ನಮಸ್ತೆ ಸ್ನೇಹಿತರೆ, ಈ ನಟಿ ಕಿರುತೆರೆ ಲೋಕಕ್ಕೆ ಕಾಲಿಟ್ಟು ವರ್ಷಗಳಾದರು ಕೂಡ ಇವರು ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿದ್ದು ಸತ್ಯ ಧಾರವಾಹಿಯಲ್ಲಿ.. ಇದರಲ್ಲಿ ಸತ್ಯ ಎನ್ನುವ ಪಾತ್ರದ ಮೂಲಕ ತುಂಬಾನೆ ಪೇಮಸ್ ಆಗಿದ್ದಾರೆ. ಈಕೆ ನಿಜವಾದ ಹೆಸರು ಗೌತಮಿ. ಇದೊಂದು ಮಹಿಳಾ ಪ್ರಧಾನ ಧಾರವಾಹಿ ಆಗಿದೆ.. ನೋಡಲು ಮಾತ್ರ ಗಂಡಿನಂತೆ ಇರುವುದಲ್ಲ ಮನೆಯ ಕೆಲಸಗಳಿಗೆ, ಕಷ್ಟಗಳಿಗೆ ಗಂಡು ಮಗನಂತೆ ಹೆಗಲು ಕೊಟ್ಟು ಮುಂದೆ ಸಾಗುವವರು ಈ ಸತ್ಯ. ತಾನು ಕಷ್ಟ ಪಟ್ಟರು ತನ್ನ ಕುಟುಂಬ ಚೆನ್ನಾಗಿರಬೇಕಂದು ಕನಸು ಕಾಣುವ ಹೆಣ್ಣು ಮಗಳು ಈ ಸತ್ಯ.. ಧಾರವಾಹಿ ಆರಂಭವಾಗಿ ಕೆಲವೇ ಕೆಲವು ದಿನಗಳಲ್ಲಿ ನಂಬರ್ ಒನ್ ಸ್ಥಾನಕ್ಕೆ ನಿಂತಿತ್ತು. ಎಲ್ಲಾ ಧಾರವಾಹಿಗಳನ್ನ ಹಿಂದಿಕ್ಕಿ ನಂಬರ್ ಒನ್ ಧಾರವಾಹಿಯಾಗಿತ್ತು..

ಇದರಲ್ಲಿ ದೊಡ್ಡ ಸ್ಟಾರ್ ಬಳಗವೇ ಇದೆ. ಡಿಗ್ರಿ ಮುಗಿಸಿ ಪ್ಯಾಷನ್ ಡಿಸೈನಿಂಗ್ ಕೋರ್ಸ್ ಮಾಡುತ್ತಿದ್ದ ಗೌತಮಿ ಅವರಿಗೆ ನಾಗ ಪಂಚಮಿ ಧಾರವಾಹಿಯ ಮೂಲಕ ಇವರು ಮೊದಲು ಬಣ್ಣ ಹಚ್ಚಿದರು.. ಇದಾದ ಬಳಿಕ 8 ವರ್ಷಗಳ ನಂತರ ಸತ್ಯ ಧಾರವಾಹಿಯ ಮೂಲಕ ಇವರಿಗೆ ಇನ್ನೊಂದು ಅವಕಾಶ ಸಿಕ್ಕಿದೆ. ಇನ್ನೂ ಗೌತಮಿ ಅವರ ಪತಿಯೂ ಕೂಡ ತುಂಬಾನೆ ಪೇಮಸ್. ಹಾಗೆ ಇವರ ಮಾವ ಕೂಡ ಪೇಮಸ್ ಆದಂತಹವರು.. ತುಂಬಾ ಜನರಿಗೆ ಇವರು ಮದುವೆಯಾಗಿದ್ದಾರೆ ಎಂಬ ವಿಷಯಾನೆ ತಿಳಿದಿಲ್ಲ. ಇವರ ಪತಿಯ ಹೆಸರು ಅಭಿಷೇಕ್.. ಸಿನಿಮಾ ರಂಗದಲ್ಲಿ ಕ್ಯಾಮರಾ ಮ್ಯಾನ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ.

ಅನೇಕ ಸಿನಿಮಾಗಳಿಗೆ ಕ್ಯಾಮರ ಮ್ಯಾನ್ ಆಗಿ ಹೆಸರುವಾಸಿಯಾಗಿದ್ದಾರೆ. ಇನ್ನೂ ಇವರ ಮಾವ.. ಅಂದರೆ ಅಭಿಷೇಕ್ ಅವರ ತಂದೆ ಗಣೇಶ್. ಇವರು ಕೂಡ ಸಿನಿಮಾ ಪತ್ರಕರ್ತರು.. ಇದುವರೆಗೂ ಸಿನಿಮಾಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಗಣೇಶ್ ಅವರು ಬರೆದಿದ್ದಾರೆ. ಇತ್ತೀಚಿಗೆ ಬಂದಿರುವ 25 ನೇ ಪುಸ್ತಕ ಶುಭಂ ಪುಸ್ತಕಕ್ಕೆ ಬಾರಿ ಬೇಡಿಕೆ ಇದೆ.. 900 ಪುಟಗಳ ಪುಸ್ತಕ ಇದಾಗಿದ್ದು ಚಿತ್ರರಂಗದ ಅನೇಕ ಸ್ವಾರಸ್ಯಕರ ವಿಚಾರಗಳನ್ನ ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಗೌತಮಿ ಅವರ ಮಾವ ಸಿನಿಮಾ ಪತ್ರಕರ್ತರಾಗಿದ್ದರೆ ಪತಿ ಕ್ಯಾಮರಾ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ.. ಇಡೀ ಕುಟುಂಬವೇ ಕಲಾ ವಿಭಾಗದ ಕಡೆಗೆ ಹೊಲವನ್ನು ತೋರಿಸಿದ್ದಾರೆ.