Advertisements

ಕುರಿಗಾಹಿ ಹನುಮಂತನಿಗೆ ಹೆಸರು ಬಿಟ್ರೆ ಹಣ ಮನೆ ಏನೂ ಸಿಕ್ಕಿಲ್ವಾ ! ಖುದ್ದಾಗಿ ಆತನೇ ಹೇಳಿದ್ದೇನು ಗೊತ್ತಾ ?

Entertainment

ನಮಸ್ಕಾರ ಸ್ನೇಹಿತರೇ, ಉತ್ತರಕರ್ನಾಟಕದ ಕುಗ್ರಾಮವೊಂದರಿಂದ ಬಂದ ಕುರಿಗಾಹಿ ಹನುಮಂತ ಕನ್ನಡ ಖಾಸಗಿ ವಾಹಿನಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಸರಿಗಮಪ ಶೋನಲ್ಲಿ ತನ್ನದೇ ಆದ ವಿಭಿನ್ನ ರೀತಿಯಲ್ಲಿ ಹಾಡುವುದರ ಮೂಲಕ ರಾತ್ರಿ ಕಳೆದು ಬೆಳಗಾಗುವುದರೊಳಗಾಗಿ ಇಡೀ ಕರ್ನಾಟಕದಾದ್ಯಂತ ಫೇಮಸ್ ಆದ. ಕೇವಲ ಸಿಂಗಿಂಗ್ ಶೋ ಕಾರ್ಯಕ್ರಮ ಮಾತ್ರವಲ್ಲದೇ, ಡಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲೂ ಕೂಡ ಭಾಗವಹಿಸಿ ಜನಮೆಚ್ಚಿಗೆ ಪಡೆದಿದ್ದ. ಅದೆಷ್ಟರ ಮಟ್ಟಿಗೆ ಹನುಮಂತ ಫೇಮಸ್ ಆದ ಎಂದರೆ ಆಗ ನಡೆದ ಚುನಾವಣೆಯಲ್ಲಿ ಹನುಮಂತನ ಮೂಲಕ ತಪ್ಪದೆ ಮತದಾನ ಮಾಡಿ ಎಂಬ ಅಭಿಯಾನ ಕೂಡ ಮಾಡಿಸಲಾಯಿತು. ಜೊತೆಗೆ ಯಾವುದೇ ಸುದ್ದಿವಾಹಿನಿಗಳಲ್ಲಿ ಹನುಮಂತನದ್ದೇ ಸುದ್ದಿಯಾಗುತಿತ್ತು.

Advertisements

ಇನ್ನು ಇಷ್ಟೆಲ್ಲಾ ಆದ ಮೇಲೆ ಹೆಸರು ಬಂತು, ಜೊತೆಗೆ ಹಣ ಕೂಡ ಬಂದಿರುತ್ತೆ ಅಂತ ನಾವೆಲ್ಲಾ ಅಂದುಕೊಂಡಿರುತ್ತೇವೆ. ಹೌದು, ಸರಿಗಮಪ ಕಾರ್ಯಕ್ರಮದಲ್ಲಿ ರನ್ನರ್ ಆಪ್ ಆಗಿದ್ದ ಹನುಮಂತನಿಗೆ ಬಹುಮಾನದ ರೂಪದಲ್ಲಿ ಮನೆ ಕೊಡಲಾಗಿದೆ ಎಂದು ಆಗ ಸುದ್ದಿಯಾಗಿತ್ತು. ಆದರೆ ಹನುಮಂತನಿಗೆ ಹೆಸರು, ಖ್ಯಾತಿ ಮಾತ್ರ ಬಂದಿದೆ. ಆದರೆ ಅಂದು ಬಹುಮಾನದ ರೂಪದಲ್ಲಿ ಕೊಟ್ಟ ಮನೆಯೂ ಕೂಡ ತನ್ನ ಹೆಸರಿಗೆ ಇನ್ನುಬಂದಿಲ್ಲ. ಕ್ಯಾಮರಾ ಮುಂದೆ ಮಾತ್ರ ಎಲ್ಲವನ್ನು ಕೊಟ್ಟಂತೆ ಮಾಡುತ್ತಾರೆ, ಆರ್ಥಿಕವಾಗಿ ಯಾವುದೇ ಸಹಾಯ ಆಗಿಲ್ಲ, ಎಂದೆಲ್ಲಾ ಹನುಮಂತನೇ ಹೇಳಿದ ಹಾಗೇ ದೊಡ್ಡ ಸುದ್ದಿಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದು ಸಖತ್ ವೈರಲ್ ಆಗಿತ್ತು.

