Advertisements

ಹಬ್ದದ ದಿನವೇ ದತ್ತು ಪಡೆದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿಮಾನಿಗಳು ಪುಲ್ ಪೀದಾ.

Cinema Inspire News

ನಮಸ್ತೆ ಸ್ನೇಹಿತರೆ. ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಈ ಗೌರಿಯ ಹಬ್ದದ ದಿನದಂದು ಆನೆಯನ್ನು ದತ್ತು ಪಡೆದು ಪ್ರಾಣಿ ಪ್ರೀತಿ ತೋರಿದ್ದಾರೆ. ಶಿವಾರಾಜ್ ಕುಮಾರ್ ಅವರು ಭಜರಂಗಿ ಹಿಟ್ ಕಂಡ ನಂತರ ಈಗ ಭಜರಂಗಿ 2 ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಡೈರೆಕ್ಟರ್ ಹರ್ಷ ಅವರ ಸಾರಥ್ಯದಲ್ಲಿ  ಜಯಣ್ಣ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ   ಸಿನಿಮಾ ಶೂಟಿಂಗ್ ಮಾಡಲು ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಸಿನಿಮಾದ ಟೀಸರ್ ಕೂಡ ರಿಲಿಸ್ ಆಗಿದ್ದು ಟೀಸರ್ ನಲ್ಲಿ ಶಿವಾರಾಜ್ ಕುಮಾರ್ ಅವರ ಅಭಿನಯ ಚೆನ್ನಾಗಿ ಮೂಡಿಬಂದಿದ್ದೂ ಇನ್ನೂ ಇತರ ನಟರ ಆಭಿನಯ ಕೂಡ ಅದ್ಬುತವಾಗಿದೆ. ಭಜರಂಗಿ 2 ಟೀಸರ್ ನೋಡಿದ ಅಭಿಮಾನಿಗಳು ಶಿವಾರಾಜ್ ಕುಮಾರ್ ಅವರಿಗೆ ತುಂಬಾ ಮೆಚ್ಚುಗೆಯನ್ನು  ವ್ಯಕ್ತಪಡಿಸಿದ್ದಾರೆ. ಭಜರಂಗಿ 2 ಕೂಡ ಭಜರಂಗಿ ಪಾರ್ಟ್ ಒಂದರಂತೆ ಸೆಂಚುರಿ ಹೊಡೆಯಲು ಸಜ್ಜಾಗುತ್ತಿದೆ‌.

Advertisements

ಇನ್ನೂ ಈಗ ಶಿವರಾಜ್ ಕುಮಾರ್ ಅವರು ಪ್ರಾಣಿಯನ್ನು ದತ್ತು ತೆಗೆದುಕೊಂಡು ಪ್ರಾಣಿಪ್ರೀತಿಯನ್ನು ತೋರಿದ್ದಾರೆ. ಹೌದು ಸ್ನೇಹಿತರೆ ಅರಮನೆ ನಗರಿಯ ಆನೆಯೊಂದನ್ನು ಹ್ಯಾಟ್ರಿಕ್ ಹೀರೋ ದತ್ತು ಪಡೆದಿದ್ದಾರೆ. ಶಿವಾರಾಜ್ ಕುಮಾರ್ ಅವರು ಮೈಸೂರಿನ ಮೃಗಾಲಯದಲ್ಲಿ ಪಾರ್ವತಿ ಎಂಬ ಹೆಸರಿನ ಆನೆಯನ್ನು ದತ್ತು ಪಡೆದಿದ್ದು ಒಂದು ವರ್ಷದ ಅವಧಿಗೆ ಅಂದರೆ ಅಗಸ್ಟ್ 10 2020 ರಿಂದ 2022 ಆಗಸ್ಟ್ 10 ರವರೆಗೆ 75 ಸಾವಿರವನ್ನು ನೀಡಿ  ಆನೆಯನ್ನು ದತ್ತು ಪಡೆದಿದ್ದಾರೆ.

ಆಗೆ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೂ ಸಹ ಪ್ರಾಣಿಗಳು ಎಂದರೆ ಅವರಿಗೆ ತುಂಬಾ ಪ್ರೀತಿ ಇವರು ಈ  ಹಿಂದೆ ಸಾಕಷ್ಟು ಪ್ರಾಣಿ ಪಕ್ಷಿಗಳನ್ನು ಮೃಗಾಲಯದಲ್ಲಿ ದತ್ತು ಪಡೆದು ನೋಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಇನ್ನೂ ಕೆಲವು ನಟರಾದ ದೇವರಾಜ್, ಚಿಕ್ಕಣ್ಣ, ಸೃಜನ್ ಲೋಕೇಶ್ ಸೇರಿದಂತೆ ರಾಜಕಾರಣಿಗಳು, ಕ್ರಿಕೇಟ್ ಆಡುವವರು ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಂಡಿದ್ದಾರೆ.