Advertisements

ಅನ್ನದಾತ ರೈತರ ಪರವಾದ ಜಾಹಿರಾತು ನೀಡಿರುವ ನಮ್ಮ ಸ್ಟಾರ್ ನಟರು ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ ?

Inspire

ಅಣ್ಣಾವ್ರ ಕಾಲದಿಂದ ಹಿಡಿದು ಇಂದಿನ ಸ್ಟಾರ್ ನಟರವರೆಗೂ ನಮ್ಮ ಕರ್ನಾಟಕದ ಹೆಮ್ಮೆ ನಂದಿನಿ ಹಾಲಿಗೆ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ ಹಲವು ನಟರು. ಆಗಿನ ಕಾಲಕ್ಕೆ ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಅವರು ನಂದಿನಿ ಹಾಲಿಗೆ ಜಾಹಿರಾತು ನೀಡುತ್ತಿದ್ದರು. ನಂದಿನಿ ಹಾಲಿನ ಮೊದಲ ರಾಯಭಾರಿ ಎಂಬ ಹೆಗ್ಗಳಿಕೆ ನಟಸಾರ್ವಭೌಮ ಅಣ್ಣಾವ್ರದ್ದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇದೇ ರಾಜ್ ಕುಮಾರ್ ಅವರ ಮೊದಲ ಹಾಗೂ ಕೊನೆಯ ಜಾಹಿರಾತು ಎಂಬುದು. ಅದು ಒಂದು ರೂಪಾಯಿ ಕೂಡ ಸಂಭಾವನೆ ತೆಗೆದುಕೊಳ್ಳದೆ. ಕಾರಣ ನಂದಿನಿ ಹಾಲು ರೈತರದ್ದು, ಆದ್ದರಿಂದ ನಾನು ಸಂಭಾವನೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು. ಈಗ ಅದೇ ಹಾದಿಯಲ್ಲೇ ಸಾಗುತ್ತಿದ್ದಾರೆ ನಮ್ಮ ಚಂದನವನದ ಸ್ಟಾರ್ ನಟರು..ಹಾಗಾದ್ರೆ ಯಾವೆಲ್ಲಾ ನಟರು ರೈತರ ಸಂಸ್ಥೆಯಾಗಿರುವ ಕೆಎಂಎಫ್ ನಂದಿನಿ ಹಾಲಿನ ಉತ್ಪನ್ನಗಳ ಜಾಹಿರಾತು ನೀಡುವ ಸಲುವಾಗಿ ಸಂಭಾವನೆ ಪಡೆದಿದ್ದಾರೆ, ಯಾರು ಪಡೆದಿಲ್ಲ ಎಂದು ನೋಡೋಣ ಬನ್ನಿ..

Advertisements

ತಂದೆಯಂತೆ ಮಗ ಎನ್ನುವಂತೆ ರಾಜ್ ಕುಮಾರ್ ಅವರ ಪುತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ನಂದೀ ಹಾಲಿನ ರಾಯಭಾರಿಯಾಗಿದ್ದಾರೆ. ರಾಜಣ್ಣ ಹಾಕಿಕೊಟ್ಟ ಮಾರ್ಗದಲ್ಲೇ ಸಾಗುತ್ತಿರುವ ಪುನೀತ್ ನಂದಿನಿ ಹಾಲಿನ ಜಾಹಿರಾತು ಮಾಡುವ ಸಲುವಾಗಿ ಹಣ ಪಡೆದಿಲ್ಲ. ಇಷ್ಟೇ ಮಾತ್ರವಲ್ಲದೆ ಪುನೀತ್ ಚುನಾವಣೆಯಲ್ಲಿ ಮತ ಹಾಕುವ ಅಭಿಯಾನ ಸೇರಿದಂತೆ ಕರ್ನಾಟಕ ಸರ್ಕಾರದ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನದಲ್ಲೂ ಕೆಲಸ ಮಾಡಿದ್ದು ಇದಕ್ಕಾಗಿ ಅಪ್ಪು ಯಾವುದೇ ಸಂಭಾವನೆ ಪಡೆದಿಲ್ಲ.

ಸ್ಯಾಂಡಲ್ವುಡ್ ನ ದಾಸ, ಅಭಿಮಾನಿಗಳಿಂದ ಡಿ ಬಾಸ್ ಎಂದೇ ಕರೆಸಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಸರ್ಕಾರದ ಕೆಲ ಕಾರ್ಯಕ್ರಮಗಳಲ್ಲಿ ಕೈ ಜೋಡಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗಷ್ಟೇ ದರ್ಶನ್ ಅವರನ್ನ ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ಮಾಡಿದೆ. ಇನ್ನು ಅದಕ್ಕಾಗಿ ಅಭಿಮಾನಿಗಳ ನೆಚ್ಚಿನ ದಾಸ ಒಂದು ರೂಪಾಯಿ ಕೂಡ ಪಡೆದಿಲ್ಲ. ಇನ್ನು ದರ್ಶನ್ ಅವರು ಪ್ರಾಣಿ ಪ್ರಿಯ ಎಂಬುದು ನಿಮ್ಮೆಲರಿಗೂ ಗೊತ್ತಿರುವ ವಿಷಯವೇ. ಜೊತೆಗೆ ಅವರಿಗೆ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫಾರ್ಮ್ ಹೌಸ್ ನಲ್ಲಿ ರೈತರಂತೆ ಕೆಲಸ ಕೂಡ ಮಾಡುತ್ತಾರೆ ಅಪಾರ ಅಭಿಮಾನಿ ಬಳಗ ಹೊಂದಿರುವ ದರ್ಶನ್ ಅವರು.

ಇನ್ನು ಇತ್ತೀಚೆಗಷ್ಟೇ ಸಿನಿಮಾ ರಂಗದಲ್ಲಿ ತಮ್ಮ ೨೫ ವರ್ಷಗಳನ್ನ ಆಚರಿಸಿಕೊಂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೂಡ ರೈತರ ಪರವಾದ ಜಾಹಿರಾತು ನೀಡಿದ್ದಾರೆ, ಅದು ಸಂಭಾವನೆ ಪಡೆಯದೇ. ಹೌದು, ನಾವು ರೈತರನ್ನ ಗೌರವಿಸುತ್ತೇವೆ ಎಂಬ ಆಪ್ ನ ಲೋಗೋ ಬಿಡುಗಡೆ ಮಾಡಿದ್ದ ಕಿಚ್ಚ ಅದಕ್ಕಾಗಿ ಸಂಭಾವನೆ ಪಡೆದಿರಲಿಲ್ಲ.  ಇದೆ ಅಲ್ಲದೆ ರೈತರು ಸಂಕಷ್ಟದ ಪರಿಸ್ಥಿತಯಲ್ಲಿದ್ದಾಗ ಸುದೀಪ್ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಇವರ ಜೊತೆಗೆ ರಿಯಲ್ ಸ್ಟಾರ್ ನಟ ನಿರ್ದೇಶಕ ಉಪೇಂದ್ರ ಅವರು ಕೂಡ ನಂದಿನಿ ಹಾಲಿನ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಸಹ ಯಾವುದೇ ಸಂಭಾವನೆ ಪಡೆದಿಲ್ಲ ಎಂದು ಹೇಳಲಾಗಿದೆ.