Advertisements

ದರ್ಶನ್ ಗೆ ಎದುರಾಳಿಯಾಗಿ ನಿಂತ ತಮಿಳು ನಟ ವಿಜಯ್. ವಿಷಯ ಕೇಳದ್ರೆ ಶಾಕ್ ಆಗ್ತೀರಾ.!

Cinema

ಪ್ರತೀ ಸಿನಿಮಾ ಕ್ಷೇತ್ರದಲ್ಲಿ ಸ್ಟಾರ್ ವಾರ್ ನಡೆಯುವುದು ಸಾಮನ್ಯವಾಗಿದೆ. ಎರಡು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನದಲ್ಲಿ ರಿಲೀಸ್ ಆದರೆ ಅಲ್ಲಿಂದ ಸ್ಟಾರ್ ವಾರ್ ಗಳು ಪ್ರಾರಂಭವಾಗುತ್ತದೆ. ಸಿನಿಮಾದಲ್ಲಿ ವಾರ್ ನಡೆಯುವುದಲ್ಲದೆ ನಿಜ ಜೀವನದಲ್ಲಿ ಕೂಡ ಕೆಲವು ನಟರು ಸಿನಿಮಾ ಜಿದ್ದನ್ನು ಮುಂದುವರೆಸುಕೊಂಡು ಹೋಗುತ್ತಾರೆ. ಈ ಸ್ಟಾರ್ ಗಳ ನಡುವಿನ ಪೈಪೋಟಿಗೆ ಅರ್ದ ಮಂಗಳ ಆಡುವುದೇ ಈ ಅಭಿಮಾನಿಗಳು. ಇದರಲ್ಲಿ ಸರಿ ಯಾವುದು ತಪ್ಪು ಯಾವುದು ಎಂದು ನಿರ್ದರಿಸುವುದು ಬಹಳ ಕಷ್ಟ ಸಾಧ್ಯ.

Advertisements

ಕನ್ನಡ ಚಿತ್ರರಂಗದ ಕುಚಿಕುಗಳು ಎಂದರೆ ನಮಗೆ ಮೊದಲು ನೆನಪಾಗುವುದು ರೆಬಲ್ ಸ್ಟಾರ್ ಅಂಬರೀಶ್ ಮತ್ತು ಸಾಹಸ ಸಿಂಹ ವಿಷ್ಣುವರ್ಧನ್ ಅವರಂತೆಯೇ ಈಗ ಸ್ಯಾಂಡಲ್ ವುಡ್ ನ ಕುಚಿಕುಗಳು ಎಂದು ಕರೆಸಿಕೊಳ್ಳುವ ಕಿಚ್ಚ ಸುದೀಪ್ ಮತ್ತು ಚಾಲೆಂಜಿಗ್ ಸ್ಟಾರ್ ದರ್ಶನ್ ಅಂತಾನೆ ಹೇಳಬಹುದು. ಹೌದು ಇವರಿಬ್ಬರು ಪ್ರಾಣ ಸ್ನೇಹಿತರಾಗಿದ್ದರಿಂದ ಇವರ ಜೋಡಿ ನೋಡಿ ಸ್ಯಾಂಡಲ್ ವುಡ್ ನ ಬೆಂಕಿ ಮತ್ತು ಬಿರುಗಾಳಿ ಒಟ್ಟಿಗೆ ಸೇರಿದ್ದಾರೆ ಎಂದು ಪರ ಭಾಷಿಕರು ಶಾಕ್ ಆಗಿದ್ದರು. ಇವರಿಬ್ಬರ ಅಭಿಮಾನಿಗಳು ಇಬ್ಬರನ್ನು ಒಟ್ಟಿಗೆ ನೋಡುವುದೇ ಒಂದು ಹಬ್ಬ ಎಂದು ಸಂಭ್ರಮಿಸುತ್ತಿದ್ದರು.

ಆದರೆ ಎನಾಯಿತು ಎನೋ ಇವರಿಬ್ಬರ ನಡುವೆ ಸ್ನೇಹ ಬಿರಕು ಬಿಟ್ಟಿದ್ದು ಶೀತಲ ಸಮರವೂ ಕೂಡ ಶುರುವಾಗಿದೆ.
ಈಗಾಗಲೆ ಕೆಲವು ಸುದ್ದಿಗಳು ಹರಡಿರುವುದನ್ನು ನೋಡಿದರೆ ಕನ್ನಡದಲ್ಲೂ ಕೂಡ ಸ್ಟಾರ್ ವಾರ್ ಶುರುವಾಗಿ ಸ್ನೇಹಕ್ಕಿಂತ ಸಮರವೇ ಸೂಕ್ತವೆಂದು ನಿರ್ದಾರವನ್ನ ಕೈಗೆ ತೆಗೆದುಕೊಂಡಂತಿದೆ. ಇದೆಲ್ಲಾ ಬಿಡಿ ಈಗ ತಮಿಳು ಸಿನಿಮಾ ಸ್ಟಾರ್ ತಳಪತಿ ವಿಜಯ್ ದರ್ಶನ್ ಗೆ ಪೈಪೋಟಿಯಾಗಿ ನಿಂತಿದ್ದಾರೆ. ಹೌದು ದಕ್ಷಿಣ ಭಾರತದ ಇಬ್ಬರು ಸ್ಟಾರ್ ನಟರು ಎಪ್ರಿಲ್‌ 9 ರಂದು ಮುಖಾಮುಖಿಯಾಗಲಿದ್ದಾರೆ. ಅಂದು ನಡೆಯುವ ಆಟದಲ್ಲಿ ಜಯ ಯಾರಿಗೆ ಎಂಬುದನ್ನು ಕುತೂಹಲ ಮೂಡಿಸಿದೆ.

ಕರ್ನಾಟಕದಲ್ಲಿ ದರ್ಶನ್ ಸಿನಿಮಾಗಳು ರಿಲೀಸ್ ಆದರೆ ಅಭಿಮಾನಿಗಳು ನುಕು ನುಗ್ಗಲಾಗಿ ನಿಂತಿರುತ್ತಾರೆ. ಇನ್ನೂ ಇದರ ನಡುವೆ ಬೇರೆ ಬಾಷೆಯ ಸಿನಿಮಾಗಳಿಗೆ ಓಪನಿಂಗ್ ಸಿಗುವುದು ಬಹುತೇಕ ಅಸಾಧ್ಯ. ಆದರೆ ಕರ್ನಾಟಕದಲ್ಲಿ ವಿಜಯ್ ಗೆ ಸಾಕಷ್ಟು ಅಭಿಮಾನಿಗಳು ಇರುವುದಂತೂ ನಿಜ. ವಿಜಯ್ ಅಭಿನಯದ ‘ಮಾಸ್ಟರ್’ ಸಿನಿಮಾ ಎಪ್ರಿಲ್ 9 ರಂದು ಬಿಡುಗಡೆಯಾಗಲಿದೆ. ಇನ್ನೂ ವಿಜಯ್ ಸೇತುಪತಿ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಯಾಂಡಲ್ ವುಡ್ ನ ಇತ್ತೀಚಿನ ಬಹು ನಿರೀಕ್ಷಿತ ಚಿತ್ರ ಎಂದರೆ ಅದು ದರ್ಶನ್ ಅಭಿನಯದ ರಾಬರ್ಟ್. ಈ ಚಿತ್ರ ಬಿಡುಗಡೆ ಆಗುವ ದಿನದಂದೇ ತಮಿಳು ಸಿನಿಮಾ ಬಿಡುಗಡೆಯಾಗುತ್ತಿದ್ದು ಈ ಎರಡು ಚಿತ್ರಗಳ ನಡುವೆ ಯಾವುದು ಹೆಚ್ಚು ಪೈಪೋಟಿ ಕೊಡುತ್ತದೆ ಎಂದು ಹೇಳಲು ಕಷ್ಟ ಸಾದ್ಯ.

ಕಾರಣವೇನೆಂದರೆ ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಚಿತ್ರಮಂದಿರಗಳಲ್ಲಿ ತಮಿಳು, ತೆಲುಗು, ಬಾಷೆಯ ಸಿನಿಮಾಗಳು ಸಿಗುತ್ತಿರುವುದರಿಂದ ದರ್ಶನ್ ಮತ್ತು ವಿಜಯ್ ಸಿನಿಮಾಗಳಾದ “ರಾಬರ್ಟ್” “ಮಾಸ್ಟರ್‌” ನಡುವೆ ಪೈಪೋಟಿ ನಡೆಯುವುದಂತೂ ಗ್ಯಾರೆಂಟಿ.