Advertisements

ಗಂಡನನ್ನು ಬಿಟ್ಟು ಬಂದು ತನ್ನ ಬದುಕನ್ನ ನಡೆಸ್ತಿದ್ದ ಮಹಿಳೆ.. ಒಂದು ದಿನ ಗಂಡ ಬಂದು ನಿನ್ನ ಜೊತೆ ಮಾತಾಡಬೇಕು ಬಾ ಅಂತೇಳಿ ಯಾವರೀತಿ ಮಾಡಿದ್ದಾನೆ ಗೊತ್ತೇ!

News

ಮದುವೆ ಅಂದ್ರೆ ಎರಡು ಕುಟುಂಬಗಳು ಬೆಸೆಯುವುದು ಮಾತ್ರವಲ್ಲ. ಎರಡು ಮನಸ್ಸುಗಳು ಪರಸ್ಪರ ಒಂದಾಗುವುದು. ಎರಡು ಹೃದಯಗಳು ಜೊತೆಯಾಗಿ ಬಾಳುತ್ತೇವೆ ಅಂತ ಸಂಕಲ್ಪ ಮಾಡುವುದು. ಕಷ್ಟದಲ್ಲಿ ನೋವಲ್ಲ, ಬದುಕಿನ ಏಳು ಬೀಳಿನಲ್ಲಿ ಜೊತೆಯಾಗಿ ಇರ್ತೇವೆ ಅಂತ ಪರಸ್ಪರ ಪ್ರೋಮಿಸ್ ಮಾಡಿಕೊಳ್ಳುವುದು. ನೋವಲ್ಲಿ ನಲಿವಾಗಿ, ನಗುವಲ್ಲಿ ಖುಷಿಗೆ ಕಾರಣವಾಗಿ ಇಬ್ಬರು ಜೊತೆ ಜೊತೆಯಾಗಿ ಬದುಕುವುದು. ಮದುವೆ ಅಂದ್ರೆ ಅಗಾಧವಾದ ಮೌಲ್ಯವಿದೆ. ಮದುವೆಗೆ ಸಂಪ್ರದಾಯದಲ್ಲಿಯೂ ವಿಶೇಷ ಸ್ಥಾನವಿದೆ. ಆದ್ರೆ ಇವತ್ತಿನ ದಿನದಲ್ಲಿ ಮದುವೆ ಅನ್ನೋದು ಬರೇ ಪದವಾಗಿ ಉಳಿದುಬಿಟ್ಟಿದೆ. ತನ್ನ ನಿಜವಾದ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಇದಕ್ಕೆ ಇಂಬು ಕೊಡುವಂತಿದೆ., ನಾವು ಈಗ ನಿಮಗೆ ಹೇಳ್ತಾಯಿರುವ ಈ ಸ್ಟೋರಿ.
ಎಸ್.. ಈತನ ಹೆಸರು ಷಡಕ್ಷರಿ.. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ನಿವಾಸಿ.. ಈಕೆಯ ಹೆಸರು ಸಂಧ್ಯಾ ಇನ್ನೂ ಕೇವಲ ಇಪ್ಪತ್ತ ಮೂರು ವರ್ಷ‌‌..

[widget id=”custom_html-3″]

Advertisements

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದ್ಯಾವ ಪಟ್ಟಣ ಗ್ರಾಮದ ನಿವಾಸಿ.. ಇವರಿಬ್ಬರಿಗೂ ಒಂದೂವರೆ ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಮೊದ ಮೊದಲು ಎಲ್ಲ ಚೆನ್ನಾಗಿತ್ತು. ಆಮೇಲೆ ನಡೆದಿದ್ದೇ ನೋಡಿ ದು’ರಂ’ತ. ಪತಿ ಮಹಾಶಯ ಮಾಡಿರುವ ಕೆಲಸಕ್ಕೆ ಇದೀಗ ಎರಡು ಕುಟುಂಬ ನೋವು ಅನುಭವಿಸುವಂತಾಗಿದೆ. ಹೌದು ಗಂಡನನ್ನು ಬಿಟ್ಟು ಬಂದು ತನ್ನ ಬದುಕನ್ನ ನಡೆಸ್ತಿದ್ದ ಸಂಧ್ಯಾ ಕಂಪ್ಯೂಟರ್ ಕ್ಲಾಸಿಗೆ ಸೇರಿಕೊಳ್ತಾಳೆ. ಅಲ್ಲೇ ಕೆಲಸ ಮಾಡಿಕೊಂಡು ಹೆಂಗೋ ಜೀವನ ಸಾಗಿಸ್ತಿರ್ತಾಳೆ. ಆದ್ರೆ ಒಂದಿನ ಆಕೆಯ ಪತಿ ಅಂದ್ರೆ ಈ ಷಡಕ್ಷರಿ ಬಂದು ನಿನ್ನ ಜೊತೆ ಮಾತಾಡಬೇಕು ಬಾ ಅಂತ ನಯವಾಗಿ ಮಾತಾಡಿ ಪುಸಲಾಯಿಸಿ ಕರೆದುಕೊಂಡು ಹೋಗಿ, ಬೆಟ್ಟದ ಬಳಿಯಿರುವ ನಾಲೆಯ ಬಳಿ ಆಕೆಯನ್ನು ಸಾ’ಯಿ’ಸಿ ಪರಾರಿಯಾಗಿದ್ದಾನೆ, ಅಷ್ಟೇ ಅಲ್ಲ, ತಾನೇ ಕೊಂ’ದಿ’ದ್ದು ಅಂತ ಡೌಟ್ ಬರಬಾರದು ಅಂತ ತಾನೂ ವಿ’ಷ ಸೇವಿಸಿ ಕೊನೆಗೆ ತಾನೇ ಆಸ್ಪತ್ರೆಗೆ ಸೇರಿಕೊಂಡಿದ್ದಾನೆ.

[widget id=”custom_html-3″]

ವಿಷಯ ತಿಳಿದ ತಕ್ಷಣ ಷಡಕ್ಷರಿಯನ್ನು ಪೊಲೀಸರು ಡ್ರಿಲ್ ಮಾಡಿದ್ದು ಎಲ್ಲ ವಿಚಾರವನ್ನು ಬಾಯಿ ಬಿಟ್ಟಿದ್ದಾನೆ. ಎಂತಹ ಜನ ಇರ್ತಾರೆ ನೋಡಿ. ಇತ್ತ ಆ ಸಂಧ್ಯಾನೂ ಇಲ್ಲ, ಅತ್ತ ಷಡಕ್ಷರಿಗೂ ಮುಂದಿನ ಬದುಕಿನ ದಾಂಪತ್ಯ ಸರಿ ಬರಲಿಲ್ಲವಾ.. ಹೊಂದಿಕೊಳ್ಳಲು ಪ್ರಯತ್ನ ಪಡಿ.. ಅದೂ ಆಗಲಿಲ್ಲವಾ ಕನಿಷ್ಟ ಪಕ್ಷ ತಮ್ಮ ತಮ್ಮ ಪಾಡಿಗೆ ಬದುಕಿ.. ಅದನ್ನು ಬಿಟ್ಟು ಈ ರೀತಿ ಮಾಡಿ ಇರೋ ಒಂದು ಜೀವನವನ್ನು ಈ ರೀತಿ ಕಳೆಯೋದು.. ಅತ್ತ ಆ ಹೆಣ್ಣು ಮಗಳ ತಂದೆ ತಾಯಿ ಅದೆಷ್ಟು ಸಂಕಟ ಪಡುವರೋ.. ಇತ್ತ ಮಗ ಇದ್ದರೂ‌ ಇಲ್ಲದಂತೆ ಆತನ ತಂದೆ ತಾಯಿ ಜೀವನ ಸಾಗಿಸಬೇಕು.. ಅವರುಗಳು ಮಾಡಿದ ತಪ್ಪಾದರೂ ಏನು.. ಗಂಡ ಕರೆದಿದ್ದಾನೆ ಅಂತ ನಂಬಿ ಆತನಜೊತೆ ಬಂದ ಆಕೆ ಮಾಡಿದ ತಪ್ಪಾದರೂ ಏನು?

[widget id=”custom_html-3″]