Advertisements

ಭಯಕಂರ ನಟನೆ ಮೂಲಕ ನೋಡುಗರಿಗೆ ಭಯ ಹುಟ್ಟಿಸುತ್ತಿದ್ದ ಈ ನಟ ಈಗ ಏನ್ ಮಾಡ್ತಿದ್ದಾರೆ ಗೊತ್ತಾ? ಮಗ ಕೂಡ ನಟ..

Cinema

ನಮಸ್ತೆ ಸ್ನೇಹಿತರೆ, 1996 ರಲ್ಲಿ ರಿಲೀಸ್ ಆದ ಪೋಲಿಸ್ ಸ್ಟೋರಿ ಸಿನಿಮಾ ಕನ್ನಡದ ಒಂದು ಅದ್ಬುತವಾದ ಆ್ಯಕ್ಷನ್ ಸಿನಿಮಾವಾಗಿತ್ತು.. ಸಾಹಸಮಯ ನಿರ್ದೇಶಕ ಥ್ರಿಲರ್ ಮಂಜು ಅವರು ಪೋಲಿಸ್ ಸ್ಟೋರಿ ಸಿನಿಮಾವನ್ನು ನಿರ್ದೇಶಿಸಿದ್ದರು. ಇನ್ನೂ ಈ ಸಿನಿಮಾದಲ್ಲಿ ಪೊಲಿಸ್ ಗೆಟಪ್ ನಲ್ಲಿ ಮಿಂಚಿದ ಸಾಯಿಕುಮಾರ್ ಅವರ ನಟನೆಯಂತು ಅಮೋಘವಾಗಿತ್ತು.. ಅದ್ಬುತವಾದ ಆ್ಯಕ್ಷನ್ ಮತ್ತು ಪಂಚಿಂಗ್ ಡೈಲಾಗ್ ಗಳಿಂದ ಕನ್ನಡದ ಪ್ರೇಕ್ಷಕರ ಗಮನ ಸೆಳೆದಿದ್ದರು. ಇನ್ನೂ ಈ ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್ ಏನೆಂದರೆ ವಿಲನ್ ಪಾತ್ರ.. ವಿಲನ್ ಪಾತ್ರದಲ್ಲಿ ನಟಿಸಿದವರು ಸತ್ಯ ಪ್ರಕಾಶ್.. ಮೊದಲಬಾರಿಗೆ ಕನ್ನಡ ಸಿನಿಮಾ ಮೂಲಕ ಬಣ್ಣ ಹಚ್ಚಿದರು.

Advertisements

ಇನ್ನೂ ಮೊದಲ ಪ್ರಯತ್ನದಲ್ಲೇ ಯಶಸ್ಸನ್ನು ಕಂಡ ಸತ್ಯ ಪ್ರಕಾಶ್ ಅವರು ನಂತರ ಬೇಡಿಕೆಯ ಖ’ಳನಾಯಕನಾಗಿ ಹೆಜ್ಜೆ ಹಾಕಿದರು.. ಸತ್ಯ ಪ್ರಕಾಶ್ ಅವರು ಮೂಲತಃ ಓರಿಸ್ಸಾದಿಂದ ಬಂದವರು. ಇವರು ನಟನೆಯಲ್ಲಿ ಮಾತ್ರವಲ್ಲದೇ ಓದಿನಲ್ಲೂ ಕೂಡ ಮುಂದಿದ್ದರು. ಒರಿಸ್ಸಾದಿಂದ ಕೋಲ್ಕತಾ ಗೆ ಹೋಗಿ ಅಲ್ಲಿ ಎಮ್ ಬಿಎ ಮುಗಿಸಿದ್ದರು.. ನಂತರ ದಿನಗಳಲ್ಲಿ ಬ್ಯಾಂಕ್ ಮತ್ತು ಇತರ ಕೆಲಸಗಳನ್ನು ಮಾಡಿದ ಇವರಿಗೆ ಇನ್ನೊಂದು ಕನಸಿತ್ತು.. ಅದೇನೆಂದರೆ ನಾನೊಬ್ಬ ಉತ್ತಮ ನಟನಾಗಬೇಕು ಎನ್ನುವುದು. ಚಿಕ್ಕಂದಿನಿಂದಲೂ ಅಮಿತಾ ಬಚನ್ ಸಿನಿಮಾಗಳನ್ನು ನೋಡುತ್ತಾ ಬೆಳೆದ ಸತ್ಯ ಪ್ರಕಾಶ್ ಅವರಿಗೆ ನಾನು ಕೂಡ ಅವರಂತೆ ನಟಿಸಿಬೇಕೆಂಬ ಆಸೆ ಇತ್ತು..

ಅದರಂತೆ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಚೆನ್ನೈಗೆ ಬಂದ ಸತ್ಯ ಪ್ರಕಾಶ್ ಸತತ 5 ವರ್ಷಗಳ ಕಾಲ ಸಿನಿಮಾಗಳಲ್ಲಿ ಅವಕಾಶ ಪಡೆಯಲು ಪರದಾಡುತ್ತಿದ್ದರು.. ನಂತರ ಹೇಗೋ ಕಷ್ಟಪಟ್ಟು ತೆಲುಗು, ತಮಿಳು ಬಾಷೆಯನ್ನು ಕಲಿಯುತ್ತಾರೆ.. ಆದರೆ ಅಲ್ಲಿ ಒಂದು ಚಿಕ್ಕ ಪಾತ್ರವೂ ಸಹ ಸತ್ಯ ಪ್ರಕಾಶ್ ಅವರಿಗೆ ದಕ್ಕಲಿಲ್ಲ. ಆದರೆ ಹೇಗೋ ಥ್ರಿಲರ್ ಮಂಜು ಅವರ ಕಣ್ಣಿಗೆ ಬಿದ್ದ ಸತ್ಯ ಪ್ರಕಾಶ್ ಅವರಿಗೆ ಪೋಲಿಸ್ ಸ್ಟೋರಿ ಚಿತ್ರದಲ್ಲಿ ಖಳ ನಾಯಕನಾಗಿ ನಟಿಸಲು ಅವಕಾಶ ಕೊಡುತ್ತಾರೆ. ಥ್ರಿಲ್ಲರ್  ಮಂಜು ಅವರ ನಂಬಿಕೆಯಂತೆ ಪಾತ್ರದಲ್ಲಿ ಅದ್ಬುತವಾಗಿ ನಟಿಸುವ ಮೂಲಕ ಸತ್ಯ ಪ್ರಕಾಶ್ ಅವರು ಪ್ರಶಂಸೆ ಪಡೆದಿದ್ದರು..

ನಂತರ ಇವರ ನಟನೆಯನ್ನು ನೋಡಿದ ತಮಿಳು ಮಾತ್ರ ತೆಲುಗು ಚಿತ್ರರಂಗ ಇವರಿಗೆ ಅವಕಾಶ ಕೊಡುತ್ತಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಭೋಜಪುರಿ, ಬೆಂಗಾಳಿ, ಓರಿಸ್ಸಾ ಈಗೆ ಹತ್ತು ಭಾಷೆಗಳಲ್ಲಿ ಸುಮಾರು 540 ಚಿತ್ರಗಳಲ್ಲಿ ಸತ್ಯ ಪ್ರಕಾಶ್ ಅವರು ನಟಿಸಿದ್ದಾರೆ.. ಕನ್ನಡ, ತೆಲುಗು, ತಮಿಳಿನ ದೊಡ್ಡ  ದೊಡ್ಡ ಸ್ಟಾರ್ ನಟರ ಜೊತೆ ಹೆಜ್ಜೆ ಹಾಕಿದ ಸತ್ಯ ಪ್ರಕಾಶ್ ಕೇವಲ ನಟ ಮಾತ್ರವಲ್ಲದೇ ನಿರ್ದೇಶಕರಾಗಿ, ನಿರ್ಮಾಪಕರಾಗಿ ಸಹ ಗುರುತಿಸಿಕೊಂಡಿದ್ದಾರೆ.. ಪ್ರಸ್ತುತ ತನ್ನ ಮಗ ನಟರಾಜ್ ಅವರಿಗೆ ಉಲ್ಲಾಲ ಉಲ್ಲಾಲ ಎಂಬ ತೆಲುಗು ಸಿನಿಮಾದ ನಿರ್ದೇಶನ ಮಾಡಿದ್ದಾರೆ ಸತ್ಯ ಪ್ರಕಾಶ್.. ಇವರು ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರ ಗಿರಗಿಟ್ಲೆ. ಇವರ ನಟನೆಯನ್ನು ನೀವು ನೋಡಿದ್ದರೆ, ಇವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.