತಃ ಚಿಕ್ಕಮಗಳೂರಿನವರು. ಇವರ ತಂದೆ ಬಸವರಾಜಯ್ಯ. ತಾಯಿ ಗೌರಮ್ಮ. ಇವರಿಗೊಬ್ಬ ಅಣ್ಣ ಸಹ ಇದ್ದ.

[widget id=”custom_html-3″]

Advertisements

ಈ ಕುಟುಂಬದಲ್ಲಿ ಅಪಾರ ಹಣವಿಲ್ಲದಿದ್ದರು, ನೆಮ್ಮದಿಗೇನು ಬಡತನವಿರಲಿಲ್ಲ. ವಿಜಯ್ ತಂದೆ ಓರ್ವ ಚಿತ್ರ ಕಲಾವಿದನಾಗಿದ್ದು, ತಾಯಿ ನರ್ಸ್ ಆಗಿದ್ದರು. ಗೌರಮ್ಮ ಅವರಿಗೆ ಜಾಂ’ಡೀ’ಸ್ ಬಂದಿದ್ದು ಅದನ್ನು ನಿರ್ಲಕ್ಷ ಮಾಡಿದ ಕಾರಣ ಇಡೀ ದೇಹಕ್ಕೆ ಅದು ವ್ಯಾಪಕವಾಗಿ ಹರಡಿ ನೋಡ ನೋಡ್ತಿದ್ದಂತೆ ವಿಜಯ್ ಕಣ್ಣೆದುರೇ ಅ’ಸುನೀಗಿದರು. ವಿಜಯ್ ಅವರ ತಂದೆಯು ಸಹ ಪತ್ನಿ ವಿಯೋಗದಿಂದ ಹೆಂಡತಿ ಸ’ತ್ತ ಕೆಲತಿಂಗಳುಗಳಲ್ಲಿಯೇ ಉಸಿರು ಚೆಲ್ಲಿದರು. ಇದಾದ ಬಳಿಕ ಮಾರ್ಗದರ್ಶಕರೇ ಇಲ್ಲದೇ ವಿಜಯ್ ಹಾಗೂ ಅವರ ಅಣ್ಣ ಕಂಗೆಟ್ಟರು. ಧೃತಿಗೆಡದೇ ನಾವಿಬ್ಬರೇ ನಮಗೆ ಆಧಾರ ಅಂತ ಭಾವಿಸಿ ಇಬ್ಬರು ಒಬ್ಬರ ಕಷ್ಟಕ್ಕೆ ಒಬ್ಬರು ಮಿಡಿಯುವುದನ್ನು ಮಾಡುತ್ತಿದ್ದರು.

[widget id=”custom_html-3″]

ತನ್ನಣ್ಣನ ಓದಿಗಾಗಿ ವಿಜಯ್ ರಾಜಾಜಿನಗರದ ಹೋಟೆಲ್ ಒಂದರಲ್ಲಿ ಲೋಟ ತೊಳೆದದ್ದು ಉಂಟು, ಹಾಗೇ ವಿಜಯ್ ಅವರ ಓದಿಗಾಗಿ ಅವರ ಅಣ್ಣ ಹಗಲು ರಾತ್ರಿ ನಿದ್ದೆಬಿಟ್ಟು ದುಡಿದದ್ದು ಉಂಟು.. ಹೀಗಿರುವಾಗ ವಿಜಯ್ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸ್ತಾರೆ. ಅಷ್ಟೊತ್ತಿಗಾಗಲೇ ಅವರಿಗೆ ಹಲವು ನಾಟಕ ತಂಡಗಳ ಪರಿಚಯವಾಗಿತ್ತು. ನನ್ನ ಬದುಕು ಮಷೀನ್‌ಗಳ ಮಧ್ಯೆ ಇಲ್ಲ, ಬಣ್ಣ ಹಚ್ಚಿ ಚಿತ್ರ ಪ್ರೇಮಿಗಳ ಮನರಂಜಿಸುವಲ್ಲಿಯಿದೆ ಅಂತ ಮನಗೊಂಡು, ಸಂಚಾರಿ ನಾಟಕ ತಂಡಕ್ಕೆ ಸೇರುತ್ತಾರೆ. ಇಲ್ಲಿಂದ ಆರಂಭ ಆಗುತ್ತೆ ಅಭಿನಯ ಲೋಕದಲ್ಲಿ ಇವರ ಚಿರಂತನ ಪಯಣ, ಮುಂದೆ ರಂಗಭೂಮಿಯಲ್ಲಿ, ಕಿರುತೆರೆಯಲ್ಲಿ, ನಿರ್ದೆಶನದಲ್ಲಿ, ಹಿರಿತೆರೆಯಲ್ಲಿ ಎಲ್ಲ ರಂಗದಲ್ಲೂ ಸೈ ಎನಿಸಿಕೊಂಡ ಅದ್ಭುತ ಕಲಾವಿದನಾಗಿ ಹೊರ ಹೊಮ್ಮುತ್ತಾರೆ..