ಈಗ ಇದಕ್ಕೆಲ್ಲಾ ಸ್ಪಷ್ಟನೆ ಕೊಟ್ಟು, ಸ್ವತಃ ಹನುಮಂತನೇ ಮಾತನಾಡಿರುವ ವಿಡಿಯೋವೊಂದನ್ನ ಜೀ ಕನ್ನಡ ವಾಹಿನಿಯು ಬಿಡುಗಡೆ ಮಾಡಿದೆ. ಹಾಗಾದ್ರೆ ಆ ವಿಡಿಯೋದಲ್ಲಿ ಹನುಮಂತ ಹೇಳಿದ್ದೇನು ನೋಡೋಣ ಬನ್ನಿ..ಮೊದಲಿಗೆ ಇದು ಶುರುವಾಗಿದ್ದು ಎಲ್ಲಿಂದ ಎಂದು ತಿಳಿಯೋಣ..ಇನ್ನು ಹೀಗೆಲ್ಲಾ ಸುದ್ದಿಯಾಗಿದ್ದು ನೆನ್ನೆ ಪ್ರವಾಸಕ್ಕೆಂದು ಶ್ರೀ ಗೋಕರ್ಣ ಕ್ಷೇತ್ರಕ್ಕೆ ಹೋಗಿದ್ದ ಹನುಮಂತ ತಿಂಡಿ ತಿನ್ನುವ ಸಲುವಾಗಿ ಕುಮುಟಾದ ಬೇಕರಿಯೊಂದರ ಬಳಿ ಹೋಗಿದ್ದಾರೆ. ಸಹಜವಾಗಿಯೇ ಜನರು ಹನುಮಂತನನ್ನ ಮಾತಿಗೆಳೆದಿದ್ದು, ಇಂದು ನನ್ನನ್ನ ಎಲ್ಲರೂ ಗುರುತಿಸುತ್ತಾರೆ ಎಂದರೆ ಅದಕ್ಕೆ ಜೀ ಕನ್ನಡವೇ ಕಾರಣ. ಇದರಿಂದ ನನಗೆ ಹೆಸರು ಏನೋ ಬಂತು. ಆದರೆ ಆರ್ಥಿಕವಾಗಿ ಏನೂ ಲಾಭ ಆಗಲಿಲ್ಲ. ಸರಿಗಮಪ ಶನಲ್ಲಿೋ ರನ್ನರ್ ಪಟ್ಟ ಪಡೆದ ನನಗೆ ಬಹುಮಾನದ ರೂಪವಾಗಿ ಮನೆ ಕೊಡುತ್ತೇನೆ ಎಂದು ಹೇಳಿದ್ದರು. ಆದರೆ ಇದೆಲ್ಲಾ ಕ್ಯಾಮರಾ ಮುಂದೆ ಮಾತ್ರ ಹೇಳಿದ್ದಾಗಿತ್ತು. ಆ ಮನೆಯಿನ್ನು ನನ್ನ ಹೆಸರಿಗೆ ಬಂದಿಲ್ಲ. ಸುಮ್ಮನೆ ನಮಗೆ ಕ್ಯಾಮರಾದ ಮುಂದೆ ಆಸೆ ಹುಟ್ಟಿಸುತ್ತಾರೆ ಎಂದು ಹನುಮಂತ ಹೇಳಿದ್ದಾನೆ ಎಂದು ಅಲ್ಲಿನ ಲೋಕಲ್ ಸುದ್ದಿವಾಹಿನಿ ವರದಿ ಮಾಡಿದ್ದು ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಆದರೆ ಈಗ ಜೀ ಕನ್ನಡ ವಾಹಿನಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಹನುಮಂತ, ನನ್ನ ಬಗ್ಗೆ ಸಾಮಾಜಿಕ ಜಾಲತಾಣದ್ಲಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಕೇಳಿದೆ. ಆದರೆ ನೀವೆಂದುಕೊಂಡಂತೆ ಅದೆಲ್ಲಾ ಸತ್ಯ ಅಲ್ಲ. ನನಗೆ ವಾಹಿನಿಯಿಂದ ಏನೆಲ್ಲಾ ಸಿಗಬೇಕೋ ಅದೆಲ್ಲಾಸಿಕ್ಕಾಗಿದೆ. ಅದರೆ ಈ ರೀತಿ ಸುಳ್ಳು ಸುದ್ದಿ ನನ್ನ ಬಗ್ಗೆ ಏಕೆ ಬಂತು ಅಂತ ಗೊತ್ತಿಲ್ಲ. ನಾನು ಜೀ ಕನ್ನಡದವರ ಜೊತೆ ಚೆನ್ನಾಗಿಯೇ ಇದ್ದೇನೆ. ವಾಹಿನಿಯವರು ನನ್ನ ಮಾತ್ರ ಅಲ್ಲ ಎಲ್ಲಾ ಸ್ಪರ್ಧಿಗಳನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಆದರೆ ಈ ರೀತಿ ಇಲ್ಲ ಸಲ್ಲದ ಸುದ್ದಿಗಳನ್ನ ಹಾಕುವುದು ನನಗೆ ತುಂಬಾ ಬೇಜಾರಿನ ವಿಷಯವಾಗಿದೆ. ಈ ರೀತಿಯ ಸುದ್ದಿಗಳನ್ನ ಹಾಕಬೇಡಿ ಎಂದು ಹನುಮಂತ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.