ನಮಸ್ತೆ ಸ್ನೇಹಿತರೆ, ಕನ್ನಡ ಕಿರುತೆರೆಯಲ್ಲಿ ಅತಿದೊಡ್ಡ ರಿಯಾಲಿಟಿ ಶೋ ಆಗಿರುವ ಸರಿಗಮಪ ಸೀಸನ್ 17 ಯಶಸ್ವಿಯಾಗಿ ಕೊನೆಗೊಂಡಿದೆ. ಈ ಕಾರ್ಯಕ್ರಮ ತನ್ನ ಟಿ.ಆರ್.ಪಿಯನ್ನು ಸೀಸನ್ ಇಂದ ಸೀಸನ್ ಗೆ ಹೆಚ್ಚಿಸಿಕೊಳ್ಳುತ್ತಲೇ ಇದೆ ಆದರೆ ಈ ಬಾರಿಯ ಫಿನಾಲೆ ಮುಗಿದ ಕೂಡಲೇ ಬೆಂಗಳೂರು ಪೋಲಿಸರು ಸರಿಗಮಪ ಕಾರ್ಯಕ್ರಮ ಆಯೋಜಕರಿಗೆ ನಿರೂಪಕರು ಮತ್ತು ತೀರ್ಪುಗಾರರಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.. ಹಾಗಾದರೆ ನಿಜಕ್ಕೂ ನಡೆದಿದ್ದೇನು ಎಂಬುದನ್ನ ತಿಳಿಯೋಣ. ಚೀನಾದಿಂದ ಬಂದ ಖಾ’ಯಿಲೆ ಇನ್ನೂ ತನ್ನ ಆರ್ಭಟವನ್ನ ನಡೆಸಿದ್ದು ಇಂದಿನಿಂದ ನೈಟ್ ಕರ್ಪ್ಯೂ ಆರಂಭವಾಗಿದೆ..

ಇದೀಗ ಸರಿಗಮಪ ಅಯೋಜಕರ ಮೇಲೆ ಚೀನಾದ ಖಾ’ಯಿಲೆ ನಿಯಮ ಉಲ್ಲಂಘನೆ ಆರೋಪದ ಮೇಲೆ ವಾಹಿನಿಯ ವಿರುದ್ಧ ಬ್ಯಾಟರಾಯನಪುರ ಪೋಲಿಸರು ಸ್ವಯಂ ಪ್ರೇರಿತ ದೂ’ರು ದಾಖಲಿಸಿಕೊಂಡಿದ್ದಾರೆ.. ಮೈಸೂರು ರಸ್ತೆಯ ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಜೀ ವಾಹಿನಿ ಸರಿಗಮಪ ಫಿನಾಲೆ ಆಯೋಜಿಸಲಾಗಿತ್ತು. ಈ ವೇಳೆ ಕೇವಲ ನೂರು ಮಂದಿಗೆ ಭಾಗವಹಿಸಲು ಮಾತ್ರ ಆಯೋಜಕರು ಅನುಮತಿ ಪಡೆದುಕೊಂಡಿದ್ದರು..

ಆದರೆ ನೂರಕ್ಕು ಅಧಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನೂ ಈ ಸಂದರ್ಬದಲ್ಲಿ ಮಾಸ್ಕ್ ದರಿಸದೆ, ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದು ಕಂಡುಬಂದಿದೆ.. ಈ ಕಾರಣಕ್ಕಾಗಿ ಸ್ವಯಂ ಪ್ರೇರಿತ ದೂ’ರು ದಾಖಲಿಸಿಕೊಂಡು ಏಪ್.ಐ.ಆರ್ ಸಿದ್ಧಪಡಿಸಿ ಕೋರ್ಟಿಗೆ ಸಲ್ಲಿಸಲಾಗಿದೆ. ಈ ವರದಿಯನ್ನು ಆಧರಿಸಿ ಕೋರ್ಟ್ ನೀಡುವ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.. ಈ ಘಟನೆ ಬಗ್ಗೆ ನೀವೇನಂತಿರಾ ಎಂದು ನಿಮ್ಮ ಅಭಿಪ್ರಾಯ ತಿಳಿಸಿ..