[widget id=”custom_html-3″]

ಅಷ್ಟೊಂದು ಸಲುಲಭವಾಗಿಯೂ ಅವಕಾಶಗಳು ಹುಡುಕಿಕೊಂಡು ಬರುವುದಿಲ್ಲ. ಸುಮಾರು 70ರಿಂದ80 ಅಡಿಷನ್ಸ್ಗಳಿಗೆ ಹೋದ್ರು ಸಹ ವಿಜಯ್ ಮಾತ್ರ ಆಯ್ಕೆ ಆಗೋದೇಯಿಲ್ಲ, ಇದರಿಂದ ಹತಾಶರಾದ ವಿಜಯ್ ತಾನೂ ಸಿನಿರಂಗಕ್ಕೆ ತಕ್ಕುದಾದವನಲ್ಲ ಅಂತ ಹಲವು ಭಾರೀ ಯೋಚಿಸಿ ಕುಗ್ಗಿದ್ದು ಉಂಟಂತೆ. ಅದಾದ ಬಳಿಕ ಇವರು ಕೆಲವೊಂದು ಸಿನಿಮಾದಲ್ಲಿ ನಟಿಸ್ತಾರೆ. ಅವರ ನಟನೆಯ ದಾಸವಾಳ ಸಿನಿಮಾ ವಿಜಯ್‌ಗೆ ಕೊಂಚ ಹೆಸರು ತಂದುಕೊಡತ್ತೆ, ಬಳಿಕ ಒಗ್ಗರಣೆ ಸಿನಿಮಾದ ಮನೋಜ್ಞ ಅಭಿನಯಕ್ಕೆ ಜನರ ಮನಸಲ್ಲಿ ವಿಜಯ್ ಹೆಸರು ರೆಕಾರ್ಡ್ ಆಗುತ್ತೆ. ಇನ್ನು ವಿಜಯ್ ಅವರ ಪರಿಸ್ಥಿತಿ ಹೇಗಿತ್ತೆಂದ್ರೆ ಪಾತ್ರಗಳ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವಂತಿರಲಿಲ್ಲ. ಬಂದ ಸಿನಿಮಾಗಳಲ್ಲಿ ನಟಿಸಿ ಅಭಿನಯವನ್ನು ತೋರಿಸುವಂತಿತ್ತು.

ಹೀಗಾಗಿ ಸಿಕ್ಕ ಎಲ್ಲ ಅವಕಾಶಗಳನ್ನು ಸಂಚಾರಿ ವಿಜಯ್ ಸದುಪಯೋಗ ಪಡಿಸಿಕೊಳ್ತಾರೆ. ಮುಂದೆ ಲಿಂಗದೇವಂ ಅವರು ನಾನು ಅವನಲ್ಲ ಅವಳು ಸಿನಿಮಾದ ಕಥೆ ಹೊತ್ತು ತಂದಾಗ ತಾನೊಬ್ಬ ತೃತೀಯ ಲಿಂಗಿ ಪಾತ್ರ ಮಾಡಬೇಕು ಅಂತ ತಿಳಿದರು ಅದಕ್ಕೆ ಎಷಾಗುತ್ತೋ ಅಷ್ಟು ಅಭಿನಯ ಸವಿಯನ್ನು ಕಥೆಗೆ ಸೇರಿಸಿದ್ದಾರೆ. ಎಲ್ಲರೊಳಗೊಂದಾಗಿ ಎಲ್ಲರಂತಿರದ ಮುಗ್ಧ ಮನಸ್ಸುಗಳ ಭಾವನೆಗಳ ತೊಯ್ದಾಟವನ್ನು ವಿಜಯ್ ತನ್ನ ಅದ್ಭುತ ಅಭಿನಯದ ಮೂಲಕ ವೀಕ್ಷಕರಿಗೆ ತೋರಿಸಿದ್ದಾರೆ. ಮುಂದೆ ಈ ಸಿನಿಮಾ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿಕೊಟ್ಟಿತು. ಇವರು ರಾಷ್ಟ್ರ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡರು. ವಿಪರ್ಯಾಸ ಅಂದರೆ ಇದಾದ ಬಳಿಕವೂ ವಿಜಯ್‌ಗೆ ಅಷ್ಟೊಂದೇನು ಹೇಳಿಕೊಳ್ಳುವಷ್ಟು ಅವಕಾಶ ಹುಡುಕಿಕೊಂಡು ಬರಲಿಲ್ಲ..

ಆದರೆ ಕನ್ನಡದ ಮೇರು ಕಲಾವಿದ ಎಂಬ ಹೆಗ್ಗಳಿಕೆಗಂತು ಪಾತ್ರರಾದರು. ಮುಂದೆ ಕೃಷ್ಣ ತುಳಸಿ, ವರ್ತಮಾನ, ಜಂಟಲ್‌ಮ್ಯಾನ್ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್ ಕಾಣಿಸಿಕೊಂಡ್ರು. ಆಕ್ಟ್ 978 ವಿಜಯ್ ಅಭಿನಯಿಸಿದ ಕೊನೆಯ ಸಿನಿಮಾ,. ಕೊ’ರೊನಾದಿಂದ ಸಂಕಷ್ಟದಲ್ಲಿರುವವರಿಗೆ ಊಟ ಕೊಟ್ಟು ವಾಪಸ್ ಆಗುವಾಗ ಸಂಭವಿಸಿದ ಭೀ’ಕರ ದು’ರಂ’ತದಿಂದ ವಿಜಯ್ ಬ್ರೈನ್ ಡೆ’ಡ್ ಆಯಿತು. ಬಳಿಕ ಅವರ ಅಂಗಾಂಗಗಳನ್ನು ಕ’ಸಿಮಾಡಿ ಸಾ’ವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಅವರ ಹುಟ್ಟೂರಾದ ಪಂಚಮನಹಳ್ಳಿಯಲ್ಲಿ ಸಂಚಾರಿ ವಿಜಯ್ ಅವರ ಅಂ’ತ್ಯಸಂಸ್ಕಾರವನ್ನು ಮಾಡಲಾಯಿತು. ಅತೀ ಚಿಕ್ಕ ವಯಸ್ಸಿನಲ್ಲಿಯೇ ಉದಯೋನ್ಮುಖ ಕಲಾವಿದನೋರ್ವ ಬದುಕಿನ ಪಯಣ ಮುಗಿಸಿದ್ದು ನಿಜಕ್ಕು ದುರಂತವೇ ಸರಿ. ಎಲ್ಲೇ ಇರಲಿ ಹೇಗೆ ಇರಲಿ ಅವರ ಆತ್ಮಕ್ಕೆ ಶಾಂತಿಸಿಗಲಿ..