ನಮಸ್ತೆ ಸ್ನೇಹಿತರೆ, ಹಳ್ಳಿ ಜನರಲ್ಲಿ ಒಂದು ಮನಸ್ಥಿತಿ ಬೆಳೆದುಕೊಂಡಿದೆ. ಅವರು ಮಕ್ಕಳು ವ್ಯವಸಾಯ ಮಾಡುವುದು ಬೇಕಾಗಿಲ್ಲ ಬೆಂಗಳೂರಿನಲ್ಲಿ ಯಾವುದಾದರು ಕೆಲಸ ಮಾಡಬೇಕು ಆದರೆ ಬೆಂಗಳೂರಿಗೆ ಕೆಲಸ ಅರಿಸಿ ಬರುವ ಮಕ್ಕಳ ಪರಿಸ್ಥಿತಿ ಹೇಳತೀರದು.. ತಂದೆ ತಾಯಿ ಹೆತ್ತೂರಿನಿಂದ ದೂರ ಇರಬೇಕು, ಬೆಳಗ್ಗೆ ಎದ್ದು ಅಚ್ಚ ಹಸಿರು ನೋಡುವ ಬದಲು ನಗರದಲ್ಲಿ ದೂಳು ಕರ್ಕಶ ಶಬ್ದ ಕೇಳಬೇಕು. ತಾಯಿ ಮಾಡುವ ರುಚಿಕರ ಹಾಗು ಆರೋಗ್ಯಕರ ಊಟ ತಿನ್ನುವ ಬದಲು ರಸ್ತೆ ಪಕ್ಕದಲ್ಲಿ ಫಾ’ಮ್ ಆ’ಯಿಲ್ ಊಟ.. ಆತುರದಲ್ಲಿ ಮಾಡುವ ಗೊಜ್ಜು ತಿಂದು ಬೊಜ್ಜು ಬೆಳೆಸಿಕೊಳ್ಳಬೇಕು. ಕೊನೆಗೆ ಒಂದು ದಿನ ನನ್ನ ಜೀವನ ಇದೆನಾ ಅನಿಸಿಬಿಡಬೇಕು..

ಆದರೆ ಇವರು ಆಗೆ ಮಾಡಲಿಲ್ಲ. ಕೆಲಸವನ್ನು ತಿರಸ್ಕರಿಸಿ ಕಂಪನಿ ಸಿಇಓ ಗಳಿಸುವಷ್ಟು ಹಣ ಗಳಿಸುತ್ತಿದ್ದಾರೆ. ಅದು ಆರೊಗ್ಯದಿಂದ. ಇವರ ಹೆಸರು ಸತೀಶ್.. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಶಿರೂರು ಗ್ರಾಮದವರು. ಡಬಲ್ ಡಿಗ್ರಿ ಮಾಡಿರುವ ಸತೀಶ್ ಅವರಿಗೆ ಒಂದು ಕೆಲಸ ಸಿಕ್ಕಿತ್ತು.. ಆದರೆ ಅದಕ್ಕೆ 16 ಲಕ್ಷ ಲಂಚ ಕೊಡಬೆಕಾಗಿತ್ತು. ಸಾಲ ಮಾಡಿ ಹಣ ಕೊಟ್ಟು ಮಗನನ್ನು ಕೆಲಸಕ್ಕೆ ಸೇರಿಸಲು ಸತೀಶ್ ಅವರ ತಂದೆ ಸಿದ್ದರಾಗಿದ್ದರು. ಆದರೆ ಆ ಕೆಲಸ ಬೇಡ ಎಂದ ಸತೀಶ್ ಅವರು ತಮಗಿದ್ದ ಒಂದೂವರೆ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದರು.. ಸತೀಶ್ ಅವರು 15 ವರ್ಷದಿಂದ ತರಕಾರಿ ಬೆಳೆಯುತ್ತಿದ್ದರು.

ಆದರೆ ಇಳುವರಿ ಗುಣಮಟ್ಟ ಕ’ಳ’ಪೆ ಆಗಿದ್ದರಿಂದ ಆದಾಯ ಬರುತ್ತಿರಲಿಲ್ಲ. ವ್ಯವಸಾಯಕ್ಕೆ ಇಳಿದ ಸತೀಶ್ ಮೊದಲ ಒಂದಷ್ಟು ಬೆಳೆ ಹಾಗು ಮಾರುಕಟ್ಟೆಯ ಬಗ್ಗೆ ರೀಸರ್ಚ್ ಮಾಡಿ ಯಾವ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇದೆ ಎಂದು ತಿಳಿದುಕೊಂಡರು. ಅದರಂತೆ ಹಾಗಲಕಾಯಿ ಬೆಳೆಯಲು ಮುಂದಾಗಿ ತಮ್ಮ ಒಂದುವರೆ ಎಕರೆಯನ್ನು ತುಂ’ಡು’ಗಳಾಗಿ ಮಾಡಿಕೊಂಡು ವರ್ಷವಿಡೀ ಬೆಳೆಯಲು ಮುಂದಾದರು.. ಕೊನೆಗೂ ಹಾಗಲಕಾಯಿ ಬೆಳೆಯುವುದರಲ್ಲಿ ಯಶಸ್ಸು ಕಂಡಿರುವ ಸತೀಶ್ ಅವರು ಋತುವಿನಲ್ಲಿ 50 ಕ್ವಿಂಟಾಲ್ ಬೆಳೆಯುತ್ತಾರೆ.

ಕಳೆದ ವರ್ಷ 48 ಸಾವಿರಕ್ಕೆ ಒಂದು ಕ್ವಿಂಟಾಲ್ ಲೆಕ್ಕದಲ್ಲಿ ಮಾರಾಟ ಮಾಡಿದ್ದರು.. ಋತುಗಳಲ್ಲಿ ದಿನಕ್ಕೆ 35 ಸಾವಿರದ ವರೆಗೂ ಹಣ ಗಳಿಸುತ್ತಿದ್ದಾರೆ ಸತೀಶ್ ಅವರು.. ಹಾಗಲಕಾಯಿ ಹಲಾವರು ರೋ’ಗ’ಗಳಿಗೆ ರಾಮಬಾಣ. ಇತ್ತೀಚಿಗೆ ಜನ ಹೆಚ್ಚೆಚ್ಚು ತಿನ್ನುತ್ತಿದ್ದಾರೆ. ಹಾಗು ಇದನ್ನು ಔಷದಿಗೆ ಹೆಚ್ಚು ಬೆಳೆಸುತ್ತಾರೆ.. ಸಸಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಸತೀಶ್ ಅವರು ಅವುಗಳನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ. ಆಗಾಗಿ ಗುಣಮಟ್ಟದ ಇಳುವರಿ ಸಿಗುತ್ತದೆ.. ವ್ಯವಸಾಯದಿಂದ ಉತ್ತಮ ಹಾಗೂ ಸಂತೋಷದ ಜೀವನವನ್ನು ಕಟ್ಟಿಕೊಂಡಿರುವ ಸತೀಶ್ ಅವರು ವಯಸ್ಸಾಗಿರುವ ಪೋಷಕರನ್ನು ನೋಡಿಕೊಳ್ಳುತ್ತಾ ಆರ್ಥಿಕವಾಗಿ ಚೆನ್ನಾಗಿದ್ದು ಪ್ರಕೃತಿಯ ಮಡಿಲಲ್ಲಿ ಒಂದು ಬಂಗಲೆ ಮನೆಯನ್ನು ಕಟ್ಟಲು ಪ್ಲಾನ್ ಮಾಡುತ್ತಿದ್ದಾರೆ.