Advertisements

ನನ್ನ ಇಂದಿನ ಈ ಪರಿಸ್ಥಿತಿಗೆ ತನ್ನ ಮುದ್ದಿನ ಮಗಳೇ ಕಾರಣ ಎಂದು ಕಣ್ಣೀರಿಟ್ಟ ಖ್ಯಾತ ನಟ !

Cinema

ನಮಸ್ತೇ ಸ್ನೇಹಿತರೇ, ಸಿನಿಮಾ ರಂಗದ ಕಲಾವಿದರೂ ಎಂದರೆ ಥಟ್ಟನೆ ನಮ್ಮ ಮನಸ್ಸಿನಲ್ಲಿ ಮೂಡುವುದು, ಅವರು ವೈಭವೋಪೇತ ಜೀವನ ನಡೆಸುತ್ತಾರೆ ಎಂದು. ಆದರೆ ಎಲ್ಲಾ ಕಲಾವಿದರ ಜೀವನ ಹಾಗೆಯೇ ಇರುವುದಿಲ್ಲ. ದೊಡ್ಡ ಪರದೆಯ ಮೇಲೆ ವಿಜೃಂಭಿಸುವ, ನಕ್ಕು ನಗಿಸುವ ಕಲಾವಿದರು ಅವರ ನಿಜ ಜೀವನವನದಲ್ಲಿ ಮಾತ್ರ ಸಾಕಷ್ಟು ಕಷ್ಟಗಳಿಗೆ ಒಳಗಾಗಿರುತ್ತಾರೆ. ಹೌದು, ತಮ್ಮ ವಿಲನ್ ಹಾಗೂ ಹಾಸ್ಯ ಪಾತ್ರಗಳಿಂದ ಕನ್ನಡಿಗರ ಮನದಲ್ಲಿ ಹಚ್ಚಹಸಿರಾಗಿ ಉಳಿದಿರುವ ನಟ ಸತ್ಯಜಿತ್. ವಿಲನ್ ಆಗಿ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟು ಹೀರೋಗಳ ಮುಂದೆ ತೊಡೆ ತಟ್ಟಿದ್ದ ಈ ನಟನ ವೈಯುಕ್ತಿಕ ಜೀವನ ಮಾತ್ರ ನಿವಿನ್ ಕತೆಯಾಗಿದೆ..ನಾನು ಜೀವನದಲ್ಲಿ ಸಂತೋಷವನ್ನೂ ಕಂಡಿದ್ದೇನೆ ಅಷ್ಟೇ ದುಃಖವನ್ನೂ ಸಹ ಅನುಭವಿಸಿದ್ದೇನೆ ಎಂದು ಭಾವನಾತ್ಮಕವಾಗಿ ತಮ್ಮ ಜೀವನದ ಕಷ್ಟ ನೋವುಗಳ ಬಗ್ಗೆ ಹಂಚಿಕೊಂಡಿದ್ದಾರೆ ನಟ ಸತ್ಯಜಿತ್.

ನಾನು ೩೭ ವರ್ಷಗಳ ಹಿಂದೆ ಹುಬ್ಬಳ್ಳಿ ಬಿಟ್ಟು ಬೆಂಗಳುರಿಗೆ ಬಂದೆ. KSRTC ಡ್ರೈವರ್ ಆಗಿ ಮಾಡಿದ ನಾನು, ಅದರಿಂದ ಬರುತ್ತಿದ್ದ ೫೦೦ರೂಪಾಯಿ ಸಂಬಳದಲ್ಲಿ ಜೀವನ ನಡೆಸುತ್ತಿದ್ದೆ. ನನಗೆ ಎರಡು ಗಂಡು ಹಾಗೂ ಒಂದು ಹೆಣ್ಣು ಸೇರಿ ಮೂವರು ಮಕ್ಕಳಿದ್ದಾರೆ. ಇನ್ನು ನಾನು ಬಾಲಿವುಡ್ ನ ಹಿಂದಿಯ ಅಂಕುಶ್ ಚಿತ್ರದಲ್ಲಿ ನಟಿಸಿದ್ದು ಆ ಚಿತ್ರ ಸೂಪರ್ ಹಿಟ್ ಕಂಡಿತ್ತು. ಇನ್ನು ಆ ಚಿತ್ರದಲ್ಲಿನ ನನ್ನ ಪಾತ್ರ ನೋಡಿ ಸ್ಯಾಂಡಲ್ವುಡ್ ನಲ್ಲಿ ಖಳ ನಾಯಕನಾಗಿ ನಟಿಸುವ ಅವಕಾಶಗಳು ನನಗೆ ದೊರೆತವು. ಇನ್ನು ನನ್ನ ಮಗ ಕೂಡ ಸಿನಿಮಾದಲ್ಲಿ ನಟಿಸಿದ್ದು, ಆದರೆ ಈಗ ವ್ಯವಹಾರವೊಂದನ್ನ ಮಾಡುತ್ತಿದ್ದಾನೆ ಎಂದು ತನ್ನ ಮಗನ ಬಗ್ಗೆ ನಟ ಸತ್ಯಜಿತ್ ಹೇಳಿಕೊಂಡಿದ್ದಾರೆ.

Advertisements

ಇನ್ನು ಮಗಳು ಎಂದರೆ ತಂದೆಗೆ ವಿಶೇಷ ಪ್ರೀತಿ ಅಲ್ಲವೇ. ತನ್ನ ಮಗಳು ಫೈಲಟ್ ಆಗಬೇಕೆಂದು ಕನಸು ಕಂಡಿದ್ದ ನಾಟಿಗ ಸತ್ಯಜಿತ್ ಅವರು, ಅದಕ್ಕಾಗಿ ಲಕ್ಷಾಂತರ ಹಣ ಖರ್ಚು ಮಾಡಿ ತರಭೇತಿಯನ್ನ ಸಹ ಕೊಡಿಸಿದ್ರು. ಇನ್ನು ಇದಲ್ಲದೆ ಫಲವಾಗಿ ಎರಡೆಕ್ಕನ್ ವಿಮಾನ ಯಾನ ಸಂಸ್ಥೆಯಲ್ಲಿ ಮಗಳಿಗೆ ಕೆಲಸ ಸಿಕ್ಕಿತು. ಇನ್ನು ಸತ್ಯಜಿತ್ ಅವರ ಆಪ್ತ ಸ್ನೇಹಿತರೊಬ್ಬರು ಸಹ ಅದೇ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಅವರ ಬಳಿಯೇ ಸತ್ಯಜಿತ್ ಅವರ ಮಗಳು ಕೂಡ ಕೆಲಸ ಮಾಡಬೇಕಿತ್ತು. ಇನ್ನು ಈ ವಿಷಯವನ್ನ ನಟ ಸತ್ಯಜಿತ್ ಅವರ ಮಗಳು ತಾನು ಯಾರೆಂಬುದನ್ನ ಅವರ ಬಳಿ ಹೇಳಿದ್ದಾರೆ. ಬಳಿಕ ಸತ್ಯಜಿತ್ ಅವರಿಗೆ ಫೋನ್ ಮಾಡಿದ್ದ ಅವರ ಸ್ನೇಹಿತ ನಿಮ್ಮ ಮಗಳು ಒಳ್ಳೆಯ ಅಂಕಗಳನ್ನೇ ತೆಗೆದಿದ್ದಾರೆ, ಆದರೆ ಅವರನ್ನ ಫೈಲಟ್ ಮಾಡುವುದನ್ನ ಬಿಟ್ಟು ಈ ಕೆಲಸಕ್ಕೆ ಸೇರಿಸಿದ್ದೀರಾ ಎಂದು ಕೇಳುತ್ತಾರೆ. ಇನ್ನು ಏನೇ ಆದರೂ ಸರಿಯೇ ತನ್ನ ಮಗಳನಂ ಫೈಲಟ್ ಮಾಡಿಯೇ ತೀರಬೇಕು ಎಂದು ನಿರ್ಧಾರ ಮಾಡಿದ ಸತ್ಯಜಿತ್, ಬ್ಯಾಂಕ್ ನಲ್ಲಿ ಲೋನ್ ಮಾಡಿ ಫೈಲಟ್ ಆಗಲು ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನ ಮಾಡಿಕೊಡುತ್ತಾರೆ.

ಇನ್ನು ಮಗಳು ಸಹ ಪರೀಕ್ಷೆಯಲ್ಲಿ ಪಾಸಾಗಿದ್ದು ಅವರಿಗೆ ಪೈಲಟ್ ಕೆಲಸ ಕೂಡ ಸಿಗುತ್ತದೆ. ಆದರೆ ಅದೇ ಕೆಲಸಕ್ಕೆ ೫೪ ಲಕ್ಷ ಹಣ ಕಟ್ಟಬೇಕಾಗುತ್ತದೆ. ಮಗಳಿಗಾಗಿ ಅದನ್ನೂ ಕೂಡ ಮಾಡುತ್ತಾರೆ. ಇನ್ನು ಬ್ಯಾಂಕ್ ನಲ್ಲಿ ಮಾಡಿದ ಲೋನ್ ಸಾಲ ತೀರಿಸಬೇಕಲ್ಲವಾ..ಆಗ ತಾವೇ ಕಟ್ಟಿದ್ದ ,ಮನೆಯನ್ನ ೬೨ ಲಕ್ಷಕ್ಕೆ ಮಾರಿ ಸಾಲ ತೀರಿಸುತ್ತಾರೆ. ಆದರೆ ಇದಾದ ಬಳಿಕ ಅವರ ದುರಾದ್ರಷ್ಟವೆಂಬಂತೆ ಅವರ ಆರೋಗ್ಯದಲ್ಲಿ ಆದ ಬದಲಾವಣೆಯಿಂದ ಅವರ ಕಾಲನ್ನ ತೆ’ಗೆಯಬೇಕಾಗುತ್ತದೆ. ಇದರಿಂದ ಅವರಿಗೂಯೂ ಕೂಡ ಸಿನಿಮಾದಲ್ಲಿ ನಟಿಸುವ ಅವಕಾಶಗಳು ನಿಂತುಹೋಗಿ ಆಧಾಯವೂ ಕೂಡ ನಿಂತು ಹೋಗಿ, ಜೀವನ ನಡೆಸುವುದೇ ಕಷ್ಟವಾಗುತ್ತದೆ. ಆದರೆ ಇದರ ನಡುವೆಯೂ ತನ್ನ ಮಗಳು ಪೈಲಟ್ ಆಗಿ ಕೆಲಸ ಮಾಡುವುದನ್ನ ಕಂಡು ನನಗೆ ಹೆಮ್ಮೆ ಆಗುತ್ತಿತ್ತು ಎಂದು ಸತ್ಯಜಿತ್ ಅವರು ಹೇಳಿದ್ದಾರೆ.

ಇನ್ನು ಎಲ್ಲವೂ ಚೆನ್ನಾಗಿಯೇ ಹೋಗುತಿತ್ತು. ಇದರ ನಡುವೆಯೇ ಕಾರವಾರದ ತೌಸಿಫ್ ಎಂಬುವವರನ್ನ ಸತ್ಯ ಜಿತ್ ಅವರ ಮಗಳು ಪ್ರೀತಿ ಮಾಡುತ್ತಾಳೆ. ಇನ್ನು ಈ ವಿಷಯವನ್ನ ಮಗಳು ಬಂದು ತಂದೆ ಸತ್ಯಜಿತ್ ಅವರ ಬಳಿ ಹೇಳಿಕೊಳ್ಳುತ್ತಾಳೆ. ಇನ್ನು ಸತ್ಯಜಿತ್ ಅವರು ಕೂಡ ಪ್ರೀತಿಸುತ್ತಿದ್ದ ಮಗಳ ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಾರೆ. ಆದರೆ ತೌಸಿಫ್ ನ ಲೆಕ್ಕಾಚಾರ ಬೇರೆಯೇ ಇತ್ತು. ಮನೆ ಮಾರಿದ್ದಾರೆ. ಬಹಳಷ್ಟು ಹಣ ಇದೆ. ಜೀವನದಲ್ಲಿ ಸೆಟಲ್ ಆಗಬಹುದು ಎಂದು. ಆದರೆ ಇದೆಲ್ಲದರ ಬಗ್ಗೆ ಆಕೆಗೆ ಅವರ ಕುಟುಂದವರು ತಿಳಿ ಹೇಳಿದ್ರೂ ಸಹ ಪ್ರೀತಿಯ ಗುಂಗಿನಲ್ಲಿದ್ದ ಆಕೆಗೆ ಇದ್ಯಾವುದೂ ಅರ್ಥವಾಗಲಿಲ್ಲ. ನಾನು ಮದುವೆಯಾದ್ರೆ ಆತನನ್ನೇ ಮದುವೆಯಾಗೇಬೇಕೆಂದು ಹಠ ಹಿಡಿದ್ಲು. ಸತ್ಯಜಿತ್ ಅವರು ತನ್ನ ಮಗಳು ಪ್ರೀತಿಸಿದವನೊಂದಿಗೆ ಮದುವೆ ಮಾಡಿಕೊಟ್ಟರು.

ಆದರೆ ಸತ್ಯಜಿತ್ ಅವರು ತನ್ನ ಗಂಡು ಮಕ್ಕಳನ್ನ ಬಿಟ್ಟು, ಮಗಳ ವಿದ್ಯಾಭ್ಯಾಸಕ್ಕಾಗಿ ಆಕೆಯ ಕೆಲಸಕ್ಕಾಗಿ ಮನೆಯನ್ನೇ ಮಾರಿ ಓಡಿಸಿದ್ದರೂ ಸಹ ಮಗಳು ತನ್ನ ಮದುವೆಯಾದ ಬಳಿಕ ತನ್ನ ತಂದೆ ತಾಯಿಗಳ ಜವಾಬ್ದಾರಿಯನ್ನೇ ಮರೆತುಬಿಟ್ಟಳು. ಯಾವುದೇ ರೀತಿಯಲ್ಲಿ ತನ್ನ ತಂದೆಯ ಸಹಾಯಕ್ಕಾಗಿ ಬರಲಿಲ್ಲ. ಮಗಳು ಮಾತ್ರ ತನಗೆ ಬರುತ್ತಿದ್ದ ಸಂಬಳದಲ್ಲಿ ಕಾರು, ಲೋನ್ ಅಂತೆಲ್ಲಾ ತೆಗೆದುಕೊಂಡು ವೈಭವೋಪೇತವಾಗಿ ಜೀವನ ನಡೆಸುತ್ತಿದ್ದರು. ತನ್ನ ತಂದೆ ತನಗಾಗಿ ತನ್ನ ಮನೆಯನ್ನೇ ಮಾರಿ, ನನ್ನ ಕನಸುಗಳನ್ನ ಸಾಕಾರಗೊಳಿಸಿದ್ದಾರೆ ಎಂಬ ಕಿಂಚಿತ್ ಕರುಣೆ ಕೂಡ ಇಲ್ಲದ ಮಗಳು ತಂದೆ ತಾಯಿಯನ್ನೇ ದೂರ ಮಾಡುತ್ತಾಳೆ. ಹೀಗೆ ಮಗಳಿಗಾಗಿ ಎಲ್ಲವನ್ನೂ ಕಳೆದುಕೊಂಡ ಸತ್ಯಜಿತ್ ಪಡಬಾರದ ಕಷ್ಟಗಳನ್ನ ಪಡುತ್ತಾರೆ. ಯಾವ ಮಕ್ಕಳೂ ಷ ತಂದೆ ತಾಯಿಗಳಿಗೆ ಈ ರೀತಿಯಾಗಿ ಮೋಸ ಮಾಡಬಾರದು ಎಂದು ಸತ್ಯಜಿತ್ ಅವರು ಕಣ್ಣೀರಿಡುತ್ತಾ ತಮ್ಮ ಕಷ್ಟವನ್ನ ಹೇಳಿಕೊಂಡಿದ್ದಾರೆ.