ನಮಸ್ತೇ ಸ್ನೇಹಿತರೆ, ನಟ ಚಂದನ್ ಹಾಗೂ ಕವಿತಾ ಗೌಡ ಪ್ರೀತಿ ಮಾಡುತ್ತಿದ್ದಾರಾ ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರಾ, ಇಬ್ಬರು ಮದುವೆ ಆಗ್ತಾರಾ ಎಂಬ ಪ್ರಶ್ನೆಗಳನ್ನ ಅಭಿಮಾನಿಗಳು ಕೇಳುತ್ತಲೇ ಇದ್ದರು.. ಈಗ ಇವರಿಬ್ಬರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಈಗ ಈ ವಿಚಾರ ಅಧಿಕೃತವಾಗಿದೆ.. ಕನ್ನಡ ಮಾತ್ರವಲ್ಲದೇ ಪರಬಾಷೆಯಲ್ಲೂ ಪೇಮಸ್ ಆಗಿರುವ ನಟ ಚಂದನ್ ಕುಮಾರ್ ಇತ್ತೀಚೆಗೆ ಸಂದರ್ಶನ ಒಂದರಲ್ಲಿ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ಹುಡುಗಿ ಯಾರು ಎಂಬುದನ್ನ ಮಾತ್ರ ಖಚಿತಪಡಿಸಿರಲಿಲ್ಲ..

ಮದುವೆ ಹುಡುಗಿ ಕವಿತಾ ಅವರೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಂದನ್ ಎಸ್ ಎಂದರೇ ಅದೇ ಸುದ್ದಿ, ನೋ ಎಂದರೆ ಮತ್ತೆ ಇನ್ಯಾರು ಎಂಬ ಸುದ್ದಿ ಉದ್ಭವವಾಗುತ್ತದೆ. ಈ ಎರಡು ಬೇಡ ಎನ್ನುವ ಮೂಲಕ ಕೌತುಕ ಹೆಚ್ಚಿಸಿದ್ದರು.. ಆದರೆ ಕೊನೆಗೂ ಮದುವೆ ಆಗುತ್ತಿರುವ ಸುದ್ದಿಯನ್ನು ಚಂದನ್ ಅವರು ಅಧಿಕೃತ ಮಾಡಿದ್ದಾರೆ. ಇದೇ ಎಪ್ರಿಲ್ 1 ರಂದು ಈ ಜೋಡಿ ಮದುವೆ ಆಗುತ್ತಿದ್ದಾರೆ.. ಕವಿತಾ ಹಾಗೂ ಚಂದನ್ ಪ್ರೀತಿಸುತ್ತಿದ್ದಾರೆ..

ಎನ್ನುವ ವಿಚಾರ ಸ್ಯಾಂಡಲ್ವುಡ್ ನಲ್ಲಿ ಈ ಮೊದಲಿನಿಂದಲೂ ಅರಿದಾಡುತ್ತಿತ್ತು. ಆದರೆ ಇದನ್ನ ಯಾರೋಬ್ಬರು ಅಧಿಕೃತ ಮಾಡಿರಲಿಲ್ಲ.. ಆದರೆ ಈಗ ಈ ವಿಚಾರವನ್ನು ಚಂದನ್ ಅವರೇ ತಿಳಿಸಿದ್ದಾರೆ. ಇನ್ನೂ ಇವರ ಪೊಟೊಗಳನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಸಾಲು ಸಾಲು ಕಾಮೆಂಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ.. ಇನ್ನೂ ಕೆಲವರು ಕೊನೆಗೂ ಪ್ರೀತಿಯ ವಿಚಾರ ಅಧಿಕೃತ ಮಾಡಿದ್ರಲ್ಲಾ ಎಂದು ಹೇಳುತ್ತಿದ್ದಾರೆ.