Advertisements

ಆಂಜನೇಯನ ಬಾಯಲ್ಲಿ ಕೈ ಹಾಕಿ ಈ ವ್ಯಕ್ತಿ ಮಾಡಿದ್ದೇನು ನೋಡಿ! ಅಚ್ಚರಿಯ ಘಟನೆ..

Temples

ಪ್ರಿಯ ಓದುಗರೆ ತೆಂಗಿನಕಾಯಿಯನ್ನು ಹಿಂದೂಧರ್ಮದಲ್ಲಿ ಪವಿತ್ರ ಎಂದು ಭಾವಿಸಲಾಗಿದೆ. ತೆಂಗು ಇಲ್ಲದೆ ದೇವರಪೂಜೆ ಪೂರ್ಣವಾಗುವುದಿಲ್ಲ. ದೇವರಿಗೆ ಯಾಕೆ ತೆಂಗಿನಕಾಯಿ ಒಡೆಯಬೇಕು? ಯಾಕೆ ಈ ಸಂಪ್ರದಾಯ ಬೆಳೆದು ಬಂದಿತು? ಅದರ ಮಹತ್ವ ಏನು? ಈ ಎಲ್ಲ ಪ್ರಶ್ನೆಗಳಿಗೂ ನಾವು ನಿಮಗೆ ಉತ್ತರ ನೀಡುತ್ತೇವೆ. ಈ ಲೇಖನವನ್ನು ಪೂರ್ಣವಾಗಿ ಓದಿ.
ಭಾರತದ ಎಲ್ಲ ದೇವಸ್ಥಾನಗಳಲ್ಲಿಯೂ ಹಣ್ಣುಕಾಯಿ ಮಾಡಿಸುವುದು ರೂಡಿ ಮತ್ತು ಸಂಪ್ರದಾಯ. ದೇವರ ಕಾರ್ಯ ಮಾಡಿಸುವಾಗ ತೆಂಗು ಇರಲೇಬೇಕು.

[widget id=”custom_html-3″]

ಕುಂಭಮೇಳ, ಲಕ್ಷ್ಮಿ ಪೂಜೆ, ಎಲ್ಲದಕ್ಕೂ ತೆಂಗು ಬೇಕೇಬೇಕು. ಇದನ್ನು ಕಲ್ಪವೃಕ್ಷ ಎಂತಲೂ ಕರೆಯುತ್ತಾರೆ. ಇದಕ್ಕೆ ಒಂದು ಪುರಾಣ ಕಥೆಯಿದೆ.ಅದೇನೆಂದು ಅರಿಯೋಣ ಬನ್ನಿ. ಹಿಂದೆ ವಿಶ್ವಾಮಿತ್ರನು ತ್ರಿಶಂಕು ರಾಜನನ್ನು ಸ್ವರ್ಗಕ್ಕೆ ಹೋಗದಂತೆ ತಡೆಯಲು ತೆಂಗಿನ ಮರವನ್ನು ಸೃಷ್ಟಿಸಿದನಂತೆ.

[widget id=”custom_html-3″]

[widget id=”custom_html-3″]

Advertisements

[widget id=”custom_html-3″]

ಅದರ ಮೇಲೆ ತ್ರಿಶಂಕು ವನ್ನು ತೆಲೆ ಕೇಳಗಾಗಿ ಕೊಡಿಸಿದನಂತೆ ಎಂದು ಪುರಾಣಗಳು ಹೇಳುತ್ತವೆ. ಹಾಗೆ ಇದು ಕೇಳಿದ್ದನ್ನು ಕೊಡುವ ಕಲ್ಪವೃಕ್ಷ ಹೌದು. ಇದು ಬಹು ಉಪಯೋಗಿ ಫಲವಾಗಿದೆ. ಹಿಂದೆ ದೇವರನ್ನು ಸಂತೃಪ್ತನಾಗಿ ಸಲು ಮಾನವನ ಬಲಿ ಮತ್ತು ಪ್ರಾಣಿ ಬಲಿ ಕೊಡುತ್ತಿದ್ದರು. ಇದರ ಬದಲಾಗಿ ದೇವಮುನಿಗಳು, ಋಷಿಮುನಿಗಳು, ಮಹಾಜ್ಞಾನಿ ಬಲಿಯ ಬದಲಾಗಿ ಈ ತೆಂಗಿನಕಾಯಿಯನ್ನು ಒಡೆದು ದೇವರನ್ನು ಸಂತೃಪ್ತ ಗೊಳಿಸುತ್ತಿದ್ದರು ಎನ್ನಲಾಗಿದೆ. ಹೀಗೆ ಬೆಳೆದು ಬಂದು ಇದೀಗ ಪ್ರಾಣಿಬಲಿ ಬದಲಾಗಿ ತೆಂಗು ಹೊಡೆದು ದೇವರಿಗೆ ಹರಕೆ ತೀರಿಸುವುದು ಸಂಪ್ರದಾಯ ಮತ್ತು ಒಂದು ಪದ್ಧತಿಯು ಆಗಿದೆ. ಇನ್ನೂ ಕೆಲ ಋಷಿ-ಮುನಿಗಳು ಹೇಳುವಂತೆ ಮಾನವನು ತನ್ನ ಅಹಂಕಾರವನ್ನು ಒಡೆದು ದೇವರಿಗೆ ನೈವೇದ್ಯ ಮಾಡಿ ದೇವರಿಗೆ ಅರ್ಪಿಸುವ ಒಂದು ಪದ್ಧತಿಯು ಆಗಿದೆ ಎಂದು. ಹಾಗೆ ಇಲ್ಲೊಂದು ದೇವಸ್ಥಾನದಲ್ಲಿ ದೇವರೇ ಕಾಯಿಯನ್ನು ಸ್ವೀಕರಿಸಿ, ಭಕ್ತರಿಗೆ ಪ್ರಸಾದ ನೀಡುತ್ತಿದ್ದಾನೆ.

[widget id=”custom_html-3″]

ಹೌದು…ಗುಜರಾತ್ ರಾಜ್ಯದ ಅಹಮದಾಬಾದ್ನ ಸಾರಂಗಪುರ ದ ಆಂಜನೇಯ ದೇವಸ್ಥಾನದಲ್ಲಿ ಆಂಜನೇಯನ ಬಾಯಿಗೆ ತೆಂಗಿನಕಾಯಿ ಹಾಕಿದಾಗ ಅದು ಒಡೆದು ಅರ್ಧಭಾಗವನ್ನು ಪ್ರಸಾದರೂಪದಲ್ಲಿ ಭಕ್ತರಿಗೆ ನೀಡುತ್ತಾನೆ ಇದು ವಿಚಿತ್ರವಾದರೂ ಸತ್ಯ. ಆಂಜನೇಯನ ಮೂರ್ತಿಯ ಬಾಯಿ ತೆರೆದ ಆಕಾರದಲ್ಲಿದ್ದು, ಇದರಲ್ಲಿ ತೆಂಗಿನಕಾಯಿ ಹಾಕಿದಾಗ ಒಳಗೆ ಹೋಗಿ ಒಡೆದು ವಾಪಸ್ಸು ಬರುತ್ತದೆ. ಹೌದು.. ಈ ದೇವಸ್ಥಾನದಲ್ಲಿ ಈ ವಿಸ್ಮಯವನ್ನು ಕಾಣಬಹುದು. ಇದು ಹೇಗೆ ಎಂದು ನೋಡಿದಾಗ ಆಂಜನೇಯನ ಒಳಗೆ ಯಂತ್ರವನ್ನು ಜೋಡಿಸಲಾಗಿದೆ. ಆಂಜನೇಯನ ಬಾಯಿಗೆ ತೆಂಗಿನಕಾಯಿಯನ್ನು ಹಾಕಿದಾಗ, ಅದನ್ನು ಹಿಡಿದುಕೊಂಡು ಹೊಡೆದು ಎರಡು ಭಾಗವನ್ನಾಗಿಸಿ, ಒಂದು ಭಾಗವನ್ನು ಕೈ ಮೂಲಕ ಮೂಲಕ ಭಕ್ತರಿಗೆ ಪ್ರಸಾದವಾಗಿ ನೀಡಿದರೆ, ಮತ್ತೊಂದು ಭಾಗವನ್ನು ಗರ್ಭಗುಡಿಗೆ ನೀಡುತ್ತದೆ.

[widget id=”custom_html-3″]

ಇದರಿಂದ ದೇವಸ್ಥಾನದ ಸ್ವಚ್ಛತೆ ಇಂದ ಕೂಡಿದೆ. ಇಂತಹ ತಂತ್ರಜ್ಞಾನವನ್ನು ಆಂಜನೇಯ ಮೂರ್ತಿ ಅವಳಗೆ ಅಳವಡಿಸಲಾಗಿದೆ ಇದನ್ನು ಹೇಗೆ ಬಳಸಬೇಕು ಎಂದು ಅಲ್ಲಿಯೇ ಒಂದು ಬೋರ್ಡ್ನಲ್ಲಿ ತಿಳಿಸಲಾಗಿದೆ. ಒಬ್ಬ ಭಕ್ತ ಬರೆದಿದ್ದನ್ನು ಓದದೇ ಆಂಜನೇಯನ ಗಂಟಲಿಗೆ ಕಾಯಿಯನ್ನು ಹಾಕಲು ಹೋಗಿದ್ದಾನೆ. ಆಗ ಆತನ ಕೈಯನ್ನೇ ಕಳೆದುಕೊಂಡಿದ್ದಾನೆ. ಇದಾದನಂತರ ಬೋರ್ಡ್ನಲ್ಲಿ ಐದರಿಂದ ಆರು ಭಾಷೆಗಳಲ್ಲಿ ತೆಂಗಿನಕಾಯಿಯನ್ನು ಹೇಗೆ ಹಾಕಬೇಕು ಎಂದು ಬರೆದರು. ಆಗ ಇಂತಹ ಘಟನೆಗಳು ಮರುಕಳಿಸಲು ಎಂದು ಅಲ್ಲಿಯ ಅರ್ಚಕರು ತಿಳಿಸಿದ್ದಾರೆ. ಈ ತಂತ್ರಜ್ಞಾನವನ್ನು ದೇಶದ ಎಲ್ಲೆಡೆ ಬಳಸಿದರೆ ದೇವಸ್ಥಾನಗಳನ್ನು ಸೂಚಿಯಾಗಿ ಇಡಬಹುದು.

[widget id=”custom_html-3″]