Advertisements

ತಾನೊಬ್ಬಳು ಗರ್ಭವತಿ ಅಂಥ ಗೊತ್ತಿದ್ರು ತನ್ನ ಆಸೆಗೋಸ್ಕರ ಎಂಥ ಕೆಲಸ ಮಾಡಿದ್ದಾಳೆ ಗೊತ್ತಾ? ಪೊಲೀಸರು ಬೆ’ಚ್ವಿ’ಬಿದ್ದಿದ್ದಾರೆ..

Kannada Mahiti

ಕೆಲಸದ ಮೇಲೆ ಪ್ರೇಮವಿರಬೇಕು ಆದ್ರೆ ಈ ರೇಂಜಿಗಾ.. ಹೆಣ್ಣು ಮಕ್ಕಳು ಬದುಕಬೇಕು ಸ್ವಾವಲಂಬಿಯಾಗಿ ಜೀವಿಸಬೇಕು ಆದ್ರೆ ಇಷ್ಟೊಂದು ರಿಸ್ಕ್ ತೆಗೆದುಕೊಂಡು ತಮ್ಮ ಬದುಕು ಹಾಗೂ ಇನ್ನೊಂದು ಜೀವವನ್ನು ಒತ್ತೆಯಿಟ್ಟು ಈ ರಿಸ್ಕ್ ತೆಗೆದುಕೊಳ್ಳುವ ಅಗತ್ಯವಿತ್ತಾ ಎಂಬ ಪ್ರಶ್ನೆ ಈಗ ಮೂಡಿದೆ. ಹೌದು ಈಕೆಯ ಹೆಸರು ಅಶ್ವಿನಿ ಸಂತೋಷ ಕೊರೆ.. ವಯಸ್ಸು ಇಪ್ಪತ್ತ ನಾಲ್ಕು ವರ್ಷ.. ಮೂಲತಃ ಬೀದರ್ ಜಿಲ್ಲೆಯ ನಿವಾಸಿ.. ಓದಿದ್ದು ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ.. ಒಳ್ಳೆಯ ಅಂಕಗಳನ್ನು ಸಹ ಪಡೆದಿದ್ದಾರೆ.. ಇಂಜಿನಿಯರಿಂಗ್ ಸಂಬಂಧಪಟ್ಟಂತೆ ಒಂದು ಒಳ್ಳೆಯ ಕೆಲಸಕ್ಕೂ ಅಶ್ವಿನಿ ಸೇರಬಹದಾಗಿತ್ತು.. ಆದ್ರೆ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಈಕೆಯ ಬಹುಕಾಲದ ಕನಸು .

Advertisements

ಪಿಎಸ್​​ಐ ಆದ್ರೂ ಆಗಬೇಕು ಅಂತ ಕನಸು ಕಂಡಿದ್ರೂ ಆದರೆ ಈ ಮಧ್ಯೆಯೇ ಇವರಿಗೆ ಮದುವೆಯಾಯ್ತು ಗರ್ಭವತಿಯು ಆಗಿದ್ರು. ಪೊಲೀಸ್ ಇಲಾಖೆಯ ನಿಯಮದ ಪ್ರಕಾರ, ಗ’ರ್ಭಿ’ಣಿಯರು ಫಿಸಿಕ್ ಟೆಸ್ಟ್ ಅಲ್ಲಿ ಭಾಗವಹಿಸುವಂತಿಲ್ಲ, ಆದ್ರೆ ಈಕೆ ಮಾತ್ರ ಭಾಗವಹಿಸಿದ್ದಾಳೆ, ಎಲ್ಲವನ್ನು ಮರೆತು, ಅಂದ್ರೆ ತಾನೊಬ್ಬಳು ಗ’ರ್ಭ’ವತಿ ಎನ್ನುವುದನ್ನು ಮರೆತು ಓಡಿದ್ದಾಳೆ. ನಾಲ್ಕು ನೂರು‌ ಮೀಟರ್ ಓಟವನ್ನು ಕೇವಲ ಒಂದು ನಿಮಿಷ ಮೂವತ್ತಾರು ಸೆಕೆಂಡ್ ಗಳಲ್ಲಿ ಮುಗಿಸಿದ್ದಾರೆ.. ಆದರೆ ಅಶ್ವಿನಿ ಗರ್ಭಿಣಿ ಎಂಬ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಬೆ’ಚ್ವಿ’ಬಿದ್ದಿದ್ದಾರೆ..

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಈಶಾನ್ಯ ವಲಯ ಐಜಿಪಿ ಮನೀಶ್ ಕರ್ಬಿಕರ್ , ಗರ್ಭಿಣಿಯರು ಫಿಸಿಕಲ್ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತಿಲ್ಲ.. ಇದಕ್ಕೆ ಇಲಾಖೆಯ ಅನುಮತಿಯೂ ಇಲ್ಲ.. ಈ ಕಾರಣಕ್ಕೆ ಮಹಿಳೆಯರು ಗ’ರ್ಭಿ’ಣಿಯಾಗಿದ್ದರೆ ಅದನ್ನು ನಮ್ಮಿಂದ ಮುಚ್ಚಿಟ್ಟು ಈ ರೀತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ.. ಆಸೆ ಇರಬೇಕು ಕನಸು ನನಸು ಮಾಡಿಕೊಳ್ಳೋದು ಮುಖ್ಯ, ಆದ್ರೆ ಒಂದೊಮ್ಮೆ ಯಾರಿಗೇನಾದ್ರೂ ಆಗಿದ್ರೆ ಯಾರು ಹೊಣೆ? ಮಗುವಿಗೆ ಏನಾದ್ರೂ ಆಗಿದ್ರೆ ಆ ಜೀವದ ಕತೆ ಏನು ಅಂತ ತ’ರಾ’ಟೆಗೆ ತೆಗೆದುಕೊಂಡಿದ್ದಾರೆ.