Advertisements

ಗಾರೆ ಕೆಲಸ ಮಾಡಿಕೊಂಡು. ಚಿಕ್ಕಣ್ಣ ಕಾಮಿಡಿ ಕಿಂಗ್ ಆಗಿದ್ದು ಹೇಗೆ ಗೊತ್ತಾ.? ನಿಜಕ್ಕೂ ಆಶ್ಚರ್ಯ.

Cinema News

ಕಾಮಿಡಿ ಕಿಂಗ್ ಚಿಕ್ಕಣ್ಣನ ಹೆಸರು ಕೇಳಿದ ತಕ್ಷಣ ಮುಖದಲ್ಲಿ ನಗು ಬರುವುದು ಕಂಡಿತ. ಪ್ರೇಕ್ಷಕರನ್ನು ಅಳಿಸುವುದು ಸುಲಭ ಆದರೆ ನಗಿಸುವುದು ತುಂಭ ಕಷ್ಟದ ಕೆಲಸ. ಇನ್ನೂ ಚಿಕ್ಕಣ್ಣನ ಕಾಮಿಡಿ ನೋಡಿದವರು ನಗಲಾರದವರು ಯಾರೂ ಇಲ್ಲ‌. ನಗಿಸುವ ಕಲೆ ಎಲ್ಲರಲ್ಲೂ ಇರವುದಿಲ್ಲ ಆದರೆ ನಗಿಸುವ ಕಲೆ ನಮ್ಮ ಸ್ಯಾಂಡಲ್ ವುಡ್ ನಟರಲ್ಲಿ ಒಬ್ಬರಾದ ಚಿಕ್ಕಣ್ಣನಿಗೆ ಇದೆ. ಎಲ್ಲರನ್ನೂ ನಕ್ಕು ನಗಿಸುವ ಚಿಕ್ಕಣ್ಣ ಈಗ ಕಾಮಿಡಿ ಕಿಂಗ್ ಎಂದು ಎನಿಸಿಕೊಂಡಿರಬಹುದು ಆದರೆ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಮುನ್ನ ಎನು ಮಾಡುತ್ತಿದ್ದರು, ಎನೆಲ್ಲಾ ಕಷ್ಟಗಳನ್ನು ಏದುರಿಸಿದ್ದಾರೆ ಎಂದು ತಿಳಿದುಕೊಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಹೌದು ಚಿಕ್ಕಣ್ಣ ಸಿನಿಮಾ ರಂಗಕ್ಕೆ ಬರುವ ಮುನ್ನ ಗಾರೆ ಕೆಲಸವನ್ನು ಮಾಡುತ್ತಿದ್ದರು ಎಂಬುದು ಬಹಳಷ್ಟು ಮಂದಿಗೆ ಈ ವಿಚಾರ ತಿಳಿದಿಲ್ಲ.

Advertisements

ಮೈಸೂರು ಜಿಲ್ಲೆಯ ಒಂದು ಪುಟ್ಟ ಹಳ್ಳಿಯಲ್ಲಿ ಭೈರೇಗೌಡ, ನಿಂಗವ್ವ ದಂಪತಿಗಳಿಗೆ ಜನಿಸಿದ ಆರು ಮಕ್ಕಳಲ್ಲಿ ಚಿಕ್ಕಣ್ಣ ಐದನೆಯವರು. ತೀರ ಬಡಕುಟುಂಬದಲ್ಲಿ ಜನಿಸದ ಇವರಿಗೆ ಊಟಕ್ಕು ಸಹ ತುಂಬಾ ಕೊರತೆ ಇತ್ತು‌. ಎಷ್ಟೊ ಸಾರಿ ಚಿಕ್ಕಣ್ಣ ಬರೀ ಮಂಡಕ್ಕಿ, ಬನ್ ತಿಂದುಕೊಂಡು ದಿನಗಳನ್ನು ಕಳೆದಿದ್ದಾರೆ. ದಿನಕೂಲಿ ಮಾಡಿಕೊಂಡು ವಿದ್ಯಾಭ್ಯಾಸವನ್ನು ಮಾಡುತ್ತಾ ಬೆಳೆದವರು ಚಿಕ್ಕಣ್ಣ. ಆದರೆ ಚಿಕ್ಕಣ್ಣ ಅವರಿಗೆ ನಾಟಕದ ಮೇಲೆ ಯಾವಾಗ ಆಸಕ್ತಿ ಬೆಳೆಯಿತೋ ಏನೋ ಸ್ನೇಹಿತರೊಂದಿಗೆ ಸೇರಿ ನಾಟಕ ಮಾಡಲಾರಂಭಿದರು.

ಆದರೆ ಚಿಕ್ಕಣ್ಣನ ತಂದೆಗೆ ಚಿಕ್ಕಣ್ಣ ನಾಟಕಗಳಲ್ಲಿ ಅಭಿನಯಿಸುವುದು ಸ್ವಲ್ಪವೂ ಇಷ್ಟ ಇರಲಿಲ್ಲ. ಆದರೂ ಹೊರಗೆ ಕೆಲಸಕ್ಕೆ ಹೋಗುತ್ತಿರುವಾಗ ಮೈಸೂರಿನ ನಾಟಕ ಮಂಡಳಿಯೊಂದರಲ್ಲಿ ಅನೇಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಚಿಕ್ಕಣ್ಣನಿಗೆ ನಂತರ ಧಾರಾವಾಹಿಗಳಲ್ಲಿ ಅವಕಾಶ ದೊರೆತು ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿನಯಿಸುತ್ತಾ ಬರುತ್ತಾರೆ‌.

ದಿನಗಳು ಕಳೆದಂತೆ ಚಿಕ್ಕಣ್ಣ ಬೆಂಗಳೂರಿಗೆ ಬಂದು. ಯಾರ ಪರಿಚಯವೇ ಇಲ್ಲದ ಈ ದೊಡ್ಡ ನಗರದಲ್ಲಿ ಪಬ್ಲಿಕ್ ಟಾಯ್ಲೆಟ್ ನಲ್ಲಿ ಸ್ನಾನ ಮಾಡಿಕೊಂಡು ರಾತ್ರಿಯೆಲ್ಲಾ ಮೆಜೆಸ್ಟಿಕ್ ಸತ್ತಮುತ್ತ ಓಡಾಡಿಕೊಂಡು ಕುಳಿತಲ್ಲೆ ನಿದ್ರೆ ಮಾಡುತ್ತಿದ್ದ ಚಿಕ್ಕಣ್ಣನಿಗೆ ಹೇಗೋ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಇದಾದ ನಂತರ ಆಗಿದ್ದೆಲ್ಲಾ ಚಿಕ್ಕಣ್ಣನ ಕಾಮಿಡಿ ಮಹಿಮೆ. ಅವರ ಆಭಿನಯ ಎಲ್ಲರಿಗೂ ಇಷ್ಟವಾಗಿದ್ದಲ್ಲದೆ ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಸಿಗುತ್ತದೆ.

ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ನಟರೊಂದಿಗೆ ಕಿರಾತಕ, ರನ್ನ, ಅದ್ಯಕ್ಷ, ಮಾಸ್ಟರ್ ಪೀಸ್, ರಥಾವರ, ವಜ್ರಕಾಯ, ದೊಡ್ಮನೆ ಹುಡುಗ, ರಾಜಕುಮಾರ ಮಪ್ತಿ ಸೇರಿದಂತೆ ಇದುವರೆಗೂ ಸುಮಾರು 70 ಸಿನಿಮಾಗಳಲ್ಲಿ ಚಿಕ್ಕಣ್ಣ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇವರ ಉತ್ತಮ ನಟನೆಯನ್ನು ನೋಡಿ ಹಾಸ್ಯ ನಟ ಪ್ರಶಸ್ತಿ ಕೂಡ ನೀಡಿದೆ. ಇತ್ತೀಚಿನ ಜೀ ಕನ್ನಡದಲ್ಲಿ ರಮೇಶ್ ಅರವಿಂದ್ ನಡೆಸಿಕೊಡುವ ವಿಕೆಂಡ್ ವಿತ್ ರಮೇಶ್ ನಲ್ಲಿಯೂ ಕೂಡ ಕಾಣಿಸಿಕೊಂಡು ಸಾಧಕರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಪುಟ್ಟ ಗ್ರಾಮದಲ್ಲಿ ಹೂ ಕಟ್ಟಿ ಮಾರುತ್ತಾ ಬಜ್ಜಿ ಬೊಂಡ ಮಾಡುತ್ತಾ ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ಸಿನಿಮಾರಂಗದ ಉತ್ತಮ ಹಾಸ್ಯ ನಟರಲ್ಲಿ ಒಬ್ಬರಾಗಿ ಗುರುತಿಸಿ ಕೊಂಡಿದ್ದಾರೆ. ಬಡತನ ಎಂದು ನಂಬಿಕೊಂಡು ಚಿಕ್ಕಣ್ಣ ನಾಟಕಗಳಲ್ಲಿ ಅಭಿನಯಿಸದೆ. ಬೆಂಗಳೂರಿಗೆ ಬರದೇ ಇದ್ದಿದ್ದರೆ ಈಗ ಅವರನ್ನ ನಾವು ತೆರೆ ಮೇಲೆ ನೋಡಲಾಗದೆ ಉತ್ತಮ ನಟನನ್ನು ಕಳೆದುಕೊಳ್ಳುತ್ತಿದ್ದೆವು.