Advertisements

ಒಂದೇ ನಿಮಿಷದಲ್ಲಿ ಬ್ಯಾಂಕಿನಲ್ಲಿ ಇದ್ದವರೆಲ್ಲಾ ಬೆಚ್ಚಿ ಬೀಳುವಂತೆ ಮಾಡಿದ ಅಜ್ಜಿ.. ಮಾಡಿದ್ದೇನು ಗೊತ್ತಾ?

Kannada Mahiti

ನಮಸ್ತೆ ಸ್ನೇಹಿತರೆ, ಸಾವಿತ್ರಮ್ಮ ಎಂಬ ಒಬ್ಬ ವಯಸ್ಸಾದ ಅಜ್ಜಿ ತನ್ನ ಅಕೌಂಟ್ ನಲ್ಲಿ ಇರುವ ದುಡ್ಡು ತೆಗೆಯಲು ಒಂದು ಬಾರಿ ಬ್ಯಾಂಕಿಗೆ ಬಂದಿದ್ರು.. ಬ್ಯಾಂಕಿಗೆ ಬಂದಿದ್ದ ಸಾವಿತ್ರಮ್ಮ ಅವರು ತಾನು ತಂದಿದ್ದ ಚೆಕ್ ಬುಕ್ ನಲ್ಲಿ 500 ರೂಪಾಯಿ ಎಂದು ಬರೆದು ಬ್ಯಾಂಕ್ ಕ್ಯಾಷಿಯರ್ ಕೈಗೆ ಕೊಟ್ಟರು.. ಕ್ಯಾಷಿಯರ್ ಕೈಗೆ ಆ ಚೆಕ್ ಕೊಟ್ಟು 500 ರೂಪಾಯಿ ಕೊಡಿ ಅಂಥ ಸಾವಿತ್ರಮ್ಮ ಹೇಳ್ತಾರೆ.. ಚೆಕ್ ತೆಗೆದುಕೊಂಡು ನೋಡಿದ ಬ್ಯಾಂಕ್ ಕ್ಯಾಶಿಯರ್. ಆ ಕ್ಯಾಶಿಯರ್ ಕೂಡ ಒಬ್ಬ ಮಹಿಳೆ.. ಅಜ್ಜಿ ಕೇವಲ 500 ರುಪಾಯಿ ಹಣಕ್ಕಾಗಿ ಈ ರೀತಿ ಚೆಕ್ ಬರೆದಿದ್ದಿರಲ್ವಾ. 500 ರೂಪಾಯಿ ಬೆಕಾಗಿದ್ದಾರೆ ಹೊರಗಡೆ ಇರುವ ಏಟಿಎಮ್ ನಲ್ಲೆ ತೆಗೆದುಕೊಳ್ಳಬಹುದು ಅದಕ್ಕೆ ಯಾಕೇ 500 ರೂಪಾಯಿ ಚೆಕ್ ಬರೆದು ನಮ್ಮ ಕೈಗೆ ಕೊಟ್ಟು ನಮ್ಮ ಸಮಯ ವೇಸ್ಟ್ ಮಾಡುತ್ತಿದ್ದೀರಾ ನೋಡಿ. ನಿಮ್ಮ ಹಿಂದೆ ಎಷ್ಟು ಜನ ಕಾಯುತ್ತಿದ್ದಾರೆ ಎಂದು ಕೋಪದಿಂದ ಆ ಕ್ಯಾಶಿಯರ್ ಮಹಿಳೆ ಎಟಿಎಮ್ ನಲ್ಲಿ ಹೋಗಿ ತೆಗೆದುಕೊಳ್ಳಿ ಎಂದು ಚೆಕ್ ಅನ್ನು ವಾಪಸ್ ಸಾವಿತ್ರಮ್ಮಾಗೆ ಕೊಡ್ತಾರೆ..

Advertisements

ಆಗ ಸಾವಿತ್ರಮ್ಮ ಯಾಕೆ ಈ ರೀತಿ ಹೇಳ್ತಿದ್ದೀರಾ ಎಂದು ಮರುಪ್ರಶ್ನೆ ಮಾಡ್ತಾರೆ. ನಮ್ಮ ಬ್ಯಾಂಕ್ ರೂಲ್ಸ್ ಪ್ರಕಾರ 5 ಸಾವಿರ ರೂಪಾಯಿಗಿಂತ ಕಡಿಮೆ ಹಣ ಡ್ರಾ ಮಾಡಬೇಕಾದ್ರೆ ನೀವು ಏಟಿಎಮ್ ಕಾರ್ಡ್ ಬಳಸಿ ತೆಗೆದುಕೊಳ್ಳಬೇಕು. ಇಲ್ಲಿ ನಿಮಗೆ ಹಣ ಕೋಡೊದಕ್ಕೆ ಆಗಲ್ಲ.. ಬೇರೆ ಏನಾದ್ರು ವಿಷಯ ಇದ್ರೆ ಇಲ್ಲಿ ನಿಂತ್ಕೋಳಿ. ಇಲ್ಲ ಅಂದರೆ ಬ್ಯಾಂಕಿನಿಂದ ಜಾಗ ಖಾಲಿ ಮಾಡಿ ನನಗೆ ತುಂಬಾ ಕೆಲಸ ಇದೆ ಎಂದು ಆ ಕ್ಯಾಶಿಯರ್ ಮಹಿಳೆ ಸಾವಿತ್ರಮ್ಮಾಗೆ ಗದರಿದಳು.. ಕ್ಯಾಶಿಯರ್ ಹೇಳಿದ ಮಾತನ್ನು ಕೇಳಿ ಸಾವಿತ್ರಮ್ಮ ಅವರಿಗೆ ತುಂಬಾ ಕೋಪ ಬಂತು. ಆದರೆ ತನ್ನ ಕೋಪವನ್ನು ಹೊರಗಡೆ ತೋರಿಸದೇ ಮತ್ತೊಂದು ಚೆಕ್ ಬರೆದು ಪುನಃ ಕ್ಯಾಶಿಯರ್ ಗೆ ಕೊಟ್ಟು ದಯವಿಟ್ಟು ನನ್ನ ಅಕೌಂಟ್ ನಲ್ಲಿ ಇರುವ ಸಂಪೂರ್ಣ ಹಣವನ್ನೆಲ್ಲಾ ನನಗೆ ವಾಪಸ್ ಕೊಟ್ಟುಬಿಡಿ ಎಂದು ಸಾವಿತ್ರಮ್ಮ ಹೇಳಿದರು..

ಈಗ ಆ ಕ್ಯಾಶಿಯರ್ ಮಹಿಳೆ ಅಜ್ಜಿ ಹತ್ತಿರ ಚೆಕ್ ತೆಗೆದುಕೊಂಡು ನೋಡಿದ್ರೆ ಅದರಲ್ಲಿ ಅಜ್ಜಿ ಅಕೌಂಟ್ ಓಪನ್ ಮಾಡಿ ಬ್ಯಾಲೆನ್ಸ್ ಹಣದ ಮೊತ್ತ ನೋಡಿ ಕ್ಯಾಶಿಯರ್ ಶಾಕ್ ಆಗಿಬಿಟ್ಳು.. ಏಕೆಂದರೆ ಸಾವಿತ್ರಮ್ಮ ಅಜ್ಜಿಯ ಅಕೌಂಟ್ ನಲ್ಲಿ ಬರೋಬ್ಬರಿ 5 ಕೋಟಿ ರುಪಾಯಿ ಹಣ ಇತ್ತು. ಇಷ್ಟೊಂದು ಹಣ ಇರೋದು ನೋಡಿ ಗಾಬರಿಯಿಂದ ಅಜ್ಜಿ ನಿಮ್ಮ ಅಕೌಂಟ್ ನಲ್ಲಿ 5 ಕೋಟಿ ಹಣ ಇದೆ ದಯವಿಟ್ಟು ನನ್ನನ್ನು ಕ್ಷಮಿಸಿ.. ಗೊತ್ತಾಗದೇ ನಿಮ್ಮ ಬಳಿ ಕೋಪದಿಂದ ಮಾತನಾಡಿದೆ. ಈಗ ನೀವು ಕೇಳ್ತಿರುವ ಹಣ ನಮ್ಮ ಬ್ಯಾಂಕಿನಲ್ಲಿ ಇಲ್ಲಾ.. ಅದಕ್ಕಾಗಿ ನಾಳೆ ಸಂಜೆ ನೀವು ಬಂದರೆ ನೀವು ಕೇಳುತ್ತಿರುವ ಹಣವನ್ನು ತೆಗೆದುಕೊಂಡು ಹೋಗಬಹುದು ಎಂದು ಕ್ಯಾಶಿಯರ್ ಹೇಳ್ತಾರೆ.. ಆಗ ಸಾವಿತ್ರಮ್ಮ ಹೋಗಲಿ ಬಿಡಿ ಈಗ ನನ್ನ ಅಕೌಂಟ್ ನಿಂದ ನಾನು ಎಷ್ಟು ಡ್ರಾ ಮಾಡಬಹುದು ಅದನ್ನಾದ್ರು ಹೇಳಿ ಎಂದು ಹೇಳಿದರು. ಕ್ಯಾಶಿಯರ್ ಮಹಿಳೆ ಅಜ್ಜಿ ನೀವು ಈಗ 5 ಲಕ್ಷದವರೆಗೆ ಹಣ ಡ್ರಾ ಮಾಡಬಹುದು ಎಂದು ಹೇಳಿದರು.. ಕೂಡಲೇ ಸಾವಿತ್ರಮ್ಮ ಮತ್ತೊಂದು 5 ಲಕ್ಷ ರೂಪಾಯಿಗೆ ಚೆಕ್ ಬರೆದು ಕ್ಯಾಶಿಯರ್ ಗೆ ಕೊಟ್ಟಿದ್ದಾರೆ.

ಆಗ ಆ ಕ್ಯಾಶಿಯರ್ ಅಜ್ಜಿಯ ಬಳಿ 5 ಲಕ್ಷದ ಚೆಕ್ ಪಡೆದು ತುಂಬಾ ಸಮಾಧಾನದಿಂದ 5 ಲಕ್ಷ ಹಣವನ್ನು ಸಾವಿತ್ರಮ್ಮ ಅವರಿಗೆ ಕೊಟ್ಟಿದ್ದಾರೆ.. ಈಗ ಸಾವಿತ್ರಮ್ಮ 5 ಲಕ್ಷ ರೂಪಾಯಿಯಲ್ಲಿ ಕೇವಲ 500 ರೂಪಾಯಿ ನೋಟನ್ನು ತೆಗೆದುಕೊಂಡು ತನ್ನ ಪರ್ಸ್ ನಲ್ಲಿ ಇಟ್ಟುಕೊಂಡು ಮಿಕ್ಕ 4 ಲಕ್ಷದ 99 ಸಾವಿರದ 500 ರೂಪಾಯಿಯನ್ನು ಮತ್ತೆ ತನ್ನ ಅಕೌಂಟ್ ಗೆ ಡೆಪಾಸಿಟ್ ಮಾಡಿ ಎಂದು ಸಾವಿತ್ರಮ್ಮ ಪುನಃ ಬ್ಯಾಂಕ್ ಕ್ಯಾಶಿಯರ್ ಗೆ ಆ ಹಣವನ್ನು ವಾಪಸ್ ಕೊಟ್ಟಳು ಈಗ ಕ್ಯಾಶಿಯರ್ ಗೆ ತನ್ನ ತಪ್ಪಿನ ಅರಿವಾಗುತ್ತದೆ.. ಕ್ಯಾಶಿಯರ್ ಗೆ ಬುದ್ದಿ ಬರುತ್ತೆ. ಏನಪ್ಪಾ ಇದು ಈ ವಯಸ್ಸಾದ ಅಜ್ಜಿ ನನ್ನ ಹತ್ತಿರಾನೇ ಇಷ್ಟೊಂದು ಟೆಕ್ನಿಕ್ ಮಾಡುತ್ತಿದ್ದಾಳೆ ಎಂದು ಕ್ಯಾಶಿಯರ್ ಮನಸ್ಸಿನಲ್ಲೇ ಅಂದುಕೊಂಡಳು. ಕೆಲವು ರೂಲ್ಸ್ ಗಳು ಎಷ್ಟೇ ಕಠಿಣವಾಗಿದ್ರು.. ಮನುಷ್ಯರಾದ ನಾವು ಕೆಲವು ಬಾರಿ ರೂಲ್ಸ್ ಗು ಮೀರಿ ಮಾನವೀಯತೆ ವರ್ತನೆ ತೋರಿಸಬೇಕು.. ಸಾವಿತ್ರಮ್ಮ ಕೇಳಿದ 500 ರೂಪಾಯಿಯನ್ನು ಮೊದಲೇ ಕೇಳಿದ್ದರೆ ಕ್ಯಾಶಿಯರ್ ಗೆ ಸಮಯ ವೇಸ್ಟ್ ಆಗುತ್ತಿರಲಿಲ್ಲ.. ನಿಮ್ಮ ಅನಿಸಿಕೆ ಏನು